ನದಿಯಲ್ಲಿ ತೇಲುತ್ತಿದ್ದ 317 ಮೊಬೈಲ್ ಗಳನ್ನು ಬಿಎಸ್ಎಫ್ ವಶಪಡಿಸಿಕೊಂಡಿದೆ. ಅವುಗಳ ಬೆಲೆ 38 ಲಕ್ಷ ರೂಪಾಯಿಗೂ ಹೆಚ್ಚು. ಪ್ಲಾಸ್ಟಿಕ್ ಕಂಟೈನರ್‌ಗಳಲ್ಲಿ ಮೊಬೈಲ್ ಫೋನ್‌ಗಳನ್ನು ಬಿಎಸ್‌ಎಫ್ ಪತ್ತೆ ಮಾಡಿದೆ. ಈ ಮೊಬೈಲ್‌ಗಳನ್ನು ಬಾಳೆ ದಂಡಿಗೆ ಕಟ್ಟಿ ನದಿಗೆ ಬಿಡಲಾಗಿತ್ತು. ಕಂಟೈನರ್ ಬಾಂಗ್ಲಾದೇಶದ ಕಡೆಗೆ ಸಾಗುತ್ತಿತ್ತು. ಈ ಹಿಂದೆ ಬಿಎಸ್‌ಎಫ್ ಕೂಡ ಮೊಬೈಲ್‌ಗಳನ್ನು ವಶಪಡಿಸಿಕೊಂಡಿತ್ತು. ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಪ್ರಕರಣ ನಡೆದಿದೆ.

ಕೋಲ್ಕತ್ತಾ (ಅ.10): ಮಾಲ್ಡಾ ಜಿಲ್ಲೆಯ ಭಾರತ ಹಾಗೂ ಬಾಂಗ್ಲಾದೇಶ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಅಂದಾಜು 38 ಲಕ್ಷ ರೂಪಾಯಿ ಮೌಲ್ಯದ 317 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದೆ. ಹಾಗಂತ ಈ ಮೊಬೈಲ್‌ಫೋನ್‌ಗಳನ್ನು ಯಾವುದೇ ವ್ಯಕ್ತಿಯಿಂದ ವಶಪಡಿಸಿಕೊಂಡಿಲ್ಲ.ಬಾಂಗ್ಲಾದೇಶಕ್ಕೆ ಕಳ್ಳ ಸಾಗಣೆಯಾಗುತ್ತಿದ್ದ ಈ ಮೊಬೈಲ್‌ಗಳು ಪಾಗ್ಲಾ ನದಿಯಲ್ಲಿ ತೇಲುತ್ತಿದ್ದವು. ಪ್ಲಾಸ್ಟಿಕ್‌ ಕಂಟೇನರ್‌ಗಳನ್ನು ಮೊಬೈಲ್‌ಗಳನ್ನು ಹಾಕಿ ಈ ಕಂಟೇರ್‌ಗಳನ್ನು ಬಾಳೆ ದಿಂಡಿಗೆ ಕಟ್ಟಿ ಪಾಲ್ಗಾ ನದಿಯಲ್ಲಿ ತೇಲಿ ಬಿಡಲಾಗಿತ್ತು. ಏಕಕಾಲದಲ್ಲಿ ಇಷ್ಟು ಪ್ರಮಾಣದ ಬಾಳೆ ದಿಂಡುಗಳು ನದಿಯಲ್ಲಿ ತೇಲುತ್ತಿರುವುದನ್ನು ಕಂಡು ಅನುಮಾನ ವ್ಯಕ್ತಪಡಿಸಿದಾಗ, ಅದರಲ್ಲಿ ಮೊಬೈಲ್‌ ಫೋನ್‌ಗಳಿರುವುದು ಪತ್ತೆಯಾಗಿದೆ. ಶನಿವಾರ, ದಕ್ಷಿಣ ಬಂಗಾಳ ಫ್ರಾಂಟಿಯರ್ 70 ಬೆಟಾಲಿಯನ್ ಸೈನಿಕರು ಬಾರ್ಡರ್ ಔಟ್ ಪೋಸ್ಟ್ ಲೋಧಿಯಾದಲ್ಲಿ ಪಾಗ್ಲಾ ನದಿಯಲ್ಲಿ ತೇಲುವ ಬಾಳೆ ದಿಂಡುಗಳನ್ನು ಕಂಡಿದ್ದರು. ಅವುಗಳನ್ನು ಪರಿಶೀಲನೆ ಮಾಡಿದಾಗ, ಈ ಬಾಳೆ ದಿಂಡಿಗೆ ಕಟ್ಟಿದ್ದ ಪ್ಲಾಸ್ಟಿಕ್‌ ಕಂಟೇನರ್‌ಗಳು ಪತ್ತೆಯಾದವು. ಈ ಕಂಟೇನರ್‌ಗಳು ಬಾಂಗ್ಲಾದೇಶದ ಕಡೆಗೆ ಸಾಗುತ್ತಿದ್ದವು. ಕೊನೆಗೆ ನದಿಯಲ್ಲಿ ತೇಲುತ್ತಿದ್ದ ಎಲ್ಲಾ ಬಾಳೆ ದಿಂಡುಗಳನ್ನು ಮೇಲಕ್ಕೆತ್ತಿದಾಗ, ಅವುಗಳಲ್ಲಿ ಪಟ್ಟು 317 ಮೊಬೈಲ್‌ ಫೋನ್‌ಗಳು ಪತ್ತೆಯಾಗಿವೆ.

ಈ ಮೊಬೈಲ್‌ ಫೋನ್‌ಗಳು ಯಾರು ಕಳ್ಳಸಾಗಣೆ ಮಾಡುತ್ತಿದ್ದರು. ಯಾವ ಕಾರಣಕ್ಕಾಗಿ ಸಾಗಣೆ ಮಾಡುತ್ತಿದ್ದರು ಎನ್ನುವ ವಿವರ ಇನ್ನಷ್ಟೇ ತಿಳಿಯಬೇಕಿದೆ. ಈ ಎಲ್ಲಾ ಫೋನ್‌ಗಳು ವಿವಿಧ ಕಂಪನಿಗಳದ್ದಾಗಿವೆ. ಒಟ್ಟಾರೆ. ಇದರ ಮೌಲ್ಯ 38 ಲಕ್ಷದ 83 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ತನಗೆ ಗುಪ್ತಚರ ಮಾಹಿತಿ ಸಿಕ್ಕಿದೆ ಎಂದು 70ನೇ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ತಿಳಿಸಿದ್ದಾರೆ. ವಶಪಡಿಸಿಕೊಂಡ ಮೊಬೈಲ್‌ ಫೋನ್‌ಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಆಂಗ್ಲ ಬಜಾರ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಳ್ಳಸಾಗಣೆ ತಡೆಯಲು ಬಿಎಸ್‌ಎಫ್ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅವರು ಈ ವೇಳೆ ಹೇಳಿದ್ದಾರೆ.ಕಳ್ಳಸಾಗಣೆದಾರರನ್ನು ಪತ್ತೆ ಮಾಡಲಾಗುತ್ತಿದೆ. ಕಾನೂನಿನಡಿಯಲ್ಲಿಯೂ ಆತನಿಗೆ ಶಿಕ್ಷೆಯನ್ನೂ ನೀಡಲಾಗುತ್ತದೆ ಎಂದಿದ್ದಾರೆ. 

ಭಾರತ-ಬಾಂಗ್ಲಾದೇಶ (India-Bangladesh Border) ಗಡಿಯಲ್ಲಿ ಕಳ್ಳಸಾಗಣೆ ತಡೆಯಲು ಗಡಿ ಭದ್ರತಾ ಪಡೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು 70 ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಹೇಳಿದ್ದಾರೆ. ಈ ಕಾರಣದಿಂದಾಗಿ ಕಳ್ಳಸಾಗಣೆಯಂತಹ (smuggling ) ಚಟುವಟಿಕೆಗಳಲ್ಲಿ ತೊಡಗಿರುವ ಜನರು ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಮತ್ತು ಅವರಲ್ಲಿ ಕೆಲವರು ಬಂಧಿತರಾಗುತ್ತಿದ್ದಾರೆ ಮತ್ತು ಕಾನೂನಿನ ಪ್ರಕಾರ ಶಿಕ್ಷೆಗೆ ಒಳಗಾಗುತ್ತಿದ್ದಾರೆ, ಎಂದು ಹೇಳಿದ್ದಾರೆ.

ನೇಪಾಳ, ಬಾಂಗ್ಲಾದೇಶದ ಗಡಿಯಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಳ, ಆತಂಕಕಾರಿ ಎಂದ ಗುಪ್ತಚರ ಇಲಾಖೆ!

ಬಿಎಸ್ಎಫ್ (Border Security Force) ಗುಪ್ತಚರ ಮೂಲಗಳಿಂದ ಪಡೆದ ನಿಖರ ಮಾಹಿತಿಯ ಆಧಾರದ ಮೇಲೆ, ಬಾರ್ಡರ್ ಔಟ್ ಪೋಸ್ಟ್ ಲೋಧಿಯಾ ಪಡೆಗಳು ಪಾಗ್ಲಾ ನದಿಯಲ್ಲಿ ಬಾಳೆ ದಿಂಡಿಗೆ ಕಟ್ಟಲಾದ ಕೆಲವು ಪ್ಲಾಸ್ಟಿಕ್ ಕಂಟೇನರ್‌ಗಳು ನದಿಯ ಉದ್ದಕ್ಕೂ ಬಾಂಗ್ಲಾದೇಶದ ಕಡೆಗೆ ತೇಲುತ್ತಿರುವುದನ್ನು ಗಮನಿಸಿದವು ಎಂದು ಬಿಎಸ್ಎಫ್ (BSF) ತಿಳಿಸಿದೆ.

ಬಾಣಸಿಗರ ಕರೆದೊಯ್ದು ಸೈನಿಕರಿಗೆ ರುಚಿ ರುಚಿ ಭೋಜನ ಸಿದ್ದಪಡಿಸಿದ ರಾಮ್‌ ಚರಣ್‌

ಸೆಪ್ಟೆಂಬರ್‌ನಲ್ಲಿ, ಮಾಲ್ಡಾದ ಸುಖದೇವ್‌ಪುರದ ಗಡಿ ಪೋಸ್ಟ್‌ನ ಪ್ರದೇಶದಲ್ಲಿ ಸೈನಿಕರು ಒಂದು ಡಜನ್ ಜನರನ್ನು ಕಾರ್ಡನ್ ಬಳಿ ಹಿಡಿದಿದ್ದರು. ಅವರ ಬಳಿ 8 ಪ್ಯಾಕೆಟ್‌ಗಳು ಪತ್ತೆಯಾಗಿದ್ದವು. ಈ ಪೈಕಿ 39 ಲಕ್ಷದ 29 ಸಾವಿರ ಮೌಲ್ಯದ 359 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಫೋನ್‌ಗಳು (Mobile Phone) ಸಹ ವಿವಿಧ ಕಂಪನಿಗಳಿಂದ ಬಂದವು. ಈ ಪ್ರಕರಣದಲ್ಲಿ ಹಲವು ಭಾರತೀಯ ಸ್ಮಗ್ಲರ್‌ಗಳ ಹೆಸರೂ ಮುನ್ನೆಲೆಗೆ ಬಂದಿತ್ತು. ಮಾಲ್ಡಾ ಗಡಿಯಲ್ಲಿರುವ ಪಾಗ್ಲಾ ನದಿಯ ಮೂಲಕ ಕಳ್ಳಸಾಗಣೆ ನಡೆಯುತ್ತದೆ. ಬಾಳೆ ದಿಂಡನ್ನು ನದಿಗೆ ಎಸೆಯಲಾಗುತ್ತದೆ. ಕಳ್ಳಸಾಗಣೆ ಸರಕುಗಳನ್ನು ಅವುಗಳಿಗೆ ಕಟ್ಟಿ ಸಾಗಿಸಲಾಗುತ್ತದೆ.