Breaking: ಟಿಡಿಪಿ ನಾಯಕ ಚಂದ್ರಬಾಬು ನಾಯ್ಡುಗೆ ಕರೆ ಮಾಡಿದ ಪ್ರಧಾನಿ ಮೋದಿ!
ಆಂಧ್ರಪ್ರದೇಶದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಶಂ ಪಾರ್ಟಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಕರೆ ಮಾಡಿದ್ದಾರೆ.
ನವದೆಹಲಿ (ಜೂ.1): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಮ್ಯಾಜಿಕ್ ನಂಬರ್ ರೀಚ್ ಆಗದ ಹಿನ್ನಲೆಯಲ್ಲಿ ಮುಂದಿನ ಸರ್ಕಾರದ ಬಗ್ಗೆ ತೀವ್ರ ಕುತೂಹಲ ಉಂಟಾಗಿದೆ. ಇದರ ಬೆನ್ನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಟಿಡಿಪಿ ನಾಯಕ ಹಾಗೂ ಆಂಧ್ರ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಈ ವೇ<ಎ ಚಂದ್ರಬಾಬು ನಾಯ್ದು ತಾವು ಎನ್‌ಡಿಎ ಭಾಗವಾಗಿಯೇ ಇರುವುದಾಗಿ ತಿಳಿಸಿದ್ದಾರೆ ಎಂದು ಉನ್ನತ ಮೂಲಗಳು ವರದಿ ಮಾಡಿದೆ. ಚಂದ್ರ ಬಾಬು ನಾಯ್ಡು ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರ.ೆ ದೂರವಾಣಿ ಮೂಲಕ ಮೋದಿ ಮಾತುಕತೆ ನಡೆಸಿದ್ದಾರೆ. ಎನ್‌ಡಿಎ ಮೈತ್ರಿಕೂಟದಲ್ಲಿ ಇರುವಂತೆ ಮೋದಿ ಮನವಿ ಮಾಡಿದ್ದಾರೆ. ಅದಲ್ಲದೆ, ಕೂಡಲೇ ದೆಹಲಿಗೆ ಬರುವಂತೆ ಅವರು ಸೂಚನೆ ನೀಡಿದ್ದಾರೆ. ಈಗಾಗಲೇ ಚಂದ್ರಬಾಬು ನಾಯ್ಡು ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದಾರೆ. ಇನ್ನೊಂದೆಡೆ ಎನ್‌ಡಿಎ, ಮೈತ್ರಿಕೂಟದಲ್ಲಿದ್ದರೂ, ಇಂಡಿ ಮೈತ್ರಿಕೂಟದಿಂದಲೂ ನಾಯ್ಡುಗೆ ಆಹ್ವಾನ ನೀಡಲಾಗಿದೆ. ಸದ್ಯ ಆಂಧ್ರದಲ್ಲಿ 20-22 ಕ್ಷೇತ್ರದಲ್ಲಿ ಟಿಡಿಪಿ ಮುನ್ನಡೆ ಕಾಯ್ದುಕೊಂಡಿದೆ.
Live Blog: ಎನ್‌ಡಿಎ ಮೈತ್ರಿಕೂಟಕ್ಕೆ ಈ ಬಾರಿ ಸರಳ ಬಹುಮತ
18ನೇ ಲೋಕಸಭೆಯ 543 ಸದಸ್ಯರನ್ನು ಆಯ್ಕೆ ಮಾಡಲು ಭಾರತದಲ್ಲಿ 19 ಏಪ್ರಿಲ್ 2024 ರಿಂದ 1 ಜೂನ್ 2024 ರವರೆಗೆ ಸಾರ್ವತ್ರಿಕ ಚುನಾವಣೆಗಳು ನಡೆದಿದ್ದವು. ಚುನಾವಣೆಗಳು ಏಳು ಹಂತಗಳಲ್ಲಿ ನಡೆದಿದ್ದು ಇಂದು ಫಲಿತಾಂಶ ಪ್ರಕಟವಾಗಿದೆ. ಚುನಾವಣೆಗೂ ಮುನ್ನವೇ ಸೂರತ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಅಧಿಕಾರಕ್ಕೆ ಏರಲು 272 ಸೀಟ್‌ಗಳ ಗೆಲುವು ಮ್ಯಾಜಿಕ್ ನಂಬರ್ ಆಗಿದೆ. ಈ ಬಾರಿ ಒಟ್ಟು ಶೇ. 66.33ರಷ್ಟು ಮತದಾನವಾಗಿದೆ. ಬಿಜೆಪಿ ಏಕಾಂಗಿಯಾಗಿ 441 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೆ, ಕಾಂಗ್ರೆಸ್ 328 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಬಹುತೇಕ ಎಲ್ಲಾ ಎಕ್ಸಿಟ್ ಪೋಲ್‌ಗಳು ಕೂಡ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರಯುತವಾಗಿ ಮತ್ತೊಮ್ಮೆ ಅಧಿಕಾರಕ್ಕೆ ಏರಲಿದೆ ಎನ್ನುವ ಸಮೀಕ್ಷೆ ನೀಡಿದ್ದವು. ದೈನಿಕ್ ಭಾಸ್ಕರ್ ನೀಡಿದ್ದ 316 ಸೀಟ್‌ಗಳು ಎಕ್ಸಿಟ್ ಪೋಲ್‌ನಲ್ಲಿ ಎನ್‌ಡಿಎಯ ಕನಿಷ್ಠವಾಗಿದ್ದರೆ, ಟುಡೇಸ್ ಚಾಣಕ್ಯದ 400 ಸೀಟ್‌ಗಳು ಗರಿಷ್ಠವಾಗಿದ್ದವು.
Live Blog: ಪೆನ್ ಡ್ರೈವ್ ಕಮಾಲ್, ಹಾಸನದಲ್ಲಿ ಪ್ರಜ್ವಲ್ ರೇವಣ್ಣಂಗೆ ಸೋಲು