Asianet Suvarna News Asianet Suvarna News

National Technology Day: ಪೋಖ್ರಾನ್ ಪರೀಕ್ಷೆ ವೀಡಿಯೊ ಮೂಲಕ ಅಟಲ್ ಬಿಹಾರಿ ವಾಜಪೇಯಿ ಸ್ಮರಿಸಿದ ಪ್ರಧಾನಿ ಮೋದಿ

ಇಂದಿಗೆ 24 ವರ್ಷಗಳ ಹಿಂದೆ ಭಾರತ 5 ಪರಮಾಣು ಪರೀಕ್ಷೆಗಳನ್ನು ನಡೆಸುವ ಮೂಲಕ ವಿಶ್ವವನ್ನೇ ಅಚ್ಚರಿಗೊಳಿಸಿತ್ತು. ಆಗ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಪರಮಾಣು ದಾಳಿ ನಡೆಸುವುದಿಲ್ಲ ಎಂದು ಹೇಳಿದ್ದರು. ಆದರೆ ಒಟ್ಟಿನಲ್ಲಿ 'ರಕ್ಷಣೆಗೆ ಪರಮಾಣು ಅಸ್ತ್ರಗಳನ್ನೂ ಬಳಸಬಹುದು' ಎಂದೂ ಹೇಳಿದ್ದರು.

PM Narendra Modi remembers Atal Bihari Vajpayee on National Technology Day sharing Video on Twitter mnj
Author
Bengaluru, First Published May 11, 2022, 6:08 PM IST

National Technology Day: ಪೋಖ್ರಾನ್ ಪರಮಾಣು ಪರೀಕ್ಷೆಯ ವಾರ್ಷಿಕೋತ್ಸವದ ರಾಷ್ಟ್ರೀಯ ತಂತ್ರಜ್ಞಾನ ದಿನದ ಸಂದರ್ಭದಲ್ಲಿ ದೇಶದ ವಿಜ್ಞಾನಿಗಳು ಮತ್ತು ಅವರ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಿ ಅವರ ರಾಜಕೀಯ ಧೈರ್ಯವನ್ನು ಮೋದಿ ಶ್ಲಾಘಿಸಿದರು.

ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನದಂದು ನಮ್ಮ ಪ್ರತಿಭಾವಂತ ವಿಜ್ಞಾನಿಗಳು ಮತ್ತು ಅವರ ಪ್ರಯತ್ನಗಳಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಅವರ ಪ್ರಯತ್ನದಿಂದಾಗಿ ನಾವು 1998 ರಲ್ಲಿ ಪೋಖ್ರಾನ್ ಪರಮಾಣು ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅವರು ಹೇಳಿದ್ದಾರೆ. 

ಪ್ರಧಾನಿ ಮೋದಿ ಅವರು ತಮ್ಮ ಟ್ವೀಟ್‌ನಲ್ಲಿ, 'ಅದ್ಭುತ ರಾಜಕೀಯ ಧೈರ್ಯ ಮತ್ತು ರಾಜಕೀಯ ಚಾಣಾಕ್ಷತೆಯನ್ನು ಪ್ರದರ್ಶಿಸಿದ ಅಟಲ್ ಜಿ ಅವರ ದಕ್ಷ ನಾಯಕತ್ವವನ್ನು ನಾವು ಹೆಮ್ಮೆಯಿಂದ ಸ್ಮರಿಸುತ್ತೇವೆ' ಎಂದು ಹೇಳಿದ್ದಾರೆ. ಪ್ರಧಾನಿ ತಮ್ಮ ಟ್ವೀಟ್‌ನೊಂದಿಗೆ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮಿಲ್ಕಿ ವೇ ಗ್ಯಾಲಕ್ಸಿಯ ಅಧ್ಭುತ ಚಿತ್ರ ಸರೆಹಿಡಿದ ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್: ಫೋಟೋ ನೋಡಿ

ಈ ವಿಡಿಯೋ ಕ್ಲಿಪ್‌ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪೋಖ್ರಾನ್ ಪರಮಾಣು ಪರೀಕ್ಷೆಯನ್ನು ಘೋಷಿಸುತ್ತಿರುವುದನ್ನು ಕಾಣಬಹುದು. ಪೋಖ್ರಾನ್ ಪರಮಾಣು ಪರೀಕ್ಷೆಯನ್ನು ಉಲ್ಲೇಖಿಸಿರುವ ವಿಡಿಯೋದಲ್ಲಿ ನರೇಂದ್ರ ಮೋದಿಯವರ ಧ್ವನಿಯೂ ಕೇಳಿಬರುತ್ತಿದೆ. ಇದಾದ ಬಳಿಕ ಅಟಲ್ ಬಿಹಾರಿ ಅವರು ಭಾರತ ಪರಮಾಣು ಅಸ್ತ್ರ ಪ್ರಯೋಗಿಸಲು ಮುಂದಾಗುವುದಿಲ್ಲ ಎಂದು ಹೇಳುತ್ತಿರುವುದು ಕಂಡು ಬರುತ್ತಿದೆ. ‘ರಕ್ಷಣೆಗೆ ಪರಮಾಣು ಅಸ್ತ್ರವನ್ನೂ ಬಳಸಬಹುದು’ ಎಂದು ಅಟಲ್ ಬಿಹಾರಿ ಅಂದು ಹೇಳಿದ್ದರು. 

 

 

1999 ರಿಂದ ರಾಷ್ಟ್ರೀಯ ತಂತ್ರಜ್ಞಾನ ದಿನ: ಭಾರತದ ವೈಜ್ಞಾನಿಕ ಸಾಮರ್ಥ್ಯ ಮತ್ತು ತಾಂತ್ರಿಕ ಪ್ರಗತಿಯನ್ನು ಗುರುತಿಸಲು, 1999 ರಿಂದ, ಮೇ 11  ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. 1998 ರ ಈ ದಿನದಂದು, ವಾಜಪೇಯಿ ಅವರ ನೇತೃತ್ವದಲ್ಲಿ ಭಾರತವು ಪೋಖ್ರಾನ್‌ನಲ್ಲಿ ಐದು ಪರಮಾಣು ಪರೀಕ್ಷೆಗಳಲ್ಲಿ ಮೊದಲನೆಯದನ್ನು ನಡೆಸಿತು. ಈ ಸಾಧನೆ ಮಾಡುವ ಮೂಲಕ ಭಾರತವು ಪರಮಾಣು-ಸಮೃದ್ಧ ರಾಷ್ಟ್ರಗಳಿಗೆ ಸೇರಿದ ಆರನೇ ರಾಷ್ಟ್ರವಾಯಿತು.

ತ್ರಿಶೂಲ್  ಪರೀಕ್ಷೆ: ಈ ದಿನ ಭಾರತವು ಸ್ವದೇಶಿ ನಿರ್ಮಿತ ಹ್ಯಾನ್ಸ್ -3 ವಿಮಾನ ಮತ್ತು ಅಲ್ಪ-ಶ್ರೇಣಿಯ ಕ್ಷಿಪಣಿ 'ತ್ರಿಶೂಲ್' ನ್ನು ಕೂಡ ಯಶಸ್ವಿಯಾಗಿ ಪರೀಕ್ಷಿಸಿದೆ, ಇದು ದೇಶಕ್ಕೆ ದಾಖಲೆಯಾಗಿದೆ. ಈ ಪರೀಕ್ಷೆಗಳ ಮೂಲಕ ಭಾರತ ತನ್ನ ಶಕ್ತಿಯನ್ನು ಇಡೀ ವಿಶ್ವಕ್ಕೆ ಪ್ರದರ್ಶಿಸಿದೆ.

Follow Us:
Download App:
  • android
  • ios