Asianet Suvarna News Asianet Suvarna News

Rahul Slams PM ನೆಹರು ದೇಶಸೇವೆಗೆ ಯಾರ ಪ್ರಮಾಣ ಪತ್ರ ಬೇಕಿಲ್ಲ: ರಾಹುಲ್‌ ತಿರುಗೇಟು!

  • ಕಾಂಗ್ರೆಸ್‌ ಸತ್ಯ ಹೇಳುತ್ತಿದೆ ಎಂಬ ಆತಂಕ ಬಿಜೆಪಿಗೆ ಶುರುವಾಗಿದೆ
  • ನೆಹರು ದೇಶಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಿಟ್ಟಿದ್ದರು
  • ಪ್ರಧಾನಿ ಮೋದಿಗೆ ತಿರುಗೇಟು ನೀಡಿದ ರಾಹುಲ್ ಗಾಂಧಿ
PM scared of Congress Rahul Gandhi Hits back Lok sabha Speech by modi ckm
Author
Bengaluru, First Published Feb 9, 2022, 1:18 AM IST

ನವದೆಹಲಿ(ಫೆ.09): ನನ್ನ ಮುತ್ತಜ್ಜ (Jawaharlal Nehru) ಈ ದೇಶಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಿಟ್ಟಿದ್ದರು. ಕಾಂಗ್ರೆಸ್‌(Congress) ಮತ್ತು ನೆಹರು(Nehru) ಅವರ ಬಗ್ಗೆ ನಿರಂತರ ದಾಳಿ ಮಾಡಬೇಕೆಂದರೆ ನನ್ನೆದುರು ಅಥಿತಿಯಾಗಿ ಬಂದು ಕುಳಿತುಕೊಳ್ಳಿ, ನಾನು ವಿವರಿಸುತ್ತೇನೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi) ಮಂಗಳವಾರ ಪ್ರಧಾನಿ ಮೋದಿಗೆ(PM Modi) ಸವಾಲೆಸೆದರು.

‘ಅವರು (ಪ್ರಧಾನಿ ಮೋದಿ) ದಿವಾಳಿಯಾದ ವಿದೇಶಾಂಗ ನೀತಿಯನ್ನು ಹೊಂದುವ ಮೂಲಕ ಭಾರತವನ್ನು(India) ಅಪಾಯಕ್ಕೆ ತಳ್ಳುತ್ತಿದ್ದಾರೆ. ಚೀನಾ(China), ಪಾಕಿಸ್ತಾನ(Pakistan) ಒಗ್ಗೂಡಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಜಂಟಲ್‌ಮ್ಯಾನ್‌ ಮೋದಿ ಅವರಿಗೆ ತಮ್ಮ ಕೆಲಸ ಏನೆಂದು ಸರಿಯಾಗಿ ಅರ್ಥವಾಗುತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

Inflation ಕಾಂಗ್ರೆಸ್‌ಗೆ ಮುಳುವಾಯ್ತು ನೆಹರು, ಚಿದಂಬರಂ ಹಣದುಬ್ಬರ ನೀತಿ, ಮೋದಿ ಮಾತಿಗೆ ಕಾಂಗ್ರೆಸ್ ಸೈಲೆಂಟ್!

ಇದೇ ವೇಳೆ, ಪ್ರಧಾನಿ ಮೋದಿ ತಮ್ಮ ಸಂಸತ್‌ ಭಾಷಣದಲ್ಲಿ ನನ್ನ ಪ್ರಶ್ನೆಗೆ ಉತ್ತರಿಸಿಲ್ಲ. ಚೀನಾ ಮತ್ತು ಪಾಕಿಸ್ತಾನದ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ನನ್ನ ಮುತ್ತಜ್ಜ ಜೀವಮಾನವಿಡೀ ದೇಶಸೇವೆ ಮಾಡಿದ್ದಾರೆ. ಅದಕ್ಕೆ ಯಾರ ಪ್ರಮಾಣಪತ್ರವೂ ಬೇಕಿಲ್ಲ. ಕಾಂಗ್ರೆಸ್‌ ಸತ್ಯ ಹೇಳುತ್ತಿದೆ ಎಂಬ ಭಯ ಬಿಜೆಪಿಯನ್ನು ಕಾಡತೊಡಗಿದೆ’ ಎಂದು ವಾಗ್ದಾಳಿ ನಡೆಸಿದರು.

ಕೊರಿಯಾ ಯುದ್ಧದಿಂದ ಹಣದುಬ್ಬರ ಎಂದಿದ್ದ ನೆಹರು
ಬೆಲೆ ಏರಿಕೆ ಕುರಿತ ವಿಪಕ್ಷಗಳ ದಾಳಿಗೆ ಪ್ರತಿಕ್ರಿಯಿಸಿದ ಪ್ರಧಾನಿ ‘ಯುಪಿಎ ಆಡಳಿತದ ಅವಧಿಯಲ್ಲಿ ಹಣದುಬ್ಬರ ಪ್ರಮಾಣ ಎರಡಂಕಿ ತಲುಪಿತ್ತು.ಇತ್ತು. ದೇಶದ ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರು ಕೊರಿಯಾ ಯುದ್ಧದಿಂದಾಗಿ ನಮ್ಮ ದೇಶದಲ್ಲಿ ಹಣದುಬ್ಬರ ಹೆಚ್ಚುತ್ತಿದೆ ಎಂಬ ಹೇಳಿಕೆ ನೀಡಿದ್ದರು. ಕಾಂಗ್ರೆಸ್‌ ‘ಗರೀಬಿ ಹಠಾವೋ’ ಘೋಷಣೆಯಿಂದ ಹಲವು ರಾಜ್ಯಗಳಲ್ಲಿ ಗೆದ್ದಿತು. ಆದರೆ ಬಡತನವನ್ನು ತೊಲಗಿಸುವಲ್ಲಿ ಅದು ವಿಫಲವಾಯಿತು. ಪ್ರತಿಪಕ್ಷಗಳು ಈಗ ಹಣದುಬ್ಬರದ ವಿಷಯವನ್ನು ಎತ್ತಿವೆ. ಆದರೆ, ಅವರದ್ದೇ ಸರ್ಕಾರಗಳಿದ್ದಾಗ ಆ ವಿಷಯವನ್ನು ಪ್ರಸ್ತಾಪಿಸಿದ್ದರೆ ಉತ್ತಮವಾಗಿರುತ್ತಿತ್ತು. ಸಾಂಕ್ರಾಮಿಕದ ಸಂದರ್ಭದಲ್ಲಿಯೂ ನಮ್ಮ ಸರ್ಕಾರವು ಹಣದುಬ್ಬರವನ್ನು ನಿಭಾಯಿಸಲು ಪ್ರಯತ್ನಿಸಿದೆ. 2014-2020ರ ಅವಧಿಯಲ್ಲಿ ಹಣದುಬ್ಬರ ದರ ಶೇ.5ಕ್ಕಿಂತ ಕಡಿಮೆ ಇತ್ತು’ ಎಂದು ಹೇಳಿದರು.

ನೆಹರೂಗೆ ತನ್ನ ಘನತೆಯ ಚಿಂತೆ, ಇದೇ ಕಾರಣಕ್ಕೆ ಗೋವಾಗೆ 15 ವರ್ಷ ಸ್ವಾತಂತ್ರ್ಯ ಸಿಗಲಿಲ್ಲ: ಮೋದಿ

ಕಾಂಗ್ರೆಸ್‌ ಇತ್ತೀಚೆಗೆ ತಮಿಳು ಭಾವನೆಗಳಿಗೆ ಧಕ್ಕೆ ತರುವ ಯತ್ನ ಮಾಡಿತ್ತು, ಅದು ದೇಶದಲ್ಲಿ ವಿಭಜಿಸು ಮತ್ತು ಆಳುವ ನೀತಿಯನ್ನು ಬಯಸುತ್ತದೆ. ಆದರೆ ನಮ್ಮ ಸಶಸ್ತ್ರ ಪಡೆಗಳ ಮುಖ್ಯಸ್ಥ ರಾವತ್‌ ಇತ್ತೀಚೆಗೆ ಕಾಪ್ಟರ್‌ ಅಪಘಾತದಲ್ಲಿ ಮಡಿದಾಗ ಮತ್ತು ಅವರ ಕಳೆಬರವನ್ನು ತಮಿಳುನಾಡಿನಾದ್ಯಂತ ಕೊಂಡೊಯ್ದಾಗ ನನ್ನ ಲಕ್ಷಾಂತರ ತಮಿಳು ಸೋದರ, ಸೋದರಿಯರು ರಸ್ತೆಯ ಉದ್ದಗಲಕ್ಕೂ ನಿಂತು ‘ವೀರ ವಣಕ್ಕಂ’ ಎಂದು ಘೋಷಣೆ ಕೂಗುತ್ತಾ ಅಂತಿಮ ನಮನ ಸಲ್ಲಿಸಿದರು. ತಮಿಳು ಸೋದರರು ಜನರಲ್‌ ರಾವತ್‌ ಅವರನ್ನು ಬದುಕಿಸಲು ಗಂಟೆಗಳ ಕಾಲ ಶ್ರಮಿಸಿದರು. ಇದು ನನ್ನ ದೇಶ. ಆದರೆ ಕಾಂಗ್ರೆಸ್‌ ಇದನ್ನು ಆರಂಭದಿಂದಲೂ ಕಾಂಗ್ರೆಸ್‌ ದ್ವೇಷಿಸಿಕೊಂಡೇ ಬಂದಿದೆ. ವಿಜಭಿಸು ಮತ್ತು ಆಳು ಎನ್ನುವ ನೀತಿ ಅವರ ವಂಶವಾಹಿಯಲ್ಲೇ ಇದೆ’ ಎಂದು ತಿರುಗೇಟು ನೀಡಿದರು.

ಇದೇ ವೇಳೆ ‘ರಾಷ್ಟ್ರ ಎನ್ನುವುದು ಆಡಳಿತದ ಒಂದು ವ್ಯವಸ್ಥೆಯಾಗಲೀ ಅಥವಾ ಸರ್ಕಾರವಾಗಲೀ ಅಲ್ಲ - ಅದು ನಮ್ಮ ಪಾಲಿಗೆ ಜೀವಂತ ಆತ್ಮ. ಸಾವಿರಾರು ವರ್ಷಗಳಿಂದ, ಜನರು ಇದರೊಂದಿಗೆ ಜೋಡನೆಯಾಗಿದ್ದಾರೆ’ ಎಂದು ವಿಷ್ಣು ಪುರಾಣದಲ್ಲಿ ಬರುವ ಶ್ಲೋಕವನ್ನು ಉಲ್ಲೇಖಿಸಿ ರಾಹುಲ್‌ಗೆ ಮೋದಿ ಟಾಂಗ್‌ ನೀಡಿದರು.

 ಕೃಷಿ ಕಾಯ್ದೆ, ಬೆಲೆ ಏರಿಕೆ, ಉದ್ಯಮಿಗಳನ್ನು ಕುರಿತು ಕಾಂಗ್ರೆಸ್‌ ನಿಲುವುಗಳನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಸಭೆಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟು ತೀವ್ರ ವಾಗ್ದಾಳಿ ನಡೆಸಿದರು. ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿ ಮೋದಿ, ವಿಪಕ್ಷ ಮಾಡಿದ್ದ ಪ್ರತಿಯೊಂದು ಆರೋಪಕ್ಕೂ ತಿರುಗೇಟು ನೀಡಿ ಅವರಿಗೆ ಮುಜುಗರ ಉಂಟು ಮಾಡಿದರು.
 

Follow Us:
Download App:
  • android
  • ios