ಪ್ರಧಾನಿ ನರೇಂದ್ರ ಮೋದಿ ಆತ್ಮೀಯ ಸ್ನೇಹಿತ ಇನ್ನಿಲ್ಲ/ ಮೋದಿಯವರ ಆತ್ಮೀಯ ಸ್ನೇಹಿತ ಹರಿಭಾಯಿ ಆಧುನಿಕ್ (88 )ನಿಧನ/ ಮೋದಿಯವರನ್ನು ಬರಮಾಡಿಕೊಳ್ಳಲು ಬರುತ್ತಿದ್ದರು

ನವದೆಹಲಿ(ಫೆ. 10) ಆರ್‌ಎಸ್‌ಎಸ್ ಹಿರಿಯ ನಾಯಕ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆತ್ಮೀಯ ಸ್ನೇಹಿತ ಹರಿಭಾಯಿ ಆಧುನಿಕ್ (88 )ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತ ಇದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದ್ವಾರಕಾದ ಪ್ರಸಿದ್ಧ ದ್ವಾರಕಾಧೀಶ್ ದೇವಾಲಯದ ಆಡಳಿತ ಸಮಿತಿಯ ಸದಸ್ಯರಾಗಿದ್ದ ಹರಿಭಾಯ್ ನಾಯಕ್ ಬುಧವಾರ ಬೆಳಿಗ್ಗೆ ರಾಜ್‌ಕೋಟ್‌ನಲ್ಲಿರುವ ತಮ್ಮ ಮಗಳ ನಿವಾಸದಲ್ಲಿ ಕೊನೆಯುಸಿರೆಳೆದರು.

ದೇಶದ ಜನರಿಗೆ ಶಕ್ತಿ ತುಂಬಿದ ಮೋದಿ ಮಾತು

ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್), ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಯ ಸದಸ್ಯರಾಗಿ ಗುರುತಿಸಿಕೊಂಡಿದ್ದರು. ಜನಸಂಘದ ಕಾಲದಿಂದಲೂ ಜತೆಗಿದ್ದರು.

ಪ್ರಧಾನಿ ನರೇಂದ್ರ ಮೋದಿ ದ್ವಾರಕೆಗೆ ಭೇಟಿ ನೀಡಿದಾಘ ಆತ್ಮೀಯವಾಗಿ ಸ್ವಾಗತ ಮಾಡಿಕೊಳ್ಳುತ್ತಿದ್ದರು. ಸರಳ ಜೀವನನ ನಡೆಸುತ್ತಿದ್ದ ಉದಾತ್ತ ಚಿಂತನೆಯ ನಾಯಕ ಎಂದೇ ಹೆಸರು ಪಡೆದುಕೊಂಡಿದ್ದರು. ಗುರುವಾರ ಸಂಜೆ ದ್ವಾರಕಾದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಅನೇಕ ನಾಯಕರು ಕಂಬನಿ ಮಿಡಿದಿದ್ದಾರೆ.