ಕೋಟಿ ಕೋಟಿ ಡಿಫಾಸಿಟ್ ಮಾಡಿದ್ದ 73ರ ಅಜ್ಜನ ಬುಟ್ಟಿಗೆ ಹಾಕ್ಕೊಂಡ ಬ್ಯಾಂಕ್ ಆಂಟಿ!
ಮದುವೆಯಾಗುತ್ತೇನೆ ಎಂದು ನಂಬಿಸಿ ಅಜ್ಜನಿಗೆ ಮಹಾ ಮೋಸ/ ಒಂದು ಕೋಟಿ ರೂ. ವಂಚನೆ/ ಹಣ ಖಾತೆಗೆ ಹಾಕಿಸಿಕೊಂಡು ಪರಾರಿ/ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ
ಮುಂಬೈ (ಮಾ. 08) ಇಳಿ ವಯಸ್ಸಿನಲ್ಲಿ ನೆರವಿಗೆ ಸಿಕ್ಕಳು ಎಂದು ಆ 73 ವರ್ಷದ ವ್ಯಕ್ತಿ ನೆಮ್ಮದಿಯಿಂದ ಇದ್ದರು. ಮದುವೆಯಾಗುತ್ತೇನೆ ಎಂದು ನಂಬಿಸಿದ್ದಳು. ಆದರೆ ಈಗ ಮಹಾನ್ ವಂಚನೆಗೆ ವೃದ್ಧ ಒಳಗಾಗಬೇಕಾಗಿದೆ.
ಕೋಟ್ಯಧೀಶ ಜೆರೋನ್ ಡಿಸೋಜಾ ಮಹಿಳೆಯಿಂದ ಮೋಸಹೋಗಿದ್ದಾರೆ. ಶಾಲಿನಿ ಸಿಂಗ್ ಎಂಬ ಮಹಿಳೆಯ ಪರಿಚಯವಾಗಿ ಅದು ಸ್ನೇಹ ಮತ್ತು ಸಲುಗೆಗೆ ತಿರುಗಿದೆ. ನನಗೆ ಮದುವೆಯಾಗಿಲ್ಲ..ನಿಮ್ಮನ್ನೆ ಮದುವೆಯಾಗುತ್ತೆನೆ ಎಂದು ಆಕೆ ಆಸೆ ಹುಟ್ಟಿಸಿದ್ದಾಳೆ. ಇದನ್ನು ನಂಬಿದ ವೃದ್ಧ ತನ್ನ ಎಲ್ಲ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಮುಂಬೈನ ಅಂಧೇರಿಯಿಂದ ಘಟನೆ ವರದಿಯಾಗಿದೆ. ಕಳೆದ ಡಿಸೆಂಬರ್ ನಲ್ಲಿಯೇ ಪ್ರಕರಣ ನಡೆದಿದ್ದು ಅಜ್ಜ ಇದೀಗ ದೂರು ನೀಡಿದ್ದಾರೆ.
ಹೀಗೂ ಮಾಡ್ತಾರೆ ಕ್ರೆಡಿಟ್ ಕಾರ್ಡ್ ವಂಚನೆ
ಸುಂದರಿ ಮಹಿಳೆ ಮದುವೆಯಾಗುತ್ತೇನೆ ಎಂದು ಹೇಳಿದ್ದನ್ನು ನಂಬಿದ ಅಜ್ಜ ಆಕೆ ಕೇಳಿದ ಹಾಗೆ ಹಣ ನೀಡಿದ್ದಾನೆ . ಮಹಿಳೆ ಕೇಳಿದ ಹಾಗೆ ಹಣ ನೀಡಿದ್ದ ಮೊತ್ತ ಬರೋಬ್ಬರಿ 1.3 ಕೋಟಿ!
2010 ರಲ್ಲಿ ಪಿತ್ರಾಜಿರ್ತವಾಗಿ ಬಂದಿದ್ದ ದೊಡ್ಡ ಫ್ಲಾಟ್ ಒಂದನ್ನು ಡಿಸೋಜಾ ಮಾರಿದ್ದರು. ಅದರಿಂದ ಸುಮಾರು ಎರಡು ಕೋಟಿ ರೂ. ಹಣ ಬಂದಿತ್ತು. ಇದನ್ನು ಫಿಕ್ಸೆಡ್ ಡಿಫಾಸಿಟ್ ನಲ್ಲಿ ಇಟ್ಟು ಅಜ್ಜ ಜೀವನ ಮಾಡುತ್ತಿದ್ದರು. ಅಜ್ಜ ಹಣ ಇಟ್ಟ ಖಾಸಗಿ ಬ್ಯಾಂಕ್ ನಲ್ಲಿಯೇ ಮಹಿಳೆ ಕೆಲಸ ಮಾಡುತ್ತಿದ್ದಳು .
2019 ರಲ್ಲಿ ಅಜ್ಜ ಈ ಹಣದ ದೊಡ್ಡ ಮೊತ್ತದ ಬಡ್ಡಿಯನ್ನು ಬ್ಯಾಂಕ್ ನಿಂದ ಪಡೆದುಕೊಂಡಿದ್ದಾರೆ. ಈ ವೇಳೆ ಸಿಂಗ್ ಅಜ್ಜನಿಗೆ ಮತ್ತಷ್ಟು ಹತ್ತಿರವಾಗಿದ್ದಾಳೆ. ಒಟ್ಟಿಗೆ ಓಡಾಡುವುದು, ಡಿನ್ನರ್ ಎಲ್ಲವೂ ಶುರುವಾಗಿದೆ.
ಅಜ್ಜನನ್ನು ಪುಸಲಾಯಿಸಿ ಸಾಕಷ್ಟು ಹಣವನ್ನು ಮಹಿಳೆ ತನ್ನ ಖಾತೆಗೆ ಹಾಕಿಸಿಕೊಂಡು ಅವಕಾಶ ನೋಡಿ ನಾಪತ್ತೆಯಾದ್ದಾಳೆ. ಅಜ್ಜ ಮಹಿಳೆ ಸಂಪರ್ಕ ಮಾಡಲು ನಿರಂತರ ಯತ್ನ ಮಾಡಿದ್ದು ಸಾಧ್ಯವಿಲ್ಲ. ಮೋಸ ಹೋಗಿರುವುದು ಗೊತ್ತಾಗಿ ಪೊಲೀಸ್ ದೂರು ನೀಡಿದ್ದಾರೆ.