Asianet Suvarna News Asianet Suvarna News

ಬಿಜೆಪಿ ಪಟ್ಟಿಯಿಂದ ಹರ್ಷ ವರ್ಧನ್ ಔಟ್, ನಿವೃತ್ತಿ ಘೋಷಿಸಿ ಡಾಕ್ಟರ್ ವೃತ್ತಿಗೆ ಮರಳಿದ ಸಂಸದ!

ಬಿಜೆಪಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಪ್ರಕಟ ಕೆಲವರಲ್ಲಿ ಅಸಮಾಧನ ತರಿಸಿದೆ. ಮತ್ತೆ ಕೆಲವರು ಹೊಸಬರಿಗೆ ಅವಕಾಶ ಮಾಡಿಕೊಟ್ಟು ಸರಳತೆ ಮೆರೆದಿದ್ದಾರೆ.ದೆಹಲಿ ಹಾಲಿ ಸಂಸದ ಹರ್ಷ ವರ್ಧನ್‌ಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿಲ್ಲ. ಇದರ ಬೆನ್ನಲ್ಲೇ ಹರ್ಷ ವರ್ಧನ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇಷ್ಟೇ ಅಲ್ಲ ತಮ್ಮ ಡಾಕ್ಟರ್ ವೃತ್ತಿಗೆ ಮರಳಿದ್ದಾರೆ. 

BJP MP Harsh Vardhan quits politics and return to medical profession ahead of Lok sabha Election 2024 ckm
Author
First Published Mar 3, 2024, 4:52 PM IST

ನವದೆಹಲಿ(ಮಾ.03) ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದೆ. ದೆಹಲಿ ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿ ಘೋಷಿಸಲಾಗಿದೆ. ಇದು ಹಾಲಿ ಸಂಸದ, ಮಾಜಿ ಸಚಿವ ಹರ್ಷ ವರ್ಧನ್ ಬೇಸರಕ್ಕೆ ಕಾರಣವಾಗಿದೆ. ಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ರಾಜಕೀಯ ನಿವೃತ್ತಿ ಘೋಷಿಸಿದ ಹರ್ಷ ವರ್ಧನ್ ಇದೀಗ ತಮ್ಮ ಆರೋಗ್ಯ ಕ್ಲೀನಿಕ್ ಮುನ್ನಡೆಸಲು ನಿರ್ಧರಿಸಿದ್ದಾರೆ. 30 ವರ್ಷಗಳ ರಾಜಕೀಯ ಜೀವನವನ್ನು ಮೆಲುಕು ಹಾಕಿದ ಹರ್ಷ ವರ್ಧನ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ದೆಹಲಿ ಲೋಕಸಭಾ ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ದೆಹಲಿಯ ಚಾಂದಿನಿ ಚೌಕ್ ಲೋಕಸಭಾ ಕ್ಷೇತ್ರಕ್ಕೆ ಹರ್ಷ ವರ್ಧನ್ ಬದಲು ಪ್ರವೀಣ್ ಖಂಡೇಲ್‌ವಾಲ್ ಹೆಸರು ಘೋಷಿಸಿದೆ. ಮಾ.2ರಂದು ಲೋಕಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಪ್ರಕಟಿಸಿದೆ. ಇದೀಗ ಮಾ.3ಕ್ಕೆ ಹರ್ಷವರ್ಧನ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ಸಾಧ್ವಿ ಪ್ರಜ್ಞಾ ಸಿಂಗ್, ಮೀನಾಕ್ಷಿ ಲೇಖಿ ಸೇರಿ 33 ಸಂಸದರಿಗೆ ಬಿಜೆಪಿ ಟಿಕೆಟ್ ಮಿಸ್: ಸುಷ್ಮಾ ಪುತ್ರಿಗೆ ಡೆಲ್ಲಿ ಟಿಕೆಟ್

2 ಬಾರಿ ಸಂಸದರಾಗಿರುವ ಹರ್ಷ ವರ್ಧನ್ , ಮೋದಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಾರಿ ಹರ್ಷವರ್ಧನ್‌ಗೆ ಟಿಕೆಟ್ ನೀಡದ ಕಾರಣ, ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇದೇ ವೇಳೆ ಮತ್ತೆ ಡಾಕ್ಟರ್ ವೃತ್ತಿಗೆ ಮರಳುವುದಾಗಿ ಹರ್ಷವರ್ಧನ್ ಹೇಳಿಕೊಂಡಿದ್ದಾರೆ. ಕೃಷ್ಣನಗರದಲ್ಲಿರುವ ಇಎನ್‌ಟಿ ಕ್ಲಿನಿಕ್‌ಗೆ ಮರಳುತ್ತಿದ್ದೇನೆ. ಮತ್ತೆ ನನ್ನ ವೃತ್ತಿಗೆ ಮರಲು ನಾನು ಅತೀವ ಉತ್ಸುಕನಾಗಿದ್ದೇನೆ ಎಂದಿದ್ದಾರೆ.

30 ವರ್ಷಗಳ ರಾಜಕೀಯ ಜೀವನದಲ್ಲಿ ನಾನು 5 ವಿಧಾನಸಭಾ ಚುನಾವಣೆ, 2 ಲೋಕಸಭಾ ಚುನಾವಣೆ ಗೆದ್ದಿದ್ದೇನೆ. ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿ ಶಾಸಕ ಹಾಗೂ ಸಂಸದನಾದ ಹೆಮ್ಮೆಯಿದೆ. ಪಕ್ಷದ ನೀಡಿದ ಹಲವು ಜವಾಬ್ದಾರಿ ನಿರ್ವಹಿಸಿದ್ದೇನೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಭಾಗವಾಗಿ ಕೆಲಸ ಮಾಡಿದ್ದೇನೆ. ಇದೀಗ ಮತ್ತೆ ನಾನು ನನ್ನ ವೃತ್ತಿಯತ್ತ ಮರಳುತ್ತಿದ್ದೇನೆ ಎಂದು ಹರ್ಷ ವರ್ಧನ್ ಹೇಳಿದ್ದಾರೆ.

Loksabha: 2024ರ ಲೋಕಸಮರಕ್ಕೆ ಬಿಜೆಪಿ ಸೇನಾನಿಗಳ ಘೋಷಣೆ! 195 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಮೋದಿ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ಹರ್ಷ ವರ್ಧನ್ 2021ರ ಕೋವಿಡ್ ಸಂದರ್ಭದಲ್ಲಿ ಸಂಪುಟಕ್ಕೆ ಸರ್ಜರಿ ಮಾಡಲಾಗಿತ್ತು. ಈ ವೇಳೆ ಸಂಪುಟ ಪುನಾರಚನೆ ವೇಳೆ ಹರ್ಷ ವರ್ಧನ್ ಸಚಿವ ಸ್ಥಾನ ಕಳೆದುಕೊಂಡಿದ್ದರು. ಹರ್ಷ ವರ್ಧನ್ ಬದಲು, ಮನ್ಸುಕ್ ಮಾಂಡವಿಯಾಗೆ ಆರೋಗ್ಯ ಖಾತೆ ನೀಡಲಾಗಿತ್ತು. ಪ್ರಧಾನಿ ಮೋದಿ ಕೆಲಸ ಮಾಡಿದ ಹೆಮ್ಮೆ ಇದೆ. 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತೆ ಪ್ರಧಾನಿಯಾಗಿ ಮರಳುವ ವಿಶ್ವಾಸವಿದೆ ಎಂದು ಹರ್ಷ  ವರ್ಧನ್ ಹೇಳಿದ್ದಾರೆ.
 

Follow Us:
Download App:
  • android
  • ios