ಕಳೆದ ತಿಂಗಳು ಡಕಾಯಿತ ಎಂದು ಗುವಾಹಟಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ವ್ಯಕ್ತಿ ಡಕಾಯಿತ ಅಲ್ಲ. ಆತನೋರ್ವ ರೈತ ಎಂದು ತಿಳಿದು ಬಂದಿದೆ.
ಗುವಾಹಟಿ: ಕಳೆದ ತಿಂಗಳು ಡಕಾಯಿತ ಎಂದು ಗುವಾಹಟಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ವ್ಯಕ್ತಿ ಡಕಾಯಿತ ಅಲ್ಲ. ಆತನೋರ್ವ ರೈತ ಎಂದು ತಿಳಿದು ಬಂದಿದೆ. ಎನ್‌ಕೌಂಟರ್ ನಂತರ ಗುರುತಿಗೆ ಸಂಬಂಧಿಸಿದಂತೆ ಅನುಮಾನ ಗೊಂದಲ ಮೂಡಿದ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಸಿಎಂ ತನಿಖೆಗೆ ಆದೇಶಿಸಿದ್ದರು. ಅದರಂತೆ ಸಿಐಡಿ ತನಿಖೆ ನಡೆದಿದ್ದು, ಹತ್ಯೆಯಾದವ ಡಕಾಯಿತ ಕೆನರಾಮ್ ಬೊರೊ ಅಲಿಯಾಸ್ ಕೆನರಾಮ್ ಬಸುಮತರಿ (Kenaram Boro alias Kenaram Basumatary) ಅಲ್ಲ ಎಂದು ತಿಳಿದು ಬಂದಿದೆ. ಹತ್ಯೆಯಾದವ 40 ವರ್ಷದ ದಿಂಬೇಶ್ವರ್ ಮುಚಹರಿ (Dimbeswar Muchahary) ಎಂಬಾತನಾಗಿದ್ದು, ಆತನ ಕುಟುಂಬದವರ ಪ್ರಕಾರ ಆತನೋರ್ವ ಸಣ್ಣಮಟ್ಟಿನ ರೈತ ನಾಗಿದ್ದು, ಆತನಿಗೂ ಅಪರಾಧ ಪ್ರಕರಣಗಳ ಹಿನ್ನೆಲೆ ಇದೆ.
ಫೆ.24 ರಂದು ಉಡಲಗುರಿ (Udalguri)ಎಂಬಲ್ಲಿ ಈ ಎನ್‌ಕೌಂಟರ್ ನಡೆದಿತ್ತು. ಇಬ್ಬರು ತಮ್ಮತ್ತ ಗುಂಡು ಹಾರಿಸಿದರು ಈ ವೇಳೆ ಪ್ರತಿದಾಳಿಯಾಗಿ ನಡೆಸಿದ ಗುಂಡೇಟಿನಲ್ಲಿ ಓರ್ವ ಡಕಾಯಿತ ಸಾವಿಗೀಡಾಗಿದ್ದಾನೆ ಹಾಗೂ ಆತನ ಜೊತೆ ಇದ್ದವ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದರು. ಡಕಾಯಿತ ಕೆನರಾಮ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಆತನ ತಾಯಿ ಆತನನ್ನು ಗುರುತಿಸಿದ ನಂತರ ಆತನ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಅಲ್ಲದೇ ಕುಟುಂಬದವರು ಆತನ ಅಂತ್ಯಸಂಸ್ಕಾರ ನಡೆಸಿದ್ದರು.
ವಿಜಯಪುರ: ಧರ್ಮರಾಜ್ ನಕಲಿ ಎನ್‌ಕೌಂಟರ್ ಕೇಸ್, ಬೈರಗೊಂಡ ಸೇರಿ 16 ಜನ ಕೋರ್ಟ್‌ಗೆ ಹಾಜರ್
ಆದರೆ ಒಂದು ದಿನದ ನಂತರ ಮತ್ತೊಂದು ಕುಟುಂಬ ಕೊಲೆಯಾದವ ದಿಂಬೇಶ್ವರ್, ಡಕಾಯಿತ ಕೆನರಾಮ್ ಅಲ್ಲ ಎಂದು ಹೇಳಿದ್ದರು. ಅಲ್ಲದೇ ಡಿಎನ್‌ಎ ವಿಶ್ಲೇಷಣೆಯೂ ಈ ಅವಾಂತರವನ್ನು ಹೇಳಿತ್ತು. ಇದಾದ ಬಳಿಕ ಸಿಎಂ, ಗುಂಡಿನ ದಾಳಿ ನಡೆಸಿದವರ ಮೇಲೆ ಪೊಲೀಸರು ಶೂಟ್ ಮಾಡಬೇಕಾಗುತ್ತದೆ. ಆದರೆ ಅಧಿಕಾರಿಗಳಿಂದಲೂ ಅನಾಹುತವಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದರು.
ಯುಪಿಯಲ್ಲಿ ಮತ್ತೊಂದು ಎನ್‌ಕೌಂಟರ್: ಉಮೇಶ್ ಪಾಲ್‌ಗೆ ಮೊದಲು ಗುಂಡು ಹಾರಿಸಿದ್ದ ಆರೋಪಿ ಗುಂಡೇಟಿಗೆ ಬಲಿ
ಇದಾದ ಬಳಿಕ ಬಕ್ಷಾ (Baksa) ಜಿಲ್ಲೆಯಿಂದ ಆಗಮಿಸಿದ ಮತ್ತೊಂದು ಕುಟುಂಬ, ಉಡಲಗುರಿ ಎಸ್‌ಪಿ (Udalguri SP) ಯವರನ್ನು ಭೇಟಿ ಮಾಡಿ ಕೊಲೆಯಾದವ ದಿಂಬೇಶ್ವರ್ ಆಗಿದ್ದು, ಕೆನರಾಮ್ ಅಲ್ಲ ಎಂದು ಹೇಳಿದ್ದರು. ಇದಾದ ನಂತರ ಗೊಂದಲ ಮತ್ತಷ್ಟು ಹೆಚ್ಚಾಗಿತ್ತು. ನಂತರ ಪ್ರಕರಣದಲ್ಲಿ ಸಿಐಡಿ ಮಧ್ಯಪ್ರವೇಶಿಸಿ ಡಿಎನ್‌ಎ ಪರೀಕ್ಷೆ ಮಾಡಿದ್ದು, ಇದು ಪ್ರಕರಣಕ್ಕೆ ತಿರುವು ನೀಡಿತ್ತು. ಮೃತದೇಹವೂ ಡಕಾಯಿತ ಕೆನರಾಮ್‌ದು ಅಲ್ಲ. ದಿಂಬೇಶ್ವರ್ ಮಚಹರಿ ಎಂಬಾತನದ್ದು ಎಂಬುದನ್ನು ಇದು ಖಚಿತಪಡಿಸಿತು.
