Asianet Suvarna News Asianet Suvarna News

Russia Ukraine Crisis: ಪುಟಿನ್ ಜೊತೆ ಮತ್ತೆ ಮೋದಿ ಮಾತು, ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಚರ್ಚೆ!

ರಷ್ಯಾ ಅಧ್ಯಕ್ ವ್ಲಾಡಿಮಿರ್ ಪುಟಿನ್ ಜೊತೆ ಮೋದಿ ಮಾತು

ಉಕ್ರೇನ್ ನಲ್ಲಿರುವ ಭಾರತೀಯರ ರಕ್ಷಣೆಯ ಬಗ್ಗೆ ಚರ್ಚೆ

ಯುದ್ಧ ಆರಂಭವಾದ ಬಳಿಕ 2ನೇ ಬಾರಿಗೆ ಮಾತುಕತೆ

PM Narendra Modi Speaks To Russia President Vladimir Putin In Second Call Since Outbreak Of War In Ukraine san
Author
Bengaluru, First Published Mar 2, 2022, 11:21 PM IST | Last Updated Mar 2, 2022, 11:28 PM IST

ನವದೆಹಲಿ (ಮಾ.2): ಯುದ್ಧಪೀಡಿತ ಉಕ್ರೇನ್ ನಲ್ಲಿರುವ (war torn Ukraine) ಭಾರತೀಯ ಪ್ರಜೆಗಳನ್ನು (Indian Nationals) ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ರಕ್ಷಣಾ ಕಾರ್ಯಾಚರಣೆ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi ) ಬುಧವಾರ ರಷ್ಯಾ ಅಧ್ಯಕ್ಷ  ವ್ಲಾಡಿಮಿರ್ ಪುಟಿನ್ (Russia President Vladimir Putin) ಅವರೊಂದಿಗೆ ಬುಧವಾರ ಮಾತುಕತೆ ನಡೆಸಿದ್ದಾರೆ. ಇದು ಉಕ್ರೇನ್ ನಲ್ಲಿ ಯುದ್ಧ ಆರಂಭವಾದ ಬಳಿಕ ರಷ್ಯಾ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಅವರ 2ನೇ ದೂರವಾಣಿ ಮಾತುಕತೆಯಾಗಿದೆ.  

ಯುದ್ಧ ಆರಂಭವಾದ 2ನೇ ದಿನಕ್ಕೆ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದ್ದ ನರೇಂದ್ರ ಮೋದಿ, ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಮನವಿ ಮಾಡಿದ್ದರು. ಅದರೊಂದಿಗೆ ರಾಜತಾಂತ್ರಿಕ ಮಾತುಕತೆಗಳು ಮತ್ತು ಸಂವಾದದ ಹಾದಿಗೆ ಮರಳಲು ಎಲ್ಲಾ ಕಡೆಯಿಂದ ಸಂಘಟಿತ ಪ್ರಯತ್ನಗಳಿಗೆ ಕರೆ ನೀಡಿದ್ದರು.

ಕಳೆದ ಬಾರಿಯ ದೂರವಾಣಿ ಮಾತುಕತೆಯಲ್ಲೂ, ಪ್ರಧಾನಿ ಮೋದಿ ಅವರು ಉಕ್ರೇನ್‌ನಲ್ಲಿರುವ ಭಾರತೀಯ ನಾಗರಿಕರ, ವಿಶೇಷವಾಗಿ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಭಾರತದ ಕಳವಳಗಳ ಬಗ್ಗೆ ರಷ್ಯಾದ ಅಧ್ಯಕ್ಷರಿಗೆ ಮನವರಿಕೆ ಮಾಡಿದ್ದರು ಮತ್ತು ಅವರ ಸುರಕ್ಷಿತ ನಿರ್ಗಮನ ಮತ್ತು ಭಾರತಕ್ಕೆ ಮರಳಲು ಭಾರತವು ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂದು ತಿಳಿಸಿದ್ದರು.


ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ, ನರೇಂದ್ರ ಮೋದಿ ಹಾಗೂ ಪುಟಿನ್ ಅವರ ನಡುವೆ ಮಾತುಕತೆಯ ಬಗ್ಗೆ ಮಾತನಾಡಿದ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi), "ಪ್ರಧಾನಿ ಹಲವಾರು ದೇಶಗಳ ನಾಯಕರೊಂದಿಗೆ ಮಾತನಾಡುತ್ತಿದ್ದಾರೆ. ಅಂತಹ ಮಾತುಕತೆಗಳು ನಡೆದಾಗ ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ಎಲ್ಲಕ್ಕಿಂತ ಮುಂಚಿತವಾಗಿಯೇ ಹೇಳುವುದನ್ನು ನಾವು ಇಷ್ಟಪಡುವುದಿಲ್ಲ' ಎಂದು ತಿಳಿಸಿದ್ದಾರೆ.

ಉಕ್ರೇನ್‌ನಲ್ಲಿ MBBS ಮಾಡ್ತಿದ್ದ ಗ್ರಾ.ಪಂ. ಅಧ್ಯಕ್ಷೆ: ಯುದ್ಧದ ಬಳಿಕ ಬಯಲಾದ ರಹಸ್ಯ
ಫೆಬ್ರುವರಿ 26 ರಂದು ಭಾರತ ಸರ್ಕಾರವು, ಯುದ್ಧಪೀಡಿತ ಉಕ್ರೇನ್ ನಿಂದ ತನ್ನ ನಾಗರೀಕರನ್ನು ರಕ್ಷಣೆ ಮಾಡುವ 'ಆಪರೇಷನ್ ಗಂಗಾ'  (Operation Ganga) ಕಾರ್ಯಾಚರಣೆಯನ್ನು ಘೋಷಿಸಿತು. ಯುದ್ಧದ ನಡುವೆ ಸಿಕ್ಕಿನಿದ್ದ ಎಲ್ಲಾ ನಾಗರೀಕರನ್ನು ಸುರಕ್ಷಿತವಾಗಿ ಮರಳಿ ಕರೆತರುವುದೇ ಸರ್ಕಾರದ ಬಹುದೊಡ್ಡ ಉದ್ದೇಶವಾಗಿತ್ತು. ಫೆ. 27 ರಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಆಪರೇಷನ್ ಗಂಗಾ ಕಾರಣಕ್ಕಾಗಿಯೇ ಮೀಸಲಾಗಿದ್ದ ಹೊಸ ಟ್ವಿಟರ್ ಹ್ಯಾಂಡಲ್ ಅನ್ನು ರಚಿಸಿತ್ತು.

ಹಂಗೇರಿ, ಪೋಲೆಂಡ್, ರೊಮೇನಿಯಾ ಮತ್ತು ಸ್ಲೋವಾಕ್ ಗಣರಾಜ್ಯದ ಗಡಿ ದಾಟುವ ಸ್ಥಳಗಳ ಮೂಲಕ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಸಹಾಯ ಮಾಡಲು ಸ್ಥಾಪಿಸಲಾದ 24x7 ನಿಯಂತ್ರಣ ಕೇಂದ್ರಗಳ ಪಿನ್ ಮಾಡಿದ ಸಹಾಯವಾಣಿ ಸಂಖ್ಯೆಗಳಿವೆ. 

Russia Ukraine Crisis: ರಷ್ಯಾದ ಸೇನಾ ಟ್ಯಾಂಕರ್ ಅನ್ನೇ ಟೋಯಿಂಗ್ ಮಾಡಿದ ಉಕ್ರೇನ್ ರೈತ!
ಆಪರೇಷನ್  ಗಂಗಾ ಕಾರ್ಯಾಚರಣೆಯ ಭಾಗವಾಗಿ, ಮಾರ್ಚ್ 8 ರವರೆಗೆ 46 ವಿಮಾನಗಳನ್ನು ನಿಗದಿಪಡಿಸಲಾಗಿದೆ. ಯೋಜಿತ ವಿಮಾನಗಳಲ್ಲಿ 29 ಬುಕಾರೆಸ್ಟ್‌ನಿಂದ, 10 ಬುಡಾಪೆಸ್ಟ್‌ನಿಂದ, ಆರು ರ್ಜೆಸ್ಜೋವ್‌ನಿಂದ ಮತ್ತು ಒಂದು ಕೊಸಿಸ್‌ನಿಂದ ಭಾರತಕ್ಕೆ ಪ್ರಯಾಣಿಸಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇಲ್ಲಿಯವರೆಗೆ, ಏರ್ ಇಂಡಿಯಾ, ಇಂಡಿಗೋ ಮತ್ತು ಸ್ಪೈಸ್‌ನ 9 ವಿಶೇಷ ವಿಮಾನಗಳು 2,012 ಭಾರತೀಯ ಪ್ರಜೆಗಳನ್ನು ವಾಪಸ್ ಕರೆತಂದಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ದಿನ ಎರಡು ಬಾರಿ ರಕ್ಷಣಾ ಕಾರ್ಯಾಚರಣೆ ಪ್ರಯತ್ನಗಳ ಕುರಿತು ಬ್ರೀಫಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ಸ್ಥಳಾಂತರಿಸುವ ಪ್ರಯತ್ನಗಳಿಗೆ ಅನುಕೂಲವಾಗುವಂತೆ ಅವರು ನಾಲ್ವರು ಕೇಂದ್ರ ಸಚಿವರನ್ನು ಗಡಿ ದೇಶಗಳಿಗೆ ಕಳುಹಿಸಿದ್ದಾರೆ. ಸಚಿವರಾದ ಹರ್ದೀಪ್ ಸಿಂಗ್ ಪುರಿ (ಹಂಗೆರಿ), ಜ್ಯೋತಿರಾದಿತ್ಯ ಸಿಂಧಿಯಾ (ರೊಮೇನಿಯಾ), ಜನರಲ್ ವಿಕೆ ಸಿಂಗ್ (ಪೋಲೆಂಡ್) ಮತ್ತು ಕಿರಣ್ ರಿಜಿಜು (ಸ್ಲೋವಾಕಿಯಾ) ಭಿನ್ನ ದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.

 

Latest Videos
Follow Us:
Download App:
  • android
  • ios