ರಾಷ್ಟ್ರೀಯ ಯೋಜನೆ, ಆದ್ಯತೆ ಹಾಗೂ ದೇಶದ ಗುರಿಗಳ ಸೃಷ್ಟಿಯ ವೇಳೆ ಯುವ ಪೀಳಿಗೆಯನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ. ವಿಕಸಿತ ಭಾರತ@2047ಕ್ಕೆ ತಮ್ಮ ಆಲೋಚನೆಗಳನ್ನು ನೀಡಲು ಯುವಕರಿಗೆ ಇದು ವೇದಿಕೆಯಾಗಿ ಕೆಲಸ ಮಾಡಲಿದೆ.

ನವದೆಹಲಿ (ಡಿಸೆಂಬರ್ 11, 2023): ರಾಷ್ಟ್ರ ನಿರ್ಮಾಣದಲ್ಲಿ ಯುವ ಪೀಳಿಗೆಯನ್ನು ಸಕ್ರಿಯವಾಗಿ ತೊಡಗಿಸಿಕೊಂಡು 2047ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿ ಬದಲಿಸುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ‘ವಿಕಸಿತ ಭಾರತ@2047: ಯುವಕರ ಧ್ವನಿ’ ಎಂಬ ಅಭಿಯಾನಕ್ಕೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ದೇಶಾದ್ಯಂತ ರಾಜಭವನಗಳಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಅದರಲ್ಲಿ ವಿಶ್ವವಿದ್ಯಾಲಯಗಳ ಕುಲಪತಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಬೋಧಕ ಸಿಬ್ಬಂದಿ ಭಾಗವಹಿಸಲಿದ್ದು, ಎಲ್ಲರನ್ನೂ ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ (ಪಿಎಂಒ) ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನು ಓದಿ: ವಿಕಸಿತ ಭಾರತ ಸಂಕಲ್ಪ ಯಾತ್ರೆಯಿಂದ ಕೇಂದ್ರದ ಯೋಜನೆಗಳ ಪರಿಚಯ: ಸಚಿವ ನಾರಾಯಣಸ್ವಾಮಿ

ಈ ಕುರಿತು ಮಾಹಿತಿ ನೀಡಿರುವ ನೀತಿ ಆಯೋಗದ ಸಿಇಒ ಬಿ.ವಿ.ಆರ್‌. ಸುಬ್ರಹ್ಮಣ್ಯಂ, ‘2047ಕ್ಕೆ ದೇಶವನ್ನು 30 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ ಮಾಡುವ ಗುರಿಯಿದೆ. ಇದನ್ನು ಸಾಧ್ಯವಾಗಿಸಲು ಅಗತ್ಯವಾದ ವಿಷನ್‌ ಡಾಕ್ಯುಮೆಂಟ್‌ (ದೂರದೃಷ್ಟಿ ವರದಿ) ಅನ್ನು ಸರ್ಕಾರ ಈಗಾಗಲೇ ಸಿದ್ಧಪಡಿಸಲಾಗುತ್ತಿದೆ. ಇದನ್ನು ಸ್ವತ: ಪ್ರಧಾನಿ ನರೇಂದ್ರ ಮೋದಿ ಅವರೇ 2024ರ ಜನವರಿಯಲ್ಲಿ ಬಿಡುಗಡೆಮಾಡಲಿದ್ದಾರೆ’ ಎಂದು ತಿಳಿಸಿದ್ದಾರೆ.

ಏನಿದು ಅಭಿಯಾನ?:
ರಾಷ್ಟ್ರೀಯ ಯೋಜನೆ, ಆದ್ಯತೆ ಹಾಗೂ ದೇಶದ ಗುರಿಗಳ ಸೃಷ್ಟಿಯ ವೇಳೆ ಯುವ ಪೀಳಿಗೆಯನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ. ವಿಕಸಿತ ಭಾರತ@2047ಕ್ಕೆ ತಮ್ಮ ಆಲೋಚನೆಗಳನ್ನು ನೀಡಲು ಯುವಕರಿಗೆ ಇದು ವೇದಿಕೆಯಾಗಿ ಕೆಲಸ ಮಾಡಲಿದೆ. ಅವರ ಆಲೋಚನೆಗಳು ಹಾಗೂ ಸಲಹೆಗಳನ್ನು ಹಂಚಿಕೊಳ್ಳಲು ಕಾರ್ಯಾಗಾರ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ. 2047ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸಲು ಈ ಸಲಹೆ, ಆಲೋಚನೆಗಳನ್ನು ಸ್ವೀಕರಿಸಲಾಗುತ್ತದೆ.

ಕೇಂದ್ರ ಸರ್ಕಾರದ ಯೋಜನೆಗಳ ಅರಿವು ಮೂಡಿಸಲು ರಥಯಾತ್ರೆ: ಸಂಸದ ಮುನಿಸ್ವಾಮಿ

ಏನು ಇದರ ಗುರಿ?

  • ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 100 ವರ್ಷ ತುಂಬುವ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಮಾಡುವ ಗುರಿ
  • ಅದರ ಒಂದು ಭಾಗವಾಗಿ ‘ಯುವಕರ ಧ್ವನಿ’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ಇಂದು ಚಾಲನೆ
  • ದೇಶಾದ್ಯಂತ ರಾಜಭವನಗಳಲ್ಲಿ ಕಾರ್ಯಾಗಾರ: ಕುಲಪತಿ, ಪ್ರಾಧ್ಯಾಪಕರು ಭಾಗಿ
  • ವಿಡಿಯೋ ಕಾನ್ಫರೆನ್ಸ್‌ ಮೂಲಕ ಅವರನ್ನು ಉದ್ದೇಶಿಸಿ ಮೋದಿ ಭಾಷಣ
  • ಮುಂದಿನ ತಿಂಗಳು ವಿಷನ್‌ ಡಾಕ್ಯುಮೆಂಟ್‌ ಬಿಡುಗಡೆಗೆ ಕೇಂದ್ರ ಸಿದ್ಧತೆ

ವಿಕಸಿತ ಭಾರತ ಸಂಕಲ್ಪ ಯಾತ್ರೆ ಕೇಂದ್ರ ಸರ್ಕಾರದ ‘ಗ್ಯಾರಂಟಿ’: ರಾಜೀವ್ ಚಂದ್ರಶೇಖರ್