ಮಹಾರಾಷ್ಟ್ರದ ಇಬ್ಬರು ಪೊಲೀಸ್ ಪೇದೆಗಳಾದ ಮನೋಹರ್ ಪಾಟೀಲ್ ಮತ್ತು ಕಿಶೋರ್ ಕಾರ್ಡಿಲೆ ಅವರ ಪ್ರಾಮಾಣಿಕತೆ ಇಂದು ಎಲ್ಲೆಡೆ ಚರ್ಚೆಯಾಗುತ್ತಿದೆ. 

ಮುಂಬೈ (ಜೂ. 01): ಮಹಾರಾಷ್ಟ್ರದ ಇಬ್ಬರು ಪೊಲೀಸ್ ಪೇದೆಗಳಾದ ಮನೋಹರ್ ಪಾಟೀಲ್ ಮತ್ತು ಕಿಶೋರ್ ಕಾರ್ಡಿಲೆ ಅವರ ಪ್ರಾಮಾಣಿಕತೆ ಇಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಇಬ್ಬರು ಕಾನ್ಸ್‌ಟೇಬಲ್‌ಗಳು ಮಾಡಿದ ಕೆಲಸ ಅಪರೂಪಕ್ಕೆ ಕಾಣಸಿಗುತ್ತದೆ, ಅದಕ್ಕಾಗಿಯೇ ಇಂದು ಈ ಇಬ್ಬರು ಕಾನ್‌ಸ್ಟೆಬಲ್‌ಗಳು ಚರ್ಚೆಯಲ್ಲಿದ್ದಾರೆ. ರಸ್ತೆ ಅಪಘಾತದಲ್ಲಿ ಮೃತಪಟ್ಟ ದಂಪತಿಗಳ ಸ್ಕೂಟರ್‌ನಿಂದ 4 ಲಕ್ಷ ರೂ.ಗಳನ್ನು ಸಿಕ್ಕಿದ್ದು ಅದನ್ನು ಇಬ್ಬರು ಪೊಲೀಸ್ ಪೇದೆಗಳು ದಂಪತಿಗಳ ಕುಟುಂಬಗಳಿಗೆ ಹಿಂದಿರುಗಿಸಿದ್ದಾರೆ. 

ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ದಂಪತಿ ಬಳಿ 4 ಲಕ್ಷ ರೂ. ಪತ್ತೆಯಾಗಿತ್ತು. ಬೀಟ್ ಕಾನ್‌ಸ್ಟೆಬಲ್ ಮನೋಹರ ಪಾಟೀಲ್ ಮತ್ತು ಕಿಶೋರ್ ಕಾರ್ಡಿಲೆ ಮಂಗಳವಾರ ಪೊಲೀಸ್ ಠಾಣೆಯಲ್ಲಿ ಈ ಹಣವನ್ನು ಜಮಾ ಮಾಡಿದ್ದರು. ಇದಾದ ಬಳಿಕ ಈ ಮೊತ್ತವನ್ನು ದಂಪತಿಗಳು ಮಗನಿಗೆ ನೀಡಲಾಗಿದೆ. ಈ ಮೂಲಕ ಇಬ್ಬರೂ ಪೊಲೀಸರು ಪ್ರಾಮಾಣಿಕತೆ ಮೆರೆದಿದ್ದಾರೆ. ಇದಕ್ಕಾಗಿ ಈ ಇಬ್ಬರೂ ಪೊಲೀಸ್ ಪೇದೆಗಳು ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಸಾವನ್ನಪ್ಪಿದ ದಂಪತಿ ಬಳಿ ₹4 ಲಕ್ಷ: ಮೃತರು ಹಿರಿಯ ನಾಗರಿಕ ದಂಪತಿಯಾಗಿದ್ದು, ಹಜ್ ಯಾತ್ರೆಗೆ ಹಣ ಪಡೆದು ಮನೆಗೆ ಮರಳುತ್ತಿದ್ದರು. ಮೇ 12 ರಂದು, ಅದೇ ಸಮಯದಲ್ಲಿ, ಇಬ್ಬರೂ ಮುಂಬ್ರಾ-ಪನ್ವೇಲ್ ರಸ್ತೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಬಲಿಯಾಗಿದ್ದರು, ಈ ಕಾರಣದಿಂದಾಗಿ ಅವರು ಸಾವನ್ನಪ್ಪಿದರು. 

ಇದನ್ನೂ ಓದಿ: ಮಾನವೀಯತೆ ಮೆರೆದ ಶಿವಮೊಗ್ಗ ಪೊಲೀಸ್ ಪೇದೆ: ವಿಡಿಯೋ ವೈರಲ್

ಈ ವೇಳೆ ಕರ್ತವ್ಯ ನಿರತರಾಗಿದ್ದ ಪಾಟೀಲ್ ಮತ್ತು ಕಾರ್ಡಿಲ್ ಅವರಿಗೆ ವೈರ್‌ಲೆಸ್ ಮೂಲಕ ಅಪಘಾತ ಸಂಭವಿಸಿದ ಸುದ್ದಿ ತಿಳಿಯಿತು, ತಕ್ಷಣ ಅವರು ಸ್ಥಳಕ್ಕೆ ಧಾವಿಸಿದರು. ಇಬ್ಬರೂ ಪೊಲೀಸರ ಗುರುತಿನ ಚೀಟಿಗಾಗಿ ಹುಡುಕಾಟ ನಡೆಸಿದಾಗ ಅವರ ಸ್ಕೂಟರ್‌ನಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ.

ಇಬ್ಬರೂ ಆ ಮೊತ್ತವನ್ನು ಮೃತರ ಸಂಬಂಧಿಕರಿಗೆ ಹಿಂದಿರುಗಿಸಿದ್ದಾರೆ. ಇಬ್ಬರೂ ಕಾನ್‌ಸ್ಟೆಬಲ್‌ಗಳು ಮೃತರ ಮೊತ್ತವನ್ನು ಸುರಕ್ಷಿತವಾಗಿರಿಸಲು ಮತ್ತು ಅವರ ಕುಟುಂಬಗಳಿಗೆ ಹಿಂತಿರುಗಿಸಿರುವಕ್ಕಾಗಿ ಪ್ರಶಂಸೆಗೆ ಒಳಗಾಗಿದ್ದಾರೆ. ಡಿಸಿಪಿ ಶಿವರಾಜ್ ಪಾಟೀಲ್ (ವಲಯ-2) ಕಾನ್ ಸ್ಟೆಬಲ್ ಪಾಟೀಲ್ ಹಾಗೂ ಕಾರ್ಡಿಲ್ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ. 

ಕಂಟೈನರ್ ನಿರ್ವಾಹಕ ಅರೆಸ್ಟ್:‌ ವಾಸ್ತವವಾಗಿ, ಸ್ಪೀಡ್ ಬ್ರೇಕರ್‌ಗೆ ಡಿಕ್ಕಿ ಹೊಡೆದ ನಂತರ ದಂಪತಿಗಳ ಸ್ಕೂಟರ್ ಸ್ಕಿಡ್ ಆಗಿದ್ದು, ಸ್ವಲ್ಪ ಸಮಯದ ನಂತರ ಹಿಂದಿನಿಂದ ಬಂದ ಕಂಟೈನರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿತ್ತು. ಕಂಟೈನರ್ ನಿರ್ವಾಹಕನನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ.

ಇದನ್ನೂ ಓದಿ: ಖಾಕಿಯೊಳಗಿನ ಮಾನವೀಯತೆ, ಇದು ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಸ್ಟೋರಿ