ಅಸ್ಸಾಂ, ಮೇಘಾಲಯ ಸಂಘರ್ಷ: ಅಸ್ಸಾಂನಲ್ಲಿ ಅರಣ್ಯ ಕಚೇರಿ ಧ್ವಂಸ

ಅಸ್ಸಾಂ, ಮೇಘಾಲಯದಲ್ಲಿ ಗಡಿಯಲ್ಲಿ ಮಂಗಳವಾರ ಆರಂಭವಾದ ಸಂಘರ್ಷ ಬುಧವಾರವೂ ಮುಂದುವರೆದಿದೆ. ಮೇಘಾಲಯದ ಗ್ರಾಮಸ್ಥರ ಗುಂಪೊಂದು ಅಸ್ಸಾಂನ ಪಶ್ಚಿಮ ಕರ್ಬಿ ಅಂಗ್ಲಾಂಗ್‌ನಲ್ಲಿರುವ ಅರಣ್ಯ ಕಚೇರಿಯನ್ನು ಧ್ವಂಸಗೊಳಿಸಿ ಅದಕ್ಕೆ ಬೆಂಕಿ ಹಚ್ಚಿರುವ ಘಟನೆ ಬುಧವಾರ ನಡೆದಿದೆ.

Assam, Meghalaya conflict, Forest office vandalized in Assam akb

ಗುವಾಹಟಿ: ಅಸ್ಸಾಂ, ಮೇಘಾಲಯದಲ್ಲಿ ಗಡಿಯಲ್ಲಿ ಮಂಗಳವಾರ ಆರಂಭವಾದ ಸಂಘರ್ಷ ಬುಧವಾರವೂ ಮುಂದುವರೆದಿದೆ. ಮೇಘಾಲಯದ ಗ್ರಾಮಸ್ಥರ ಗುಂಪೊಂದು ಅಸ್ಸಾಂನ ಪಶ್ಚಿಮ ಕರ್ಬಿ ಅಂಗ್ಲಾಂಗ್‌ನಲ್ಲಿರುವ ಅರಣ್ಯ ಕಚೇರಿಯನ್ನು ಧ್ವಂಸಗೊಳಿಸಿ ಅದಕ್ಕೆ ಬೆಂಕಿ ಹಚ್ಚಿರುವ ಘಟನೆ ಬುಧವಾರ ನಡೆದಿದೆ. ಘಟನೆ ಬಳಿಕ ಗಡಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಜನರಿಗೆ ಮೇಘಾಲಯಕ್ಕೆ ತೆರಳದಂತೆ ಭದ್ರತಾ ಪಡೆಗಳು ಎಚ್ಚರಿಕೆ ನೀಡುತ್ತಿವೆ.

ಅಕ್ರಮವಾಗಿ ಮರಮುಟ್ಟನ್ನು ಮೇಘಾಲಯಕ್ಕೆ ಸಾಗಿಸಲಾಗುತ್ತಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಅಸ್ಸಾಂ ಪೊಲೀಸ್‌ ಅಧಿಕಾರಿಗಳು (Assam police officers) ಟ್ರಕ್‌ವೊಂದನ್ನು ತಡೆದು ಡ್ರೈವರ್‌ ಸೇರಿದಂತೆ ಇನ್ನಿಬ್ಬರನ್ನು ವಶಕ್ಕೆ ಪಡೆದರು. ವಶಕ್ಕೆ ಪಡೆದ ಡ್ರೈವರ್‌, ಜೊತೆಗಿದ್ದವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಮೇಘಾಲಯದ (Meghalaya)  ಜನರು ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಗುಂಡು ಹಾರಿಸಿದ್ದು, ಈ ಗಲಾಟೆಯಲ್ಲಿ ಒಬ್ಬ ಫಾರೆಸ್ಟ್‌ ಗಾರ್ಡ್‌ ಸೇರಿ 6 ಜನರು ಮೃತಪಟ್ಟಿದ್ದರು. ಘಟನೆ ಬಳಿಕ ಮಂಗಳವಾರ ಮೇಘಾಲಯ ರಾಜಧಾನಿ ಶಿಲ್ಲಾಂಗ್‌ನಲ್ಲಿ (Shillong) ಕಾರ್‌ವೊಂದಕ್ಕೆ ಬೆಂಕಿ ಹಚ್ಚಲಾಗಿತ್ತು.

ಅಸ್ಸಾಂ-ಮೇಘಾಲಯ ಸಂಘರ್ಷಕ್ಕೆ 6 ಜನ ಬಲಿ, ಇಂಟರ್ನೆಟ್‌ ಬಂದ್‌

Historic Agreement ಏನಿದು 50 ವರ್ಷ ಹಳೆಯ ಅಸ್ಸಾಂ ಮೇಘಾಲಯ ಗಡಿ ವಿವಾದ?

ಅಮಿತ್ ಶಾ ಉಪಸ್ಥಿತಿಯಲ್ಲಿ ಬಗೆಹರಿಯಿತು 50 ವರ್ಷದ ಅಸ್ಸಾಂ-ಮೇಘಾಲಯ ಗಡಿ ವಿವಾದ!


 

Latest Videos
Follow Us:
Download App:
  • android
  • ios