'ನಾನು ಐಪಿಎಸ್ ಆಫೀಸರ್ ಆಗಿದ್ದೇನೆ..' ಅಮ್ಮನ ತಬ್ಬಿಕೊಂಡು ಹೇಳುವಾಗಲೇ ವ್ಯಕ್ತಿಯನ್ನ ಎತ್ತಾಕಿಕೊಂಡು ಹೋದ ಪೊಲೀಸ್!
ಆರೋಪಿಯನ್ನು ಮಿಥಿಲೇಶ್ ಮಜಿ ಎಂದು ಗುರುತಿಸಲಾಗಿದೆ. ಐಪಿಎಸ್ ಅಧಿಕಾರಿಯ ಸಮವಸ್ತ್ರದ ಸಲುವಾಗಿ ಖೈರಾದ ಮಂಜೋ ಸಿಂಗ್ ಎಂಬಾತನಿಗೆ 2 ಲಕ್ಷ ರೂಪಾಯಿ ನೀಡಿದ್ದಾಗಿಯೂ ತಿಳಿಸಿದ್ದಾರೆ. ಪೊಲೀಸರು ಮಿಥಿಲೇಶ್‌ನನ್ನು ಬಂಧಿಸಲು ಹೋದಾಗ, 'ನಾನು ಐಪಿಎಸ್' ಎಂದೂ ಹೇಳಿದ್ದಾನೆ.
ಪಾಟ್ನಾ (ಸೆ.20): ಐಪಿಎಸ್ ಅಧಿಕಾರಿಯಂತೆ ನಟಿಸಿದ್ದ ಕಾರಣಕ್ಕಾಗಿ ಬಿಹಾರದ ಜಮುಯಿ ಜಿಲ್ಲೆಯ 18 ವರ್ಷದ ಯುವಕನನ್ನು ಪೊಲೀಸರು ಬಂದಿಸಿದ್ದಾರೆ. ಜಿಲ್ಲೆಯ ಸಿಕಂದರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಆರೋಪಿಯನ್ನು ಮಿಥಿಲೇಶ್ ಮಜಿ ಎಂದು ಗುರುತಿಸಲಾಗಿದೆ. ಐಪಿಎಸ್ ಅಧಿಕಾರಿಯ ಸಮವಸ್ತ್ರದ ಸಲುವಾಗಿ ಖೈರಾದ ಮಂಜೋ ಸಿಂಗ್ ಎಂಬಾತನಿಗೆ 2 ಲಕ್ಷ ರೂಪಾಯಿ ನೀಡಿದ್ದಾಗಿಯೂ ತಿಳಿಸಿದ್ದಾರೆ. ಪೊಲೀಸರು ಮಿಥಿಲೇಶ್‌ನನ್ನು ಬಂಧಿಸಲು ಹೋದಾಗ, 'ನಾನು ಐಪಿಎಸ್' ಎಂದೂ ಹೇಳಿದ್ದಾನೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಒ ಸತೀಶ್ ಸುಮನ್, “ನಕಲಿ ಐಪಿಎಸ್ ಅಧಿಕಾರಿಯಂತೆ ತಿರುಗಾಡುತ್ತಿದ್ದ ಯುವಕನನ್ನು ಸಿಕಂದರಾ ಪೊಲೀಸರು ಬಂಧಿಸಿದ್ದಾರೆ. ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಇದರಲ್ಲಿ ಭಾಗಿಯಾಗಿರುವ ಎಲ್ಲಾ ಗ್ಯಾಂಗ್ ಸದಸ್ಯರನ್ನು ಬಂಧಿಸಲಾಗುವುದು' ಎಂದಿದ್ದಾರೆ. ಸಮವಸ್ತ್ರದ ಜೊತೆಗೆ ಸಿಂಗ್ ನೀಡಿದ ಪಿಸ್ತೂಲ್ ಅನ್ನು ಮಾಂಝಿಯಿಂದ ವಶಪಡಿಸಿಕೊಳ್ಳಲಾಗಿದೆ.
“ಮನೋಜ್ ಸಿಂಗ್ ಅವರಿಗೆ ನಾನು 2 ಲಕ್ಷ ರೂಪಾಯಿ ಕೊಟ್ಟರೆ ನನಗೆ ಪೊಲೀಸ್ ಕೆಲಸ ಕೊಡಿಸುವುದಾಗಿ ಹೇಳಿದ್ದ. ಒಂದು ತಿಂಗಳ ಹಿಂದೆಯೇ ಅವರಿಗೆ ಹೆಚ್ಚಿನ ಮೊತ್ತ ನೀಡಿದ್ದೆ. ಖೈರಾ ಶಾಲೆಯ ಬಳಿ ನನಗೆ ಸಮವಸ್ತ್ರ ಮತ್ತು ಪಿಸ್ತೂಲ್ ಕೊಟ್ಟಿದ್ದರು. ಅಮ್ಮನಿಗೆ ವಿಷಯ ತಿಳಿಸಲು ಊರಿಗೆ ಬಂದಿದ್ದೆ. ಇದಾದ ಬಳಿಕ ಉಳಿದ 30,000 ರೂ.ಗಳನ್ನು ನೀಡಲು ಖೈರಾಗೆ ತೆರಳಿದ್ದೆ. ಈ ವೇಳೆ ಸಿಕಂದರಾ ಚೌಕ್‌ನಲ್ಲಿ ಪೊಲೀಸರು ನಮ್ಮನ್ನು ಹಿಡಿದರು' ಎಂದು ಮಿಥಿಲೇಶ್ ಮಾಂಝಿ ಹೇಳಿದ್ದಾನೆ.
Explainer: ಶೇ.90 ರಷ್ಟು ಹಿಂದೂಗಳೇ ಇರುವ ಸಂಪೂರ್ಣ ಗ್ರಾಮವೇ ತಮ್ಮದು ಎಂದ ವಕ್ಫ್ ಬೋರ್ಡ್, ಏನಿದು ಇಡೀ ವಿವಾದ!
ತಾನು ಐಪಿಎಸ್ ಅಧಿಕಾರಿಯಾಗಿದ್ದೇನೆ ಎಂದು ತನ್ನ ತಾಯಿಗೆ ತಿಳಿಸಲು ಪೊಲೀಸ್ ಯುನಿಫಾರ್ಮ್ ಮತ್ತು ಪಿಸ್ತೂಲ್‌ನೊಂದಿಗೆ ತನ್ನ ಸ್ವಗ್ರಾಮಕ್ಕೆ ಬಂದಿದ್ದ. ಈ ವೇಳೆ ಈತನನ್ನು ಬಂಧಿಸಲಾಗಿದೆ.ಬಂಧನಕ್ಕೂ ಮುನ್ನ ಸಿಕಂದರ ಚೌಕ್‌ನಲ್ಲಿ ಸುತ್ತಾಡುತ್ತಾ ತಾನು ಐಪಿಎಸ್ ಆಗಿರುವ ಬಗ್ಗೆ ಜನರಿಗೆ ಹೇಳುತ್ತಿದ್ದ. ಖುಷಿಯಲ್ಲಿ ಸಮೋಸ ಮತ್ತು ಇತರ ಆಹಾರವನ್ನು ಸೇವಿಸುತ್ತಿದ್ದ. ಈ ವೇಳೆ ಈತನ ಚಟುವಟಿಕೆಗಳ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ಯಾರೋ ಒಬ್ಬರು ಮಾಹಿತಿ ನೀಡಿದ್ದರು.
ಪೊಲೀಸ್ ಠಾಣೆಯಲ್ಲೇ ಕಳ್ಳತನ, ವಶಪಡಿಸಿಟ್ಟಿದ್ದ 16 ಮದ್ಯದ ಬಾಟಲಿ ಕದ್ದೊಯ್ದ 6 ಮಹಿಳೆಯರು!