PM Narendra Modi: ನಾಳೆ ಪ್ರಧಾನಿ ಮೋದಿ ಮೇಘಾಲಯ, ತ್ರಿಪುರ ಭೇಟಿ

ಪ್ರಧಾನಿ ನರೇಂದ್ರ ಮೋದಿ ಭಾನುವಾರ ಈಶಾನ್ಯದ ರಾಜ್ಯಗಳಾದ ತ್ರಿಪುರ ಹಾಗೂ ಮೇಘಾಲಯಕ್ಕೆ ಭೇಟಿ ನೀಡಲಿದ್ದಾರೆ. ಇಲ್ಲಿ ಒಟ್ಟು 6800 ಕೋಟಿ ರೂಪಾಯಿಗಳ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

PM to visit Meghalaya and Tripura on 18th December san

ನವದೆಹಲಿ (ಡಿ. 17): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಸೆಂಬರ್ 18 ರಂದು ಮೇಘಾಲಯ ಮತ್ತು ತ್ರಿಪುರಾಕ್ಕೆ ಭೇಟಿ ನೀಡಲಿದ್ದಾರೆ. ಶಿಲ್ಲಾಂಗ್‌ನಲ್ಲಿ ಪ್ರಧಾನಿ ಈಶಾನ್ಯ ಮಂಡಳಿಯ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ ಶಿಲ್ಲಾಂಗ್‌ನ ಸ್ಟೇಟ್ ಕನ್ವೆನ್ಷನ್ ಸೆಂಟರ್‌ನಲ್ಲಿ ಈಶಾನ್ಯ ಕೌನ್ಸಿಲ್‌ನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆ ಬಳಿಕ ಶಿಲ್ಲಾಂಗ್‌ನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಅನೇಕ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಮತ್ತು ಅಡಿಪಾಯ ಹಾಕಲಿದ್ದಾರೆ. ಆ ಬಳಿಕ ತ್ರಿಪುರಾದ ಅಗರ್ತಲಾಗೆ ಪ್ರಯಾಣ ಬೆಳೆಸಲಿದ್ದು, ಮಧ್ಯಾಹ್ನದ ವೇಳೆಗೆ ಅಲ್ಲಿಯ ಸಾರ್ವಜನಿಕ ಸಮಾರಂಭದಲ್ಲಿ ವಿವಿಧ ಪ್ರಮುಖ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ.

ಈಶಾನ್ಯ ಕೌನ್ಸಿಲ್ (ಎನ್‌ಇಸಿ) ಸಭೆಯಲ್ಲಿ ಪ್ರಧಾನಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಕೌನ್ಸಿಲ್ ಅನ್ನು ಔಪಚಾರಿಕವಾಗಿ 1972ರ ನವೆಂಬರ್‌ 7 ರಂದು ಉದ್ಘಾಟಿಸಲಾಗಿತ್ತು. NEC ಈಶಾನ್ಯ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಮತ್ತು ಪ್ರದೇಶದ ಎಲ್ಲಾ ರಾಜ್ಯಗಳಾದ್ಯಂತ ವಿವಿಧ ಮೂಲಸೌಕರ್ಯ ಯೋಜನೆಗಳು  ಮತ್ತು ಇತರ ಅಭಿವೃದ್ಧಿ ಉಪಕ್ರಮಗಳಿಗೆ ಬೆಂಬಲವನ್ನು ನೀಡಿದೆ. ವಿಶೇಷವಾಗಿ ಶಿಕ್ಷಣ, ಆರೋಗ್ಯ, ಕ್ರೀಡೆ, ಜಲಸಂಪನ್ಮೂಲಗಳು, ಕೃಷಿ, ಪ್ರವಾಸೋದ್ಯಮ, ಉದ್ಯಮ ಸೇರಿದಂತೆ ಕ್ಷೇತ್ರಗಳ ನಿರ್ಣಾಯಕ ಅಂತರ ಪ್ರದೇಶಗಳಲ್ಲಿ ಇದು ಮೌಲ್ಯಯುತವಾದ ಬಂಡವಾಳ ಮತ್ತು ಸಾಮಾಜಿಕ ಮೂಲಸೌಕರ್ಯವನ್ನು ರಚಿಸಲು ಸಹಾಯ ಮಾಡಿದೆ, 

ಸಾರ್ವಜನಿಕ ಸಮಾರಂಭದಲ್ಲಿ,ಸುಮಾರು ರೂ. 2450 ಕೋಟಿ ರೂಪಾಯಿ ಯೋಜನೆಯನ್ನು ಮೋದಿ ಅನಾವರಣ ಮಾಡಲಿದ್ದಾರೆ. ಈ ಪ್ರದೇಶದಲ್ಲಿ ಟೆಲಿಕಾಂ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನವಾಗಿ ಪ್ರಧಾನಮಂತ್ರಿ ಅವರು 4G ಮೊಬೈಲ್ ಟವರ್‌ಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಇದರಲ್ಲಿ 320 ಟವರ್‌ಗಳು ಪೂರ್ಣಗೊಂಡಿದ್ದರೆ, 890 ಟವರ್‌ಗಳು ನಿರ್ಮಾಣ ಹಂತದಲ್ಲಿದೆ. ಆ ಬಳಿಕ ಉಮ್ಸಾವ್ಲಿಯಲ್ಲಿ ಐಐಎಂ ಶಿಲ್ಲಾಂಗ್‌ನ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಲಿದ್ದಾರೆ. ಶಿಲ್ಲಾಂಗ್ - ಡೀಂಗ್‌ಪಾಸೋಹ್ ರಸ್ತೆಯನ್ನು ಆ ಬಳಿಕ ಉದ್ಘಾಟಿಸಲಿದ್ದಾರೆ, ಇದು ಹೊಸ ಶಿಲ್ಲಾಂಗ್ ಸ್ಯಾಟಲೈಟ್‌ ಟೌನ್‌ಶಿಪ್‌ಗೆ ಉತ್ತಮ ಸಂಪರ್ಕವನ್ನು ಒದಗಿಸುವುದು ಮಾತ್ರವಲ್ಲದೆ, ಟ್ರಾಫಿಕ್‌ ಕಿರಿಕಿರಿಯನ್ನು ತಪ್ಪಿಸುತ್ತದೆ. ಅದರೊಂದಿಗೆ ಮೇಘಾಲಯ, ಮಣಿಪುರ ಮತ್ತು ಅರುಣಾಚಲ ಪ್ರದೇಶ ಮೂರು ರಾಜ್ಯಗಳಾದ್ಯಂತ ನಾಲ್ಕು ಇತರ ರಸ್ತೆ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. 

ಅವರು ಅಣಬೆ ಮೊಟ್ಟೆಯ ಉತ್ಪಾದನೆಯನ್ನು ಹೆಚ್ಚಿಸಲು ಮೇಘಾಲಯದ ಅಣಬೆ ಅಭಿವೃದ್ಧಿ ಕೇಂದ್ರದಲ್ಲಿ ಸ್ಪಾನ್ ಪ್ರಯೋಗಾಲಯವನ್ನು ಉದ್ಘಾಟಿಸಲಿದ್ದಾರೆ ಮತ್ತು ರೈತರು ಮತ್ತು ಉದ್ಯಮಿಗಳಿಗೆ ಕೌಶಲ್ಯ ತರಬೇತಿಯನ್ನು ನೀಡಲಿದ್ದಾರೆ. ಸಾಮರ್ಥ್ಯ ವೃದ್ಧಿ ಮತ್ತು ತಂತ್ರಜ್ಞಾನದ ಉನ್ನತೀಕರಣದ ಮೂಲಕ ಜೇನುಸಾಕಣೆ ಮಾಡುವ ರೈತರ ಜೀವನೋಪಾಯವನ್ನು ಸುಧಾರಿಸಲು ಮೇಘಾಲಯದಲ್ಲಿ ಸಮಗ್ರ ಜೇನುಸಾಕಣೆ ಅಭಿವೃದ್ಧಿ ಕೇಂದ್ರವನ್ನು ಅವರು ಉದ್ಘಾಟಿಸಲಿದ್ದಾರೆ. ಇದಲ್ಲದೆ, ಅವರು ಮಿಜೋರಾಂ, ಮಣಿಪುರ, ತ್ರಿಪುರ ಮತ್ತು ಅಸ್ಸಾಂನಲ್ಲಿ 21 ಹಿಂದಿ ಗ್ರಂಥಾಲಯಗಳನ್ನು ಉದ್ಘಾಟಿಸಲಿದ್ದಾರೆ.

ಪ್ರಧಾನಮಂತ್ರಿಯವರು ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳಾದ್ಯಂತ ಆರು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವರು ತುರಾ ಮತ್ತು ಶಿಲ್ಲಾಂಗ್ ಟೆಕ್ನಾಲಜಿ ಪಾರ್ಕ್ ಹಂತ-II ನಲ್ಲಿ ಇಂಟಿಗ್ರೇಟೆಡ್ ಹಾಸ್ಪಿಟಾಲಿಟಿ ಮತ್ತು ಕನ್ವೆನ್ಷನ್ ಸೆಂಟರ್‌ನ ಅಡಿಪಾಯವನ್ನು ಹಾಕಲಿದ್ದಾರೆ. ಟೆಕ್ನಾಲಜಿ ಪಾರ್ಕ್ ಹಂತ-II ಸುಮಾರು 1.5 ಲಕ್ಷ ಚದರ ಅಡಿಗಳಷ್ಟು ಬಿಲ್ಟ್-ಅಪ್ ಪ್ರದೇಶವನ್ನು ಹೊಂದಿರುತ್ತದೆ. ಇದು 3000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇಂಟಿಗ್ರೇಟೆಡ್ ಹಾಸ್ಪಿಟಾಲಿಟಿ ಮತ್ತು ಕನ್ವೆನ್ಷನ್ ಸೆಂಟರ್ ಕನ್ವೆನ್ಷನ್ ಹಬ್, ಅತಿಥಿ ಕೊಠಡಿಗಳು, ಫುಡ್ ಕೋರ್ಟ್ ಇತ್ಯಾದಿಗಳನ್ನು ಹೊಂದಿರುತ್ತದೆ.

ಅಸ್ಸಾಂ, ಮೇಘಾಲಯ ಸಂಘರ್ಷ: ಅಸ್ಸಾಂನಲ್ಲಿ ಅರಣ್ಯ ಕಚೇರಿ ಧ್ವಂಸ

ತ್ರಿಪುರದಲ್ಲಿ ಪ್ರಧಾನಿ 4350 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಪ್ರತಿಯೊಬ್ಬರಿಗೂ ಸ್ವಂತ ಮನೆ ನೀಡುವ ನಿಟ್ಟಿನಲ್ಲಿ ಸರ್ಕಾರ ಗಮನ ನೀಡಿದೆ. ಇದರ ಪ್ರಮುಖ ಹೆಜ್ಜೆಯಾಗಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ - ನಗರ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ - ಗ್ರಾಮೀಣ ಫಲಾನುಭವಿಗಳಿಗಾಗಿ ಪ್ರಧಾನ ಮಂತ್ರಿ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 3400 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾದ ಈ ಮನೆಗಳು 2 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಸೇರಲಿದೆ.

ಅಸ್ಸಾಂ-ಮೇಘಾಲಯ ಸಂಘರ್ಷಕ್ಕೆ 6 ಜನ ಬಲಿ, ಇಂಟರ್ನೆಟ್‌ ಬಂದ್‌

ರಸ್ತೆ ಸಂಪರ್ಕವನ್ನು ಸುಧಾರಿಸುವತ್ತ ಗಮನಹರಿಸುವುದರೊಂದಿಗೆ, ಅಗರ್ತಲಾ ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಅಗರ್ತಲಾ ಬೈಪಾಸ್ (ಖಯೇರ್‌ಪುರ್ - ಅಮ್ತಾಲಿ) NH-08 ನ ಅಗಲೀಕರಣದ ಯೋಜನೆಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಅವರು PMGSY III (ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ) ಅಡಿಯಲ್ಲಿ 230 ಕಿಮೀ ಉದ್ದದ 32 ರಸ್ತೆಗಳಿಗೆ ಮತ್ತು 540 ಕಿಮೀ ದೂರದ 112 ರಸ್ತೆಗಳ ಸುಧಾರಣೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಆನಂದನಗರ ಮತ್ತು ಅಗರ್ತಲಾ ಸರ್ಕಾರಿ ದಂತ ಕಾಲೇಜಿನಲ್ಲಿ ಸ್ಟೇಟ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಅನ್ನು ಉದ್ಘಾಟಿಸಲಿದ್ದಾರೆ.

Latest Videos
Follow Us:
Download App:
  • android
  • ios