Asianet Suvarna News Asianet Suvarna News

One Nation One Election: ಬೇರೆ ಬೇರೆ ಸಮಯದಲ್ಲಿ ಚುನಾವಣೆ ನಡೆದರೆ ಅಭಿವೃದ್ಧಿಗೆ ಅಡ್ಡಿ: ಮೋದಿ!

*ಒಂದು ದೇಶ, ಒಂದು ಚುನಾವಣೆ: ಮತ್ತೆ ಮೋದಿ ಪ್ರತಿಪಾದನೆ
*ಬೇರೆ ಬೇರೆ ಸಮಯದಲ್ಲಿ ಚುನಾವಣೆ ನಡೆದರೆ ಅಭಿವೃದ್ಧಿಗೆ ಅಡ್ಡಿ
*ಹೀಗಾಗಿ ಒಂದೇ ಸಲ ಎಲ್ಲ ಚುನಾವಣೆ ನಡೆವುದು ಅಗತ್ಯ
*ಎಲ್ಲ ಚುನಾವಣೆಗಳಲ್ಲಿ ಮತದಾನ ಶೇ.75ರ ಗಡಿ ದಾಟಬೇಕು
*ಮತದಾರ ದಿನದಂದು ಬಿಜೆಪಿಗರ ಜತೆ ಸಂವಾದದಲ್ಲಿ ಪ್ರಧಾನಿ ಅಭಿಪ್ರಾಯ

PM Narendra Modi once again calls for discussion on one nation one election mnj
Author
Bengaluru, First Published Jan 26, 2022, 8:12 AM IST

ನವದೆಹಲಿ (ಜ. 25): ಮತದಾನದ ಪ್ರಮಾಣ ಕಡಿಮೆ (Voting Percentage) ಆಗುತ್ತಿರುವ, ಅದರಲ್ಲೂ ವಿಶೇಷತಃ ನಗರ ಪ್ರದೇಶದ ‘ಸುಶಿಕ್ಷಿತ’ ಮತದಾರರು ಮತ ಹಾಕಲು ಮುಂದೆ ಬಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕಳವಳ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಪ್ರಜಾಸತ್ತೆ ಬೆಳಗಬೇಕು ಎಂದರೆ ಇದು ಬದಲಾಗಬೇಕು ಎಂದು ಕರೆ ನೀಡಿದ್ದಾರೆ. ಇದೇ ವೇಳೆ, ತಮ್ಮ ಈ ಹಿಂದಿನ ‘ಏಕ ದೇಶ-ಏಕ ಚುನಾವಣೆ’ (One Nation One Election)  ಹಾಗೂ ‘ಏಕ ದೇಶ-ಏಕ ಮತದಾರ ಪಟ್ಟಿ’ ಚಿಂತನೆಯನ್ನು ಪುನಃ ಪ್ರತಿಪಾದಿಸಿದ ಪ್ರಧಾನಿ, ಪದೇ ಪದೇ ನಡೆಯುವ ಚುನಾವಣೆಗಳು ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಉಂಟು ಮಾಡುತ್ತವೆ ಎಂದಿದ್ದಾರೆ.

‘ರಾಷ್ಟ್ರೀಯ ಮತದಾರರ ದಿನ’ವಾದ ಮಂಗಳವಾರ ದೇಶದ ವಿವಿಧ ಭಾಗಗಳ ಬಿಜೆಪಿ (BJP) ಕಾರ್ಯಕರ್ತರನ್ನು ಉದ್ದೇಶಿಸಿ ಆಡಿಯೋ ಭಾಷಣ ಮಾಡಿದ ಅವರು, ‘ಒಂದೇ ಸಲ ಇಡೀ ದೇಶದಲ್ಲಿ ಚುನಾವಣೆ ನಡೆಯುವುದು ಅಭಿವೃದ್ಧಿಗೆ ಪೂರಕ. ಒಮ್ಮೆ ಲೋಕಸಭೆ, ಮತ್ತೊಮ್ಮೆ ವಿಧಾನಸಭೆ, ಇನ್ನೊಮ್ಮೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುವುದರಿಂದ ಮಾದರಿ ನೀತಿ ಸಂಹಿತೆ ವಿವಿಧ ಸಮಯದಲ್ಲಿ ಜಾರಿಯಾಗುತ್ತದೆ. ಸಂಹಿತೆ ಜಾರಿಯಲ್ಲಿದ್ದಾಗ ಅಭಿವೃದ್ಧಿ ಚಟುವಟಿಕೆಗೆ ಅಡ್ಡಿಯಾಗುತ್ತದೆ. ಹೀಗಾಗಿ ದೇಶದಲ್ಲಿ ಒಂದೇ ಸಲ ಈ ಎಲ್ಲ ಚುನಾವಣೆ ನಡೆದರೆ ಅಭಿವೃದ್ಧಿಗೆ ಇರುವ ಅಡ್ಡಿ ದೂರವಾಗುತ್ತದೆ’ ಎಂದರು. ಈ ಬಗ್ಗೆ ಬಿಜೆಪಿ ಮತಗಟ್ಟೆಉಸ್ತುವಾರಿಗಳ ಜತೆ ಸಂವಾದ ನಡೆಸಲು ನಾನು ಉದ್ದೇಶಿಸಿದ್ದೇನೆ’ ಎಂದೂ ಹೇಳಿದರು.

ಇದನ್ನೂ ಓದಿ: ರಾಷ್ಟ್ರೀಯ ಮತದಾರರ ದಿನ: ಹೀಗಿದೆ ಇತಿಹಾಸ

ನಗರವಾಸಿಗಳ ಬಗ್ಗೆ ಬೇಸರ:‘1951-52ರಲ್ಲಿ ಕೇವಲ ಶೇ.45ರಷ್ಟುಮತದಾನ ಆಗಿತ್ತು. ಇದರ ಪ್ರಮಾಣ 2019ರಲ್ಲಿ ಶೇ.67ಕ್ಕೇರಿದೆ. ಇದು ಸಕಾರಾತ್ಮಕ ಬೆಳವಣಿಗೆ. ಆದರೆ ಇದು ಸಾಲದು. ಕಡಿಮೆ ಮತದಾನ ಯಾಕೆ ಆಗುತ್ತಿದೆ ಎಂದು ಎಲ್ಲ ನಾಗರಿಕರು ಹಾಗೂ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಮವವಿ ಮಾಡಿದರು.

ನಗರ ಪ್ರದೇಶಗಳಲ್ಲಿ, ಅದರಲ್ಲೂ ಸುಶಿಕ್ಷಿತರು ಹಾಗೂ ಶ್ರೀಮಂತರು ಎಂದು ಕರೆಸಿಕೊಳ್ಳುವ ಮತದಾರರು ಕೇವಲ ಸೋಷಿಯಲ್‌ ಮೀಡಿಯಾಗಳಲ್ಲಿ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತಾರೆ. ಆದರೆ ಮತಗಟ್ಟೆಗೆ ಬಂದು ಮತ ಹಾಕುವುದೇ ಇಲ್ಲ ಎಂದು ವಿಷಾದಿಸಿದರು. ಹೀಗಾಗಿ ಬಿಜೆಪಿ ಮತಗಟ್ಟೆಪ್ರಭಾರಿಗಳು ಪ್ರತಿ ಮತದಾರರ ಮನೆಗೂ ಹೋಗಿ ಮತ ಹಾಕಲು ಜನರನ್ನು ಒಲಿಸಬೇಕು. ಶೇ.75ರಷ್ಟುಮತದಾನ ಪ್ರತಿ ಚುನಾವಣೆಯಲ್ಲೂ ಆಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಇದನ್ನೂ ಓದಿಪುಟಿನ್, ಬೈಡೆನ್‌ರನ್ನೇ ಹಿಂದಿಕ್ಕಿದ ಮೋದಿ ಈಗ ವಿಶ್ವದ ನಂಬರ್ 1 ನಾಯಕ!

ಮತದಾನ ಹೆಚ್ಚಳಕ್ಕೆ ಚುನಾವಣಾ ಆಯೋಗ ಹಲವಾರು ಕ್ರಮ ಕೈಗೊಂಡಿದ್ದು ಶ್ಲಾಘನೀಯ ಎಂದ ಮೋದಿ, ಇತ್ತೀಚಿನ ವೋಟರ್‌-ಐಡಿ ಹಾಗೂ ಆಧಾರ್‌ ಲಿಂಕ್‌ ಯೋಜನೆಯು ಮತದಾನದಲ್ಲಿ ಪಾರದರ್ಶಕತೆ ಹೆಚ್ಚಿಸುತ್ತದೆ ಎಂದರು. 1950ರಲ್ಲಿ ಚುನಾವಣಾ ಆಯೋಗದ ರಚನೆ ಆಯಿತು. ಅದರ ಸ್ಥಾಪನಾ ದಿನವನ್ನು ‘ಮತದಾರ ದಿನ’ ಎಂದು ಆಚರಿಸಲಾಗುತ್ತದೆ. ದೇಶದ ಮತದಾರರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಇದು 12ನೇ ವರ್ಷದ ಮತದಾರರ ದಿನಾಚರಣೆಯಾಗಿದೆ.

ಹೆಚ್ಚಿನ ಯುವ ಮತದಾರರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸಲು  ಆಗಿನ ಪ್ರಧಾನಿ ಮನಮೋಹನ್ ಸಿಂಗ್ ( Manmohan Singh) ನೇತೃತ್ವದ ಕೇಂದ್ರ ಸರ್ಕಾರವೂ ಈ ದಿನದ ಆಚರಣೆಗೆ ಕಾನೂನು ಸಚಿವಾಲಯದ ಪ್ರಸ್ತಾವನೆಗೆ ಅನುಮೋದನೆ ನೀಡಿತು. ನಂತರ ಮೊದಲ ರಾಷ್ಟ್ರೀಯ ಮತದಾರರ ದಿನವನ್ನು ಜನವರಿ 25, 2011 ರಂದು ಆಚರಿಸಲಾಯಿತು.

Follow Us:
Download App:
  • android
  • ios