ಕೋಲ್ಕತ್ತಾ(ಮಾ.  18)   ಪಶ್ಚಿಮ ಬಂಗಾಳದಲ್ಲಿ ಮೇ 2 ರಿಂದ ಅಭಿವೃದ್ಧಿ ಶುರುವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಧಾನಸಭಾ ಚುನಾವಣೆಯ ಮತಗಳನ್ನು ಎಣಿಕೆ ಮಾಡಿದ ನಂತರ  ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಆಟ ಮುಗಿಯಲಿದೆ ಎಂದರು.

ಪುರುಲಿಯಾದಲ್ಲನ  ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ  ಪ್ರಧಾನಿ ಮಮತಾ ಮೇಲೆ ವಾಗ್ದಾಳಿ ಮಾಡಿದರು. ಬಿಜೆಪಿ ಶಿಕ್ಷಣ, ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ  ನೀಡಲಿದೆ ಎಂದು ತಿಳಿಸಿದರು.

ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ  ಘೋಷಣೆಯಾಗಿ ಇಟ್ಟುಕೊಂಡಿರುವ 'ಖೇಲಾ ಹೋಬ್' ( ಗೇಮ್ ಇಸ್ ಆನ್)  ಪ್ರತಿಕ್ರಿಯೆ ನೀಡಿದ ಪ್ರಧಾನಿ ಆಟ ಮುಗಿಯಲಿದೆ ಎಂದು ತಿಳಿಸಿದರು.

ಜಿಲ್ಲೆಗಳು ಎದುರಿಸುತ್ತಿರುವ ನೀರಿನ ಸಮಸ್ಯೆ, ಎಡರಂಗ ಮತ್ತು ಟಿಎಂಸಿ ಕೈಗಾರಿಕೆಗಳಿಗೆ ಉತ್ತೇಜನ ನೀಡದೆ ರಾಜ್ಯವನ್ನು ಹಿಂದಕ್ಕೆ ತಳ್ಳಿರುವ ವಿಚಾರವನ್ನು ಪ್ರಧಾನಿ ಮಾತನಾಡಿದರು. ಎಡ ಪಕ್ಷಗಳ ಆಡಳಿತ ಮತ್ತು ಟಿಎಂಸಿ ದುರಾಡಳಿತ  ಬಂಗಾಳಕ್ಕೆ ಮಾರಕವಾಗಿದೆ ಎಂಬ ವಿಚಾರವನ್ನು ಅಂಕಿ ಅಂಶ ಸಮೇತ ಬಿಚ್ಚಿಟ್ಟರು.

ಮಾರ್ಚ್ 7  ರ ನಂತರ ಬಂಗಾಳದಲ್ಲಿ ಮೋದಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ನೀರಾವರಿಗೆ ಮೊದಲ ಆದ್ಯತೆ ಎಂಬುದನ್ನು ಪುನರ್ ಉಚ್ಚಾರ ಮಾಡಿದರು.