ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಜೊತೆ ಸಂಪರ್ಕ ಹೊಂದಿದ್ದಾಳೆ ಎಂದು ಆರೋಪಿಸಲಾಗಿರುವ ಮಹಿಳೆಯೊಬ್ಬಳು ಕೋರ್ಟ್ ಕಲಾಪವನ್ನು ವಿಡಿಯೋ ಮಾಡುವ ಸಮಯದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದೋರ್‌: ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಜೊತೆ ಸಂಪರ್ಕ ಹೊಂದಿದ್ದಾಳೆ ಎಂದು ಆರೋಪಿಸಲಾಗಿರುವ ಮಹಿಳೆಯೊಬ್ಬಳು ಕೋರ್ಟ್ ಕಲಾಪವನ್ನು ವಿಡಿಯೋ ಮಾಡುವ ಸಮಯದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಧ್ಯಪ್ರದೇಶದ ಇಂದೋರ್‌ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಕಲಾಪವನ್ನು ವಿಡಿಯೋ ರೆಕಾರ್ಡ್‌ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಮಹಿಳೆಯನ್ನು ಸೋನು ಮನ್ಸೂರಿ (30) ಎಂದು ಗುರುತಿಸಲಾಗಿದ್ದು, ಕೋರ್ಟ್‌ ಕಲಾಪದ ವಿಡಿಯೋಗಳನ್ನು ಪಿಎಫ್‌ಐ ಕಳಿಸುವುದಕ್ಕಾಗಿ 3 ಲಕ್ಷ ರು. ಹಣ ಪಡೆದಿದ್ದಳು. ಕೋರ್ಟ್‌ನಲ್ಲಿ ಮಹಿಳೆಯ ಅನುಮಾನಾಸ್ಪದ ನಡೆಯನ್ನು ಗಮನಿಸಿದ ವಕೀಲರು ಮಹಿಳೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ: ಹಿಂದೂ ಮುಖಂಡರ ಹತ್ಯೆಗೆ ಭಾರೀ ಸಿದ್ಧತೆ ಮಾಡಿಕೊಂಡಿದ್ದ ಪಿಎಫ್‌ಐ

ಹಿಂದೂಗಳಲ್ಲಿ ಆತಂಕ ಹುಟ್ಟಿಸಲು PFI ನಿಂದಲೇ ಪ್ರವೀಣ್ ನೆಟ್ಟಾರು‌ ಹತ್ಯೆ: ಎನ್ಐಎ ಆರೋಪ ಪಟ್ಟಿಯಲ್ಲಿ ಉಲ್ಲೇಖ!