ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವು ಮಹಾವಿಷ್ಣುವಿನ 11ನೇ ಅವತಾರ ಎಂದು ಭಾವಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವು ಮಹಾವಿಷ್ಣುವಿನ 11ನೇ ಅವತಾರ ಎಂದು ಭಾವಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ನಡೆದ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಜನರು ದೇವರು ಹಾಗೂ ಗುರುಗಳ ಕಡೆ ಗಮನ ಕೊಡುವ ಬದಲು ಕೇವಲ ತನ್ನ ಕಡೆಯೇ ಸದಾ ಗಮನ ಕೊಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಾರೆ ಎಂದು ಟೀಕಿಸಿದರು. ಸದಾ ತಮ್ಮ ಬಗ್ಗೆಯೇ ಪ್ರಚಾರ ಮಾಡಿಕೊಳ್ಳುವ ಅವರು ತಾನು ವಿಷ್ಣುವಿನ 11ನೆ ಅವತಾರ ಎಂದು ಭಾವಿಸಿದ್ದಾರೆ ಎಂದು ಮಲ್ಲಿಕಾರ್ಜುನ್ ಖರ್ಗೆ(Mallikarjuna Kharge) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ಸಮಾವೇಶದಲ್ಲಿ ದೇಶದ ನಿರುದ್ಯೋಗದ ಬಗ್ಗೆ ಮಾತನಾಡಿದ ಖರ್ಗೆ, ರೈಲ್ವೆ ಸೇರಿದಂತೆ ದೇಶದ ಸರ್ಕಾರಿ ವಲಯದ ಹಲವು ವಿಭಾಗಗಳಲ್ಲಿ 30 ಲಕ್ಷಕ್ಕೂ ಅಧಿಕ ಉದ್ಯೋಗವಕಾಶಗಳಿದ್ದು, ಈ ಉದ್ಯೋಗಳ ಬಗ್ಗೆ ಸರ್ಕಾರ ಸರಿಯಾಗಿ ಯುವ ಜನತೆಗೆ ಅವಕಾಶ ನೀಡುತ್ತಿಲ್ಲ, ಅಲ್ಲದೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿವೀರ್ (Agniveer) ಹುದ್ದೆಗಳು ಕೇವಲ 4 ವರ್ಷಗಳಿಗೆ ಮಾತ್ರ ಸೀಮಿತವಾಗಿದೆ. ಇದಾದ ನಂತರ ಅಗ್ನಿವೀರ್‌ಗಳು ನಿರುದ್ಯೋಗಿಗಳಾಗಬೇಕಾಗುತ್ತದೆ ಎಂದು ಖರ್ಗೆ ದೂರಿದ್ದಾರೆ.
ಮೋದಿ ಮತ್ತೆ ಪ್ರಧಾನಿಯಾದರೆ ಇದುವೇ ನನ್ನ ಕೊನೆಯ ಚುನಾವಣೆ, ಮಲ್ಲಿಕಾರ್ಜುನ ಖರ್ಗೆ ಘೋಷಣೆ!
ಡೆಹ್ರಾಡೂನ್‌ನಲ್ಲಿ ನಡೆದ ರೆಸಾರ್ಟ್ ರಿಸೆಪ್ಷನಿಸ್ಟ್ ಕೊಲೆ ಪ್ರಕರಣದ ಬಗ್ಗೆಯೂ ಪ್ರಸ್ತಾಪಿಸಿದ ಖರ್ಗೆ, ಯಾಕೆ ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದರು. ಅಲ್ಲದೇ ಸರ್ಕಾರವೂ ಆರೋಪಿಗಳ ಬಗ್ಗೆ ಮೃದು ಧೋರಣೆ ತೋರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ನಿತೀಶ್ ನಿರ್ಗಮನ: ಇಂಡಿಯಾ ಕೂಟಕ್ಕೆ ಆಘಾತ; ಸೀಟು ಹಂಚಿಕೆಗೆ ಕಾಂಗ್ರೆಸ್‌ಗೆ ತಲೆನೋವು!
