Asianet Suvarna News Asianet Suvarna News

ಮಿಲ್ಕಿ ವೇ ಗ್ಯಾಲಕ್ಸಿಯ ಅಧ್ಭುತ ಚಿತ್ರ ಸರೆಹಿಡಿದ ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್: ಫೋಟೋ ನೋಡಿ

Webb Telescope's Milky Way Image: ಜೇಮ್ಸ್ ವೆಬ್ ಟೆಲಿಸ್ಕೋಪ್ ಮತ್ತೊಮ್ಮೆ ಖಗೋಳಶಾಸ್ತ್ರಜ್ಞರನ್ನು ಬೆರಗುಗೊಳಿಸಿದೆ, ಅದು ಹಿಂದೆಂದೂ ನೋಡಿರದ ಅಭೂತಪೂರ್ವ ವಿವರವಾದ ಬಾಹ್ಯಾಕಾಶದ ಚಿತ್ರವನ್ನು ಸೆರೆಹಿಡಿದಿದೆ

NASA James Webb Telescope latest image of Milky Way by Mid Infrared Instrument mnj
Author
Bengaluru, First Published May 10, 2022, 6:01 PM IST

Webb Telescope's Milky Way Image: ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವು  ಮತ್ತೊಮ್ಮೆ ತನ್ನ ಮಸೂರಗಳ ಮೂಲಕ ಬೆರಗುಗೊಳಿಸುವ ಚಿತ್ರವೊಂದನ್ನು ಕಳುಹಿಸಿದೆ. ಫ್ಲೈಯಿಂಗ್ ಅಬ್ಸರ್ವೇಟರಿ ಜೇಮ್ಸ್ ವೆಬ್ ಪ್ರಸ್ತುತ ಪರೀಕ್ಷೆಗೆ ಒಳಗಾಗುತ್ತಿದ್ದು, ನೆರೆಯ ಉಪಗ್ರಹ ನಕ್ಷತ್ರಪುಂಜದ ಇತ್ತೀಚಿನ ಪರೀಕ್ಷಾ ಚಿತ್ರಗಳನ್ನು ಭೂಮಿಗೆ ಹಿಂತಿರುಗಿಸಿದೆ ಮತ್ತು ನಾಸಾದ ಹಿಂದಿನ ಇನ್ಫ್ರಾರೆಡ್ ವೀಕ್ಷಣಾಲಯ, ಸ್ಪಿಟ್ಜರ್ ಬಾಹ್ಯಾಕಾಶ ದೂರದರ್ಶಕದಿಂದ ತೆಗೆದ ಚಿತ್ರಗಳೊಂದಿಗೆ ಹೋಲಿಸಿದರೆ ಈ ಫಲಿತಾಂಶಗಳು ಇನ್ನೂ ಉತ್ತಮಾವಗಿವೆ

ವೆಬ್‌ನ ಅತ್ಯಂತ ಶೀತ ಸಾಧನ: ಮಿಡ್-ಇನ್‌ಫ್ರಾರೆಡ್ ಇನ್‌ಸ್ಟ್ರುಮೆಂಟ್ (MIRI) ಕೇಂದ್ರೀಕರಿಸಿ ಈ ಚಿತ್ರವನ್ನು ವಿಜ್ಞಾನ ತಂಡವು ಸೆರೆಹಿಡಿದಿದೆ. ಉಪಕರಣವು ದಟ್ಟವಾದ ನಕ್ಷತ್ರಕ್ಷೇತ್ರವನ್ನು ಹೊಂದಿರುವ ದೊಡ್ಡ ಮೆಗೆಲಾನಿಕ್ ಕ್ಲೌಡ್‌ನ ಒಂದು ಭಾಗದ ಚಿತ್ರವನ್ನು ಸೆರೆಹಿಡಿದಿದೆ

ಬಾಹ್ಯಾಕಾಶದ ಇದೇ ಪ್ರದೇಶವನ್ನು ನಿವೃತ್ತ ಸ್ಪಿಟ್ಜರ್ ದೂರದರ್ಶಕವು ಸೆರೆಹಿಡಿದಿತ್ತು, ಇದು ಸಮೀಪ ಮತ್ತು ಮಧ್ಯ-ಇನ್ಫ್ರಾರೆಡ್ ಬ್ರಹ್ಮಾಂಡದ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಒದಗಿಸಿದ ಮೊದಲನೆಯ ದೂರದರ್ಶಕವಾಗಿದೆ.

ಹೊಸ ದೂರದರ್ಶಕದ 18 ಕನ್ನಡಿ ವಿಭಾಗಗಳು ಸ್ಪಿಟ್ಜರ್‌ನಲ್ಲಿರುವ ಒಂದೇ ವಿಭಾಗಕ್ಕಿಂತ ದೊಡ್ಡದಾಗಿದೆ. "ಈ ಚಿತ್ರವನ್ನು ನೀವು ನೋಡಿ ಬೆರಗಾಗುತ್ತೀರಿ" ಎಂದು ಅರಿಜೋನಾ ವಿಶ್ವವಿದ್ಯಾಲಯದ ಮಾರ್ಸಿಯಾ ರೈಕ್ ಹೇಳಿದ್ದಾರೆ. ಇವರು ವೆಬ್‌ನ ನೀಯರ್ ಇನ್ಫ್ರಾರೆಡ್ ಕ್ಯಾಮೆರಾದ ಮುಖ್ಯ ವಿಜ್ಞಾನಿಯಾಗಿದ್ದಾರೆ. ನಾಸಾ ಇನ್ಸ್ಟಾಗ್ರಾಮಿನಲ್ಲಿ ಹಂಚಿಕೊಂಡ ಚಿತ್ರ ಇಲ್ಲಿದೆ, ಇದರ ಸ್ಪಷ್ಟವಾದ ಚಿತ್ರವನ್ನು ಇಲ್ಲಿ ವೀಕ್ಷಿಸಿಬಹುದು 

 

 

ವೆಬ್ ಟಿಲಿಸ್ಕೋಪ್‌, ಅದರ ಗಣನೀಯವಾಗಿ ದೊಡ್ಡದಾದ ಪ್ರಾಥಮಿಕ ಕನ್ನಡಿ ಮತ್ತು ಸುಧಾರಿತ ಡಿಟೆಕ್ಟರ್‌ಗಳೊಂದಿಗೆ, ಸುಧಾರಿತ ಸ್ಪಷ್ಟತೆಯೊಂದಿಗೆ ಇನ್ಫ್ರಾರೆಡ್ ಆಕಾಶವನ್ನು ನೋಡಲು ನಮಗೆ ಅನುಮತಿಸುತ್ತದೆ,‌ ಈ ಬಗ್ಗೆ ಇನ್ನಷ್ಟು ಆವಿಷ್ಕಾರಗಳನ್ನು ಮಾಡುವಂತೆ ಪ್ರೇರೆಪಿಸುತ್ತದೆ ಎಂದು ನಾಸಾ ಹೇಳಿದೆ.

ಇತ್ತೀಚಿನ ಚಿತ್ರವು ಅಂತರತಾರಾ ಅನಿಲವನ್ನು ಅಭೂತಪೂರ್ವ ವಿವರಗಳಲ್ಲಿ ತೋರಿಸುತ್ತದೆ, ಇದು ಹಿಂದೆ ಸ್ಪಿಟ್ಜರ್ ಚಿತ್ರದಲ್ಲಿ ಸರೆಹಿಡಿಯಲ್ಲು ಸಾಧ್ಯವಾಗಿರಲಿಲ್ಲ. ಕಳೆದ ಡಿಸೆಂಬರ್‌ನಲ್ಲಿ ಪ್ರಾರಂಭವಾದ $10 ಶತಕೋಟಿ ವೆಬ್ ಬಾಹ್ಯಾಕಾಶಕ್ಕೆ ಕಳುಹಿಸಿದ ಅತಿದೊಡ್ಡ ಮತ್ತು ಶಕ್ತಿಶಾಲಿ ಖಗೋಳ ವೀಕ್ಷಣಾಲಯವಾಗಿದೆ. 

ಇದು ಸುಮಾರು 14 ಶತಕೋಟಿ ವರ್ಷಗಳ ಹಿಂದೆ ಮೊದಲ ನಕ್ಷತ್ರಗಳು ಮತ್ತು ಗೆಲಕ್ಸಿಗಳಿಂದ ಹೊರಸೂಸಲ್ಪಟ್ಟ ಬೆಳಕನ್ನು ಹುಡುಕುತ್ತದೆ ಮತ್ತು ಜೀವನದ ಸಂಭವನೀಯ ಚಿಹ್ನೆಗಳಿಗಾಗಿ ತೀಕ್ಷ್ಣವಾದ ಹುಡುಕಾಟ ನಡೆಸುತ್ತಿದೆ.

ಜೇಮ್ಸ್ ವೆಬ್ ತಂಡವು ಟೆಲಿಸ್ಕೋಪ್‌ನ ಮೊದಲ ಗುರಿ ಏನೆಂಬುದರ ಬಗ್ಗೆ ಮೌನವಾಗಿದ್ದರೂ, ದೂರದರ್ಶಕದ ಕಾರ್ಯಾಚರಣೆಗಳ ವಿವರವಾದ ವೇಳಾಪಟ್ಟಿಯನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಎರಡನೇ ಲಾಗ್ರೇಂಜ್ ಪಾಯಿಂಟ್‌ನಲ್ಲಿರುವ ವಿಶ್ವದ ಅತ್ಯಂತ ಶಕ್ತಿಶಾಲಿ ವೀಕ್ಷಣಾಲಯವು ಈಗ ಬ್ರಹ್ಮಾಂಡದ ಆಳಕ್ಕೆ ಇಣುಕಿ ನೋಡಲು ಮತ್ತು ನಮ್ಮ ಬ್ರಹ್ಮಾಂಡದ ಉಗಮದ ಬಗ್ಗೆ ಅಧ್ಯಯನ ನಡೆಸಲು ಸಂಪೂರ್ಣವಾಗಿ ಸಿದ್ಧವಾಗಿದೆ.

Follow Us:
Download App:
  • android
  • ios