ಮದುವೆಯ ಹೆಸರಲ್ಲಿ ವಂಚಿಸುತ್ತಿದ್ದ ಗ್ಯಾಂಗ್ ಬಲೆಗೆ 7 ಯುವಕರಿಗೆ ವಂಚಿಸಿದ ಕಿಲಾಡಿ ವಧು ಹರಿಯಾಣದ ಪಾಣಿಪತ್‌ನಲ್ಲಿ ಘಟನೆ
ಪಾಣಿಪತ್(ಹರಿಯಾಣ): ಮದುವೆಯಾಗುವುದಾಗಿ ಯುವಕರಿಗೆ ವಂಚಿಸುತ್ತಿದ್ದ ಗ್ಯಾಂಗ್‌ವೊಂದು ಪೊಲೀಸ್ ಬಲೆಗೆ ಬಿದ್ದಿದ್ದು, ಈ ಗ್ಯಾಂಗ್‌ನಲ್ಲಿ ವಧುವಿನ ಪಾತ್ರ ಮಾಡುತ್ತಿದ್ದ ಯುವತಿಯನ್ನು ಹರಿಯಾಣ ಪೊಲೀಸರು ಪಾಣಿಪತ್‌ನಲ್ಲಿ ಬಲೆಗೆ ಕೆಡವಿದ್ದಾರೆ. ಈಕೆ ಒಟ್ಟು ಏಳು ಮಂದಿಗೆ ವಿವಾಹವಾಗಿ ಬಳಿಕ ವಂಚಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ವಂಚನೆಗೊಳಗಾದ ವ್ಯಕ್ತಿ ಈ ಗ್ಯಾಂಗ್‌ನಿಂದ ಮೋಸಕ್ಕೊಳಗಾದ ಏಳನೇ ವ್ಯಕ್ತಿ ಎಂದು ತಿಳಿದು ಬಂದಿದೆ. ಈ ಗ್ಯಾಂಗ್ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿ ಮದುವೆ ಹೆಸರಿನಲ್ಲಿ ಜನರನ್ನು ವಂಚಿಸುತ್ತಿತ್ತು. ಮದುವೆಯ ದಿನ ರಾತ್ರಿ ವಧು ವರನಿಗೆ ಮತ್ತು ಬರಿಸುವ ಮಾತ್ರೆ ನೀಡಿ ಚಿನ್ನಾಭರಣ ಹಾಗೂ ನಗದು ಸಮೇತ ಪರಾರಿಯಾಗುತ್ತಿದ್ದಳು.
ಈ ಮಹಿಳೆ ಮದುವೆಯಾದ ನಾಲ್ಕನೇ ಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಮಹಿಳೆ ಏಳು ಬಾರಿ ಮದುವೆಯಾಗಿರುವುದು ಪತ್ತೆಯಾಗಿದೆ. ವರನಿಗೆ ಇನ್ನೇನು ಕೆಲವೇ ದಿನಗಳಲ್ಲಿ ವಿಷಯ ಗೊತ್ತಾಗಲಿದೆ ಎನ್ನುವಷ್ಟರಲ್ಲಿ ವಧು ಲಕ್ಷಗಟ್ಟಲೆ ಹಣದೊಂದಿಗೆ ಪರಾರಿಯಾಗುತ್ತಿದ್ದಳು.
ಕೋಟಿ ಕೋಟಿ ಡಿಫಾಸಿಟ್ ಮಾಡಿದ್ದ 73ರ ಅಜ್ಜನ ಬುಟ್ಟಿಗೆ ಹಾಕ್ಕೊಂಡ ಬ್ಯಾಂಕ್ ಆಂಟಿ!
ಏಳು ಬಾರಿ ನಿರಂತರ ಹೀಗೆ ಮಾಡಿದ ನಂತರ ಪೊಲೀಸರು ವಂಚಿಸಿದ ವಧು ಅಂಜು (ಹೆಸರು ಬದಲಾಯಿಸಲಾಗಿದೆ) ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ವಂಚಕ ಗ್ಯಾಂಗ್ ಸದಸ್ಯರಲ್ಲಿ ಮದುವೆ ಏಜೆಂಟ್ ಅಮಿತ್ ಅವರ ಪುತ್ರ ಬಿಜೇಂದ್ರ ಸಿಂಗ್ (Bijendra Singh), ಕರ್ನಾಲ್ (Karnal) ನಿವಾಸಿಗಳಾದ ಬಾಲ(Bala), ಗೌರವ್(Gaurav), ಜಲಾಲ್‌ಪುರ I(Jalalpur I) ನಿವಾಸಿ ನರೇಶ್(Naresh), ಜಿಲ್ಲಾ ನ್ಯಾಯಾಲಯದ ಕರ್ನಾಲ್ ನಿವಾಸಿಗಳಾದ ಸುರೇಶ್ ನಂದಲ್ (Suresh Nandal) ಮತ್ತು ಧರ್ಮೇಂದ್ರ ಖೇಡಾ (Dharmendra Kheda) ಸೇರಿದ್ದಾರೆ. ನೌಲ್ತಾ ನಿವಾಸಿ ಸಂತ್ರಸ್ತ ರಾಜೇಂದ್ರ(Rajendra),ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ತನಿಖೆ ನಡೆಸಲಾಗುತ್ತಿದೆ.
ಮಾರ್ಚ್ 13 ರಂದು, ಮಹಿಳೆಯ ಮೂರನೇ ಪತಿ ತನಗಾದ ವಂಚನೆಯ ಬಗ್ಗೆ ತಿಳಿದುಕೊಂಡು ಮದುವೆಯ ಎಲ್ಲಾ ಪತ್ರಗಳೊಂದಿಗೆ ನೌಲ್ತಾಗೆ ತಲುಪಿ ಮಹಿಳೆಯ ನಾಲ್ಕನೇ ಪತಿಯನ್ನು ಭೇಟಿಯಾಗಿದ್ದಾನೆ. ಆ ಸಂದರ್ಭದಲ್ಲಿ ಮಹಿಳೆ ಐದನೇ ಮದುವೆಯಾಗಿದ್ದಳು. ಇದೀಗ ಶನಿವಾರ ಏಳನೇ ಮದುವೆ ಮುನ್ನೆಲೆಗೆ ಬಂದಿದೆ. ಈ ವಧು ಇನ್ನೂ ಮದುವೆಯಾಗದ ಅಥವಾ ವಿಚ್ಛೇದನ ಪಡೆದವರನ್ನು ಗುರಿಯಾಗಿಸಿಕೊಂಡು ಈ ಕೃತ್ಯ ನಡೆಸುತ್ತಿದ್ದಳು.
ವಧು, ಪೋಷಕರು, ಪೂಜಾರಿ ಎಲ್ಲರೂ ನಕಲಿ.. ಮದುವೆ ಆಸೆಗೆ ಹಣ ಕಳೆದುಕೊಂಡ!
ಮದುವೆಯಾದ 10 ದಿನಗಳ ನಂತರ, ಈ ಮದುವೆಯಾದ ಗಂಡನ್ನು ವರದಕ್ಷಿಣೆ ಕಿರುಕುಳ ನೀಡುತ್ತಿದ್ದೀರಿ ಎಂದು ವಧುವಿನ ತಾಯಿಯ ಮನೆಯಿಂದ ಬೆದರಿಕೆಯೊಡ್ಡುವಂತೆ ಈ ಗ್ಯಾಂಗ್‌ನ ಆರೋಪಿಗಳು ನಾಟಕ ಶುರು ಮಾಡಲು ಪ್ರಾರಂಭಿಸಿದ್ದರು. ಹೀಗೆ ಈ ಮೂಲಕ ಮದುವೆಯಾದಾತನಿಂದ ಹಣ ವಸೂಲಿ ಮಾಡುತ್ತಿದ್ದಳು. ವಂಚನೆ ವೇಳೆ ವಧು ತನಗೆ ಪೋಷಕರಿಲ್ಲ ಮತ್ತು ತನ್ನ ಮದುವೆಯನ್ನು ಯಾರೋ ಮಧ್ಯವರ್ತಿ ಮಾಡಿಸಿದ್ದಾರೆ ಎಂದು ಸಂತ್ರಸ್ತೆಯ ನಾಟಕ ಮಾಡುತ್ತಿದ್ದಳು. ಮೂವರು ಮಹಿಳೆಯರು ಸೇರಿದಂತೆ ಒಟ್ಟು ಏಳು ಮಂದಿ ಈ ಗ್ಯಾಂಗ್‌ನಲ್ಲಿ ಭಾಗಿಯಾಗಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಈ ಮದುವೆ ವಂಚನೆ ಬಲಿಪಶುವಾಗಿದ್ದ ನೌಲ್ತಾ ನಿವಾಸಿ ಸಂತ್ರಸ್ತ ರಾಜೇಂದ್ರ ಕುಮಾರ್ (Rajendra Kumar), ಪ್ರಕಾರ ಮೋಸಗಾತಿ ವಧು ಅಂಜು ಅವರ ಮೊದಲ ವಿವಾಹವು ಖೇರಿ ಕರಮ್ (Khedi Karam)ನಿವಾಸಿ ಸತೀಶ್ (Satish)ಎಂಬಾತನೊಂದಿಗೆ ಆಗಿತ್ತು. ಆತನಿಗೆ ಮೊದಲ ಮದುವೆಯಲ್ಲಿ ಒಂದು ಮಗುವಿತ್ತು. ಜನವರಿ 1 ರಂದು ರಾಜಸ್ಥಾನದಲ್ಲಿ (Rajasthan) ಎರಡನೇ ಮದುವೆ ನಡೆಯಿತು. ವಂಚಕಿ ವಧು ಅಂಜು ತನ್ನ ಆಧಾರ್ ಕಾರ್ಡ್‌ನಲ್ಲಿ ತನ್ನ ತಂದೆಯ ಹೆಸರನ್ನು ಬದಲಾಯಿಸಿದ್ದಳು. ಹೀಗೆ ಮೂರನೇ ಮದುವೆ ಫೆಬ್ರವರಿ 15 ರಂದು ಸುನಿಲ್ ಬುಟಾನಾ (Sunil Butana) ಅವರೊಂದಿಗೆ ನಡೆಯಿತು. ನಾಲ್ಕನೇ ವಿವಾಹವು ಫೆಬ್ರವರಿ 21 ರಂದು ನೌಲ್ತಾ ನಿವಾಸಿ ರಾಜೇಂದ್ರ (Rajendra)ಅವರೊಂದಿಗೆ ಮತ್ತು ಐದನೇ ವಿವಾಹವು ಕುಟಾನಾ ನಿವಾಸಿ ಗೌರವ್ (Gaurav)ಅವರೊಂದಿಗೆ ನಡೆದಿತ್ತು. ಆರನೇ ಮದುವೆಯನ್ನು ಕರ್ನಾಲ್‌ನ ಸಂದೀಪ್‌ನೊಂದಿಗೆ (Sandeep) ನಡೆಸಲಾಗಿದ್ದು, ಇದೀಗ ಬಧವಾ ರಾಮ್ ಕಾಲೋನಿಯ (Badhawa Ram Colony)ನಿವಾಸಿ ಸುಮಿತ್ (Sumit) ಏಳನೇ ವರನಾಗಿ ಹೊರಬಂದು ವಂಚನೆ ದೂರು ದಾಖಲಿಸಿದ್ದಾರೆ.
