ನವದೆಹಲಿ(ಅ.02): ಸಾಮಾಜಿಕ ಆರ್ಥಿಕ ಹಾಗೂ ವೈಜ್ಞಾನಿಕ ಬದಲಾವಣೆಗಳಿಗೆ ವಿಜ್ಞಾನವು ಕೇಂದ್ರವಾಗಿದೆ. ವೈಜ್ಞಾನಿಕ ಸಂಶೋಧನೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ಭಾರತ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇದೀಗ ಭಾರತದ ಹಾಗೂ ಭಾರತೀಯ ಮೂಲದ ವಿದೇಶಿ ವಿಜ್ಞಾನಿಗಳು ಭಾರತದ ಹಾಗೂ ವಿಶ್ವದ ಅಭಿವಿೃದ್ಧಿಗೆ ಕೈಜೋಡಿಸಬೇಕು. ಈ ಮೂಲಕ ಆತ್ಮನಿರ್ಭರ್ ಭಾರತ ಸಾಕಾರಕ್ಕೆ ನೆರವಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

#ModiAtUN:ಭಾರತವನ್ನು ಎಷ್ಟು ದಿನ ಹೊರಗಿಡುತ್ತೀರಿ? ವಿಶ್ವ ಸಂಸ್ಥೆಯಲ್ಲಿ ಗುಡುಗಿದ ಮೋದಿ!

ವರ್ಚುವಲ್ ಕಾರ್ಯಕ್ರಮದ ಮೂಲಕ ವೈಶ್ವಿಕ್ ಭಾರತೀಯ ವೈಜ್ಞಾನಿಕ ಸಮ್ಮಿಟ್(ವೈಭವ್ ಸಮ್ಮಿಟ್) 2020 ಉದ್ಘಾಟಿಸಿದ ಮೋದಿ, ಹೆಚ್ಚಿನ ಯುವಕರು ವಿಜ್ಞಾನದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುವುದನ್ನು ಇಂದಿನ ಅವಶ್ಯಕತೆಯಾಗಿದೆ. ಅದಕ್ಕಾಗಿ ನಾವು ಇತಿಹಾಸದ ವಿಜ್ಞಾನ ಮತ್ತು ವಿಜ್ಞಾನದ ಇತಿಹಾಸವನ್ನು ಚೆನ್ನಾಗಿ ತಿಳಿದಿರಬೇಕು ಎಂದರು.

 

ಕೊರೋನಾ ಕಳವಳ: ಜನರಿಗೆ ಸಲಹೆಗಳನ್ನ ಕೊಟ್ಟ ಪ್ರಧಾನಿ ಮೋದಿ.

ಈ ಸಮ್ಮಿಟ್ ಸಂಶೋಧನೆ ಹಾಗೂ ವಿಜ್ಞಾನ ಮನಸುಗಳ ಸಂಗಮವಾಗಿದೆ.  ರೈತರಿಗೆ ನೆರವಾಗುವ ಉನ್ನತ ದರ್ಜೆಯ ವೈಜ್ಞಾನಿಕ ಸಂಶೋಧನೆ ಅಗತ್ಯಗತ್ಯವಾಗಿದೆ. ಇದಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ.  ನಮ್ಮ ಕೃಷಿ ಸಂಶೋಧನಾ ವಿಜ್ಞಾನಿಗಳು  ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸಲು ಶ್ರಮಿಸಿದ್ದಾರೆ. ಇದರ ಪರಿಣಾಮ ನಾವು ದ್ವಿದಳ ದಾನ್ಯಗಳ ಆಮದು ಪ್ರಮಾಣ ಕಡಿಮೆಯಾಗಿದೆ. ಸಂಶೋಧನೆ ಹಾಗೂ ಟೆಕ್ನಾಲಜಿಯಿಂದ ನಮ್ಮ ಆಹಾರ-ಧಾನ್ಯ ಉತ್ಪಾದನೆ ಗರಿಷ್ಠ ಮಟ್ಟ ದಾಖಲೆ ಮುಟ್ಟಿದೆ ಎಂದು ಪ್ರಧಾನಿ ಹೇಳಿದರು. 

ಕೊರೋನಾ ವೈರಸ್ ವಿರುದ್ಧ ಹೋರಾಡಲು ಭಾರತ ಲಸಿಕೆ ಸಂಶೋಧನೆಯಲ್ಲಿ ತೊಡಗಿದೆ. ದೇಶದಲ್ಲಿ ಹೆಚ್ಚು ಹೆಚ್ಚು ಸಂಶೋಧನೆಗಳಾಗಬೇಕು ಈ ಮೂಲಕ ಭಾರತ ಹಾಗೂ ವಿಶ್ವವನ್ನೇ ಬೆಳಗಲು ಸಾಧ್ಯ ಎಂದು ಮೋದಿ ಹೇಳಿದರು.