Asianet Suvarna News Asianet Suvarna News

ಸರಗಳ್ಳನ ಕ್ಯಾಚ್ ಹಾಕಿದ ಪೊಲೀಸ್ : ವೈರಲ್ ವಿಡಿಯೋ

ದೆಹಲಿ ಪೊಲೀಸ್ ಪೇದೆಯೊಬ್ಬರು ಸರಗಳ್ಳನನ್ನು ಬೆನ್ನಟ್ಟಿ ಹಿಡಿದ ರೋಚಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಪೇದೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

police knocks down a snatcher on road : Internet praises Delhi police constable for his heroic action akb
Author
First Published Nov 27, 2022, 4:39 PM IST

ದೆಹಲಿ: ದೆಹಲಿ ಪೊಲೀಸ್ ಪೇದೆಯೊಬ್ಬರು ಸರಗಳ್ಳನನ್ನು ಬೆನ್ನಟ್ಟಿ ಹಿಡಿದ ರೋಚಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಪೇದೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಸತ್ಯೇಂದ್ರ ಅವರು ಸರಗಳ್ಳನನ್ನು ಬೆನ್ನಟ್ಟಿ ಹಿಡಿದಿದ್ದು, ಅವರ ಕಾರ್ಯಕ್ಕೆ ಈಗ ಶ್ಲಾಘನೆ ವ್ಯಕ್ತವಾಗುತ್ತಿದೆ. 

ದೆಹಲಿ ಪೊಲೀಸರು ಈ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟ್ಟರ್(twitter) ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ತನ್ನ ಪ್ರಾಣದ ಹಂಗು ತೊರೆದು ಶಹಬಾದ್ ಡೈರಿ ಪೊಲೀಸ್ ಠಾಣೆಯ ಪೇದೆ ಸತ್ಯೇಂದ್ರ ಅವರು ಕಳ್ಳನನ್ನು ಹೆಡೆಮುರಿ ಕಟ್ಟಿದ್ದಾರೆ. ಈತನ ಬಂಧನದೊಂದಿಗೆ 11 ಪ್ರಕರಣಗಳು ಬೆಳಕಿಗೆ ಬಂದಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಹೀರೋ #HeroesOfDelhiPolice ಎಂಬ ಹ್ಯಾಷ್ ಟ್ಯಾಗ್ ನೀಡಲಾಗಿದೆ. 

ವಿಡಿಯೋದಲ್ಲಿ ಕಾಣಿಸುವಂತೆ ಬೈಕ್‌ನಲ್ಲಿ(Bike) ಆಗಮಿಸುತ್ತಿದ್ದ ಪೊಲೀಸ್ ಪೇದೆಗೆ ಅದೇ ದಾರಿಯಲ್ಲಿ ಎದುರಿನಿಂದ ಬೈಕ್‌ ಓಡಿಸಿಕೊಂಡು ಕಳ್ಳ ಬರುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಬೈಕ್ ಅಡ್ಡಹಾಕಿ ಆತನನ್ನು ಶರ್ಟ್‌ನಲ್ಲಿ ಹಿಡಿದಿದ್ದಾರೆ. ಇದರಿಂದ ಪೊಲೀಸ್ (Police) ಹಾಗೂ ಕಳ್ಳ (Thief) ಇಬ್ಬರ ಬೈಕ್‌ಗಳು ಕೆಳಗೆ ಬಿದ್ದಿವೆ. ಆದರೂ ಕಳ್ಳನ್ನು ಬಿಡದ ಪೊಲೀಸ್ ಆತನ್ನು ಹಿಡಿಯಲು ತನ್ನ ಜೀವದ ಹಂಗು ತೊರೆದು ಸಾಹಸ ಮಾಡಿದ್ದಾರೆ. ಈತನ ಬಂಧನದೊಂದಿಗೆ 11 ಪ್ರಕರಣಗಳ ಬೆಳಕಿಗೆ ಬಂದಿದ್ದು, ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಪೊಲೀಸರು ಟ್ವಿಟ್‌ನಲ್ಲಿ ತಿಳಿಸಿದ್ದಾರೆ. 

ಇನ್ನು ಈ ಘಟನೆಯ ವಿಡಿಯೋವನ್ನು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ನೆಟ್ಟಿಗರು ಈ ಪೊಲೀಸ್ ಪೇದೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದೊಂದು ಶ್ಲಾಘನೀಯ ಕಾರ್ಯ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆತನಿಗೆ ದೇವರು ಆಶೀರ್ವದಿಸಲಿ, ಆತನ ಹೀರೋಯಿಕ್ ಕಾರ್ಯಕ್ಕೆ ಧನ್ಯವಾದಗಳು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಸರಗಳ್ಳರ ಹಾವಳಿ ಮೆಟ್ರೋ ನಗರಗಳಲ್ಲಿ ಸಾಮಾನ್ಯ ಎನಿಸಿದ್ದು, ಬೈಕ್ ಏರಿ ಬರುವ ಕಳ್ಳರು ಗಾಳಿಗಿಂತಲೂ ವೇಗವಾಗಿ ಸಾಗಿ ಚಿನ್ನದ ಸರಗಳನ್ನು ಎಗರಿಸಿಕೊಂಡು ಪರಾರಿಯಾಗುತ್ತಾರೆ. ಒಂಟಿ ಮಹಿಳೆಯರು ವೃದ್ಧರನ್ನೇ ಇವರು ಟಾರ್ಗೆಟ್ ಮಾಡುತ್ತಿರುವುದರಿಂದ ಹಿರಿಜೀವಗಳು ಒಬ್ಬೊಬ್ಬರೇ ಸಂಚರಿಸುವುದು ಭಾರಿ ದುಸ್ತರವಾಗಿದೆ. ಅಲ್ಲದೇ ಈ ಸರಗಳ್ಳತನ ಪ್ರಕರಣಗಳು ಪೊಲೀಸರ ಪಾಲಿಗೂ ದೊಡ್ಡ ತಲೆ ನೋವಾಗಿ ಕಾಡಿದೆ. 

Bengaluru: ಸರಗಳ್ಳತನ ಮಾಡುತ್ತಿದ್ದ ಕೊಪ್ಪಳ ಗ್ಯಾಂಗ್‌ ಬಲೆಗೆ: ಇಬ್ಬರ ಬಂಧನ

ಶುಕ್ರವಾರ ದಿನದಂದೇ ವೃದ್ದೆಯರ ಟಾರ್ಗೆಟ್ ಮಾಡಿ ಸರಗಳ್ಳತನ 

ರಾಮನಗರ (Ramnagar) ಜಿಲ್ಲೆಯ ಜನರ ನಿದ್ರೆಗೆಡಿಸಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಕೊನೆಗೂ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕೆಲ ದಿನಗಳ ಹಿಂದೆ ಬಂಧಿಸಿದ್ದರು. ರಾಮನಗರ ತಾಲೂಕಿನ ಅಚ್ಚಲುದೊಡ್ಡಿ ಗ್ರಾಮದ ಮದನ್, ಶಿವಕುಮಾರ್, ರಾಮನಗರ ನಿವಾಸಿ ಮನು, ಬೆಂಗಳೂರು ಆರ್ ಆರ್ ನಗರದ ನಿವಾಸಿ ತೇಜಸ್ ಹಾಗೂ ಲೋಕೇಶ್ ಬಂಧಿತ ಆರೋಪಿಗಳು. ಅಂದಹಾಗೆ ಇವರು ಅಂತಿಂತಾ ಖತರ್ನಾಕ್ ಗಳಲ್ಲ. ಗ್ರಾಮೀಣ ಭಾಗದಲ್ಲಿ ಸಿಗುವ ವಯೋವೃದ್ದರ ಮಾಂಗಲ್ಯ ಸರ ಕಸಿದು ಪರಾರಿಯಾಗೋದು, ಒಂಟಿಯಾಗಿ ಸಿಗುವವರನ್ನ ಬೆದರಿಸಿ ರಾಬರಿ ಮಾಡೋದೆ ಇವರ ಕಾಯಕವಾಗಿತ್ತು. ಅಂದಹಾಗೆ ಈ ಗ್ಯಾಂಗ್ ಹತ್ತು ದಿನಗಳಲ್ಲಿ ನಾಲ್ಕು ಚೈನ್ ಸ್ನಾಚಿಂಗ್, ಒಂದು ರಾಬರಿ ಮಾಡಿದ್ದರು. 

ಝೋಮ್ಯಾಟೋ ಬಾಯ್ ವೇಷದಲ್ಲಿ Chain Snatchers ಬಲೆಗೆ ಕೆಡವಿದ ಪೊಲೀಸರು

 

Follow Us:
Download App:
  • android
  • ios