ದೇಶದ ಮೊಬೈಲ್‌ ಫೋನ್‌ ರಫ್ತು ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ರಚನೆಯಾಗಿದೆ. ಏಪ್ರಿಲ್‌-ಅಕ್ಟೋಬರ್‌ನ ವೈಓವೈ (ವರ್ಷದಿಂದ ವರ್ಷಕ್ಕೆ) ಅವಧಿಯಲ್ಲಿ ದೇಶದ ಫೋನ್‌ ರಫ್ತು ಪ್ರಮಾಣ ದುಪ್ಪಟ್ಟಾಗಿದೆ. ಸೆಪ್ಟೆಂಬರ್‌ ವೇಳೆಗೆ ದಾಖಲೆಯ 1 ಬಿಲಿಯನ್‌ ಅಮೆರಿಕನ್‌ ಡಾಲರ್‌ ತಲುಪಿದ್ದ ಮೊಬೈಲ್‌ ಫೋನ್‌ ರಫ್ತು ಅಕ್ಟೋಬರ್‌ ವೇಳೆ ಅಮದಾಜು 900 ಮಿಲಿಯನ್‌ಗೆ ಇಳಿಕೆಯಾಗಿತ್ತು. 

ನವದೆಹಲಿ (ನ. 29): 2023ರ ಹಣಕಾಸು ವರ್ಷದ ಏಳು ತಿಂಗಳಲ್ಲೇ ಮೊಬೈಲ್‌ ಫೋನ್‌ ರಫ್ತು ಪ್ರಮಾಣ 5 ಬಿಲಿಯನ್‌ ಅಮೆರಿಕನ್‌ ಡಾಲರ್‌ ಗಡಿ ದಾಟಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದರ ಪ್ರಮಾಣ ದುಪ್ಪಟ್ಟಾಗಿದೆ. ಕಳೆದ ವರ್ಷದ ಏಪ್ರಿಲ್‌-ಅಕ್ಟೋಬರ್‌ ಅವಧಿಯಲ್ಲಿ ಭಾರತದ ಮೊಬೈಲ್‌ ಫೋನ್‌ ರಫ್ತು ಪ್ರಮಾಣ 2.2 ಬಿಲಿಯನ್‌ ಅಮೆರಿಕನ್‌ ಡಾಲರ್‌ ಎನಿಸಿತ್ತು. ಮೊಬೈಲ್‌ ಫೋನ್‌ನ ಪ್ರಮುಖ ತಯಾರಕ ಕಂಪನಿಗಳಾದ ಆಪಲ್‌ ಹಾಗೂ ಸ್ಯಾಮಸಂಗ್‌ ಹೆಚ್ಚಿನ ಮೊಬೈಲ್‌ಗಳನ್ನು ರಫ್ತು ಮಾಡುವ ಪ್ರಕ್ರಿಯೆಯಲ್ಲಿ ತೊಡಗಿರುವ ಕಾರಣ ಮೊಬೈಲ್‌ ಫೋನ್‌ ರಫ್ತು ಪ್ರಮಾಣದಲ್ಲಿ ಏರಿಕೆ ಆಗಿದೆ ಎಂದು ಸರ್ಕಾರಿ ಹಾಗೂ ಉದ್ಯಮ ವಲಯದ ತಜ್ಞರು ತಿಳಿಸಿದ್ದಾರೆ. ಪ್ರಸ್ತುತ ಇರುವ ವೇಗ ಹಾಗೂ ರಫ್ತುಗಳನ್ನು ಹೋಲಿಸಿದರೆ, ದೇಶದ 2ನೇ ಅತಿದೊದ್ದ ಸ್ಮಾರ್ಟ್‌ಫೋನ್‌ ಮಾರುಕಟ್ಟೆ 2022ರ ಸಂಪೂರ್ಣ ಹಣಕಾಸು ವರ್ಷದ ರಫ್ತು ದಾಖಲೆಯನ್ನು ಡಿಸೆಂಬರ್‌ ವೇಳೆಗ ಮುಟ್ಟಲಿದೆ ಎಂದು ಹೇಳಲಾಗಿದೆ. 2023ರ ಹಣಕಾಸು ವರ್ಷದಲ್ಲಿ ಮೊಬೈಲ್‌ ಫೋನ್‌ ರಫ್ತು ಅಂದಾಜು 8.5 ರಿಂದ 9 ಬಿಲಿಯನ್‌ ಅಮೆರಿಕನ್‌ ಡಾಲರ್‌ ಗಡಿ ಮುಟ್ಟಬಹುದು ಎನ್ನಲಾಗಿದೆ. 2022ರ ಹಣಕಾಸಿ ವರ್ಷದಲ್ಲಿ ಭಾರತವು ಅಂದಾಜು 5.8 ಬಿಲಿಯನ್‌ ಅಮೆರಿಕನ್‌ ಡಾಲರ್ ಮೌಲ್ಯದ ಮೊಬೈಲ್‌ ಫೋನ್‌ಗಳನ್ನು ರಫ್ತು ಮಾಡಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೀರಸ ಪ್ರತಿಕ್ರಿಯೆಗಳ ಕಾರಣದಿಂದಾಗಿ ಮೊಬೈಲ್‌ ಫೋನ್‌ ರಫ್ತುಗಳ ಪ್ರಮಾಣ ಕಳೆದ ಅಕ್ಟೋಬರ್‌ನಲ್ಲಿಇಳಿಕೆಯಾಗಿತ್ತು. ಅಂದಾಜು 900 ಮಿಲಿಯನ್‌ ಯುಎಸ್‌ ಡಾಲರ್‌ಗೆ ಇದು ಇಳಿಕೆಯಾಗಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಇದರ ಪ್ರಮಾಣ ದಾಖಲೆಯ 1 ಬಿಲಿಯನ್‌ ಯುಎಸ್‌ ಡಾಲರ್‌ ಗಡಿ ಮುಟ್ಟಿತ್ತು.

ನದಿಯಲ್ಲಿ ತೇಲುತ್ತಿದ್ದ 38 ಲಕ್ಷ ರೂಪಾಯಿ ಮೌಲ್ಯದ 317 ಮೊಬೈಲ್‌ ಫೋನ್‌ ವಶಪಡಿಸಿಕೊಂಡ ಬಿಎಸ್‌ಎಫ್‌!

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರೊಡಕ್ಷನ್‌ ಲಿಂಕ್ಡ್‌ ಇನ್ಸೆಂಟಿವ್‌ (ಪಿಎಲ್‌ಐ) ಯೋಜನೆ ಬೆಂಬಲದಲ್ಲಿ ದೇಶದ ಶೇ.90ರಷ್ಟು ಮೊಬೈಲ್‌ ರಫ್ತುಅನ್ನು ಆಪಲ್‌ ಹಾಗೂ ಸ್ಯಾಮ್‌ಸಂಗ್‌ ಕಂಪನಿಗಳೇ ಮಾಡುತ್ತವೆ. ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಸ್ಯಾಮ್‌ಸಂಗ್‌ ಕಂಪನಿಯ ಗೆಲಾಕ್ಸಿ ಎ ಹಾಗೂ ಎಂ ಸರಣಿಯ ಮೊಬೈಲ್‌ ಫೋನ್‌ಗಳು, ಐಫೋನ್‌ನ 12, 13 ಹಾಗೂ 14ರ ಫೋನ್‌ಗಳು ಭಾರತದಿಂದಲೇ ವಿಶ್ವಕ್ಕೆ ರಫ್ತಾಗುತ್ತದೆ.

70 ಸಾವಿರ ಕೋಟಿ ಎಲೆಕ್ಟ್ರಾನಿಕ್ಸ್‌ ಉತ್ಪನ್ನ ರಫ್ತು: ರಾಜೀವ್‌ ಚಂದ್ರಶೇಖರ್‌

ಭಾರತ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ICEA) ಪ್ರಕಾರ, ರಫ್ತು ಹೆಚ್ಚಾದಂತೆ, ಮೊಬೈಲ್ ಆಮದುಗಳ ಮೇಲಿನ ಭಾರತದ ಅವಲಂಬನೆಯು 2014-15 ರಲ್ಲಿ 78% ರಿಂದ FY22 ರಲ್ಲಿ ಸುಮಾರು 5% ಕ್ಕೆ ಇಳಿದಿದೆ ಎಂದು ಹೇಳುತ್ತದೆ. FY23 ರಲ್ಲಿ, ಆಮದುಗಳು ಸುಮಾರು 4% ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.