ವಿಕಸಿತ ಭಾರತ ಸಂಕಲ್ಪ ಯಾತ್ರೆ ಕೇಂದ್ರ ಸರ್ಕಾರದ ‘ಗ್ಯಾರಂಟಿ’: ರಾಜೀವ್ ಚಂದ್ರಶೇಖರ್
ವಿಕಸಿತ ಭಾರತ ಸಂಕಲ್ಪ ಯಾತ್ರೆಯೂ ಮೋದಿಯವರ ಕೇಂದ್ರ ಸರ್ಕಾರದ ಗ್ಯಾರೆಂಟಿಗಳ ಯೋಜನೆ ಎಂದು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ಚಿಕ್ಕಬಳ್ಳಾಪುರ (ಡಿ.01): ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಡಿಯಲ್ಲಿ ದೇಶದ ಜನತೆಗೆ ಸಾಮಾಜಿಕ ನ್ಯಾಯ, ಸಮಾನತೆ ನೀಡಲು ಸಾಧ್ಯ. ವಿಕಸಿತ ಭಾರತ ಸಂಕಲ್ಪ ಯಾತ್ರೆಯೂ ಮೋದಿಯವರ ಕೇಂದ್ರ ಸರ್ಕಾರದ ಗ್ಯಾರೆಂಟಿಗಳ ಯೋಜನೆ ಎಂದು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ತಾಲೂಕಿನ ದೊಡ್ಡಮರಳಿ ಗ್ರಾಮ ಪಂಚಾಯತ್ ಕಚೇರಿಯ ಮುಂಬಾಗದಲ್ಲಿ ಕೇಂದ್ರ ಸರ್ಕಾರದ ಯೋಜನೆಯಾದ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಗುರುವಾರ ಚಾಲನೆ ನೀಡಿ ಮಾತನಾಡಿ, ಕೇಂದ್ರದ ಹಲವು ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಿಗೂ ಭೇಟಿ ನೀಡಲಿದೆ ಎಂದರು.
ರಾಜ್ಯ ಸರ್ಕಾರ ಬರ ಎದುರಿಸದೆ ತೆಲಂಗಾಣ ಚುನಾವಣೆಗೆ ಹೋಗಿದ್ದಾರೆ: ಎಚ್.ಡಿ.ರೇವಣ್ಣ
ಕೇಂದ್ರದ ಯೋಜನೆಗಳ ಬಗ್ಗೆ ಅರಿವು: ಭಾರತದಲ್ಲಿ ಜನಿಸಿದ ಎಲ್ಲರೂ ಭಾರತೀಯರು ಎಂಬುದು ಬಿಜೆಪಿ ಮತ್ತು ಬಿಜೆಪಿ ಸರ್ಕಾರದ ಸಿದ್ಧಾತ. ಅದೇ ಕಾರಣಕ್ಕೇ ಬಡವರಿಗೆ, ಮಹಿಳೆಯರಿಗೆ,ಯುವ ಜನತೆಗೆ ಹಾಗೂ ರೈತರಿಗೆ ವಿಶೇಷ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನೆ, ಪ್ರಧಾನಮಂತ್ರಿ ಉಜ್ವಲ ಯೋಜನೆ, ಕಿ ಸಾನ್ ಕೆಡಿಟ್ ಕಾರ್ಡ್, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಸೇರಿದಂತೆ ಕೇಂದ್ರದ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ದೇಶದಲ್ಲಿ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10,000 ರಿಂದ 25,000 ಕ್ಕೆ ಹೆಚ್ಚಿಸುವ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಪ್ರಾರಂಭಿಸಿದರು. ಉತ್ತಮ ಔಷಧ ಮತ್ತು ಅಗ್ಗದ ಔಷಧವೇ ಬಹುದೊಡ್ಡ ಸೇವೆ ಯಾಗಿದೆ. ಜನೌಷಧಿ ಕೇಂದ್ರದ ಬಗ್ಗೆ ಜನರಿಗೆ ಮಾಹಿತಿ ನೀಡಿ. ಈ ಹಿಂದೆ 12-13 ಸಾವಿರ ರೂ.ಗಳಷ್ಟಿದ್ದ ಔಷಧಿಗಳ ಖರ್ಚು ಇದೀಗ 2-3 ಸಾವಿರ ರು.ಗಳಾಗುತ್ತಿದೆ ಎಂದರೆ ಜನೌಷಧಿ ಕೇಂದ್ರದಿಂದಾಗಿ 10 ಸಾವಿರ ರೂ.ಗಳು ನಿಮ್ಮ ಜೇಬಿಗೆ ಉಳಿತಾಯವಾಗುತ್ತಿದೆ.
ಮಹಿಳಾ ಸ್ವಸಹಾಯ ಸಂಘಕ್ಕೆ ಡ್ರೋನ್: ಪ್ರಧಾನಿ ಮಹಿಳಾ ಕಿಸಾನ್ ಡ್ರೋನ್ ಕೇಂದ್ರವನ್ನು ಸಹ ಪ್ರಾರಂಭಿಸಿದ್ದಾರೆ. ಡ್ರೋನ್ ಕೇಂದ್ರವು ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಡ್ರೋನ್‌ಗಳನ್ನು ಒದಗಿಸುತ್ತದೆ ಇದರಿಂದ ಅವರು ಈ ತಂತ್ರಜ್ಞಾನವನ್ನು ಬಳಸಿಕೊಂಡು ಜೀವನೋಪಾಯವನ್ನು ಗಳಿಸಬಹುದು. ಈ ಯೋಜನೆಯಡಿ ಮೂರು ವರ್ಷಗಳಲ್ಲಿ 15 ಸಾವಿರ ಡ್ರೋನ್‌ಗಳನ್ನು ಮಹಿಳೆಯರಿಗೆ ನೀಡಲಾಗುವುದು ಎಂದರು.
ಪ್ರಧಾನಿ ಮೋದಿ ನೇತೃತ್ವದಲ್ಲಿ ನಮ್ಮ ಸರ್ಕಾರ ಹತಾಶೆಯ ಪರಿಸ್ಥಿತಿಯನ್ನು ಬದಲಾಯಿಸಿತು.ದೇಶದ ಹೆಚ್ಚಿನ ಜನಸಂಖ್ಯೆಯು ಸ್ವಾತಂತ್ರ್ಯದ ನಂತರ ಹಲವು ದಶಕಗಳವರೆಗೆ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಹತಾಶೆಯ ಪರಿಸ್ಥಿತಿಯನ್ನು ನಮ್ಮ ಸರ್ಕಾರ ಬದಲಾಯಿಸಿದೆ ಎಂದರು. ಇಂದು ದೇಶದಲ್ಲಿ ಇರುವ ಸರ್ಕಾರ ಜನರನ್ನೇ ದೇವರಂತೆ ಕಾಣುವ ಸರ್ಕಾರವಾಗಿದೆ ಎಂದರು.
2024ರ ಕ್ಯಾಲೆಂಡರ್ ಬಿಡುಗಡೆ: ಈ ಸಂದರ್ಭದಲ್ಲಿ ಸಚಿವ ರಾಜೀವ್ ಚಂದ್ರಶೇಖರ್ ರವರು ಉಜ್ವಲ ಫಲಾನುಭವಿಗಳಿಗೆ ಸ್ಟೌ, ರೆಗ್ಯೂಲೇಟರ್ಸೇ ರಿದಂತೆ ದಾಖಲೆ ಪತ್ರಗಳನ್ನು ಹಸ್ತಾಂತರಿಸಿದರು. ಹಾಗೂ ಸಂಕಲ್ಪ ವಿಕಸಿತ ಭಾರತ ಯೋಜನೆಯ 2024ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಅಲ್ಲದೆ ಜನರ ಮಧ್ಯೆ ಕುಳಿತು ಪ್ರಧಾನಿ ನರೇಂದ್ರ ಮೋದಿಯವರಿಂದ ನಮ್ಮ ಸಂಕಲ್ಪ ವಿಕಸಿತ ಭಾರತ ಯೋಜನೆಯ ಉಧ್ಘಾಟನೆ ಕಾರ್ಯಕ್ರಮವನ್ನು ವೀಕ್ಷಿಸಿದರು.
ಈ ವೇಳೆ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕಿನ ಜನರಲ್ ಮ್ಯಾನೇಜರ್ ಗೋಪಿಕೃಷ್ಣ, ಡೆಪ್ಯೂಟಿ ಜನರಲ್ ಮ್ಯಾನೇಜರ್ ಭಾಸ್ಕರ್ ಚಕ್ರವರ್ತಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಸದಾನಂದಕಾಳಗಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗವೇಣಿ, ಮಾಜಿ ಶಾಸಕ ಎಂ.ಶಿವಾನಂದ್, ಮುಖಂಡ ವೆಂಕಟೇಶ್, ಗ್ರಾಮ ಪಂಚಾಯತಿ ಸದಸ್ಯರು ಅಂಚೇ ಕಚೇರಿ, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.
ಭ್ರೂಣ ಹತ್ಯೆಗೆ ಒಳಗಾದವರಿಗೂ ಕಠಿಣ ಶಿಕ್ಷೆ ಆಗಲಿ: ಸಚಿವ ವೆಂಕಟೇಶ್
ಡ್ರೋನ್ ಕಾರ್ಯ ವೀಕ್ಷಣೆ: ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ತಾಲೂಕಿನ ದೊಡ್ಡಮರಳಿ ಗ್ರಾಮ ಪಂಚಾಯತ್ ಕಚೇರಿಯ ಮುಂಬಾಗದಲ್ಲಿ ಖೇಂದ್ರ ಸರ್ಕಾರದ ಯೋಜನೆಯಾದ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಗುರುವಾರ ಚಾಲನೆ ನೀಡಿದ ನಂತರ ಹೊಲ,ಗದ್ದೆ ಮತ್ತು ತೋಟಗಳಿಗೆ ಔಷಧ ಸಿಂಪಡಣೆ ಮಾಡುವ ಡ್ರೋನ್ ವೀಕ್ಷಣೆ ಮಾಡಿದರು.