ನವದೆಹಲಿ(ಸೆ.26): ಶಾಂತಿ, ಅಹಿಂಸೆಯನ್ನು ಪ್ರತಿಪಾದಿಸುವ ದೇಶ ನಮ್ಮದು.  ಶಾಂತಿ ಸ್ಥಾಪನಗೆ ನಮ್ಮ ಸೈನಿಕರು ಬದ್ದವಾಗಿದ್ದಾರೆ. ಇಷ್ಟೇ ಅಲ್ಲ ಮಿತ್ರ ರಾಷ್ಟ್ರಗಳಿಗೆ ಭಾರತ ಎಂದು ದ್ರೋಹ ಬಗೆಯುವುದಿಲ್ಲ, ಆದರೆ ಮೂರನೇಯವರ ಆಟ ನಡೆಯೋದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ವಿಶ್ವಸಂಸ್ಥೆಯ 75ನೇ ಮಹಾ ಅಧಿವೇಶನದಲ್ಲಿ ಮೊದಲಿಗರಾಗಿ ಮೋದಿ ಭಾಷಣ ಮಾಡಿದರು. 

ಬೆಂಗಳೂರಲ್ಲಿ ಸೋಂಕು ಪತ್ತೆ ಶೇ.5ಕ್ಕಿಂತ ಕಡಿಮೆ ಮಾಡಿ: ಪ್ರಧಾನಿ ಮೋದಿ

ಹಿಂದಿಯಲ್ಲಿ ಭಾಷೆಯಲ್ಲಿ ಭಾಷಣ ಮಾಡಿದ ಮೋದಿ ಜನಕಲ್ಯಾಣದೊಂದಿಗೆ ವಿಶ್ವಕಲ್ಯಾಣ, ಶಾಂತಿ, ಸೌಹಾರ್ಧತೆ,  ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ನಿಯಂತ್ರಣ , ಗಡಿ ಸಮಸ್ಯೆ, ಭಯೋತ್ಪಾದಕತೆ ಸೇರಿದಂತೆ ಹತ್ತು ಹಲವು ಪ್ರಮುಖ ವಿಚಾರಗಳ ಕುರಿತು ಪ್ರಧಾನಿ ಮೋದಿ ಬೆಳಕು ಚೆಲ್ಲಿದರು. 

81ರ ವಯಸ್ಸಲ್ಲಿ ಫಿಟ್‌ನೆಸ್: ನಟ ಮಿಲಿಂದ್ ತಾಯಿಯ ಪುಶ್‌ಅಪ್ ವಿಡಿಯೋ 5 ಬಾರಿ ನೋಡಿದ್ರು ಮೋದಿ..!.

ವಸುದೈವ ಕುಟುಂಬಕಂ ನಮ್ಮ ಸಂಸ್ಕೃತಿ ಎಂದ ಮೋದಿ, ಈ ನಿಟ್ಟಿನಲ್ಲಿ ಭಾರತದ ಕಾರ್ಯವನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅಕ್ಟೋಬರ್ 2 ನೇ ತಾರೀಖನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ. ಇದು ಅಹಿಂಸೆ, ಶಾಂತಿಗಾಗಿ ಭಾರತ ನೀಡಿದ ಕೊಡುಗೆಯಾದಿದೆ. ಜೂನ್ 21ರಂದು ವಿಶ್ವ ಯೋಗ ದಿನ ಆಚರಿಸಲಾಗುತ್ತದೆ. ಇದು ಭಾರತದ ಕೊಡುಗೆಯಾಗಿದೆ ಎಂದು ಮೋದಿ ಹೇಳಿದ್ದಾರೆ.

1945ರ ಜಗತ್ತು ಈಗಿನ ಆಧುನಿಕ ಜಗತ್ತಿಗಿಂತ ಭಿನ್ನವಾಗಿತ್ತು. ಪರಿಸ್ಥಿತಿಗಳು, ಅವಕಾಶಗಳು, ಸಂಪನ್ಮೂಲಗಳ ತುಲನೆ ಅಸಾಧ್ಯ. ಕಠಿಣ ಪರಿಸ್ಥಿತಿಯಲ್ಲಿ ವಿಶ್ವ ಸಂಸ್ಥೆ ರೂಪುಗೊಂಡಿತು. ಕಳೆದ 75 ವರ್ಷಗಳಿಂದ ವಿಶ್ವ ಸಂಸ್ಥೆ ಅಡಿಯಲ್ಲಿ ನಾವೆಲ್ಲ ಒಗ್ಗಟ್ಟಾಗಿದ್ದೇವೆ.  ಇದರ ನಡುವೆ ಹಲವು ಯುದ್ಧಗಳು, ಸಂಘರ್ಷಗಳು, ಭಯೋತ್ಪಾದಕ ದಾಳಿಗಳು ನಡೆದಿವೆ. ಅದೆಷ್ಟೋ ಜೀವಗಳು ಯಾರದೋ ಸೇಡಿಗೆ ಬಲಿಯಾಗಿದ್ದಾರೆ. ಹಲವರು ಮನೆ ಮಠ ಕಳೆದುಕೊಂಡಿದ್ದಾರೆ. ಇಂತಹ ಸಂಗರ್ಷಗಳು ಅವಾಂತರಗಳು ಮತ್ತೊಮ್ಮೆ ನಡೆಯದಂತೆ ತಡೆಯಲು ವಿಶ್ವ ಸಂಸ್ಥೆ ಸಂಘಟನೆ ಬಲಿಷ್ಠವಾಗಬೇಕು ಎಂದು ಮೋದಿ ಹೇಳಿದ್ದಾರೆ.

ಕಳೆದ 7 ರಿಂದ 8 ತಿಂಗಳಿಂದ ವಿಶ್ವವೇ ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿದೆ. ಈ ಕಠಿಣ ಸಂದರ್ಭದಲ್ಲಿ ವಿಶ್ವದ ಸ್ಪಂದನೆ ಹೇಗಿರಬೇಕಿತ್ತು? ಒಗ್ಗಟ್ಟಾಗಿ ಹೋರಾಡಬೇಕಾದ ಅವಶ್ಯತೆ ಇದೆ. ಆದರೆ ಸದ್ಯದ ಪರಿಸ್ಥಿತಿ ಹೇಗಿದೆ? ವಿಶ್ವ ಸಂಘನೆ ಇದಕ್ಕಾಗಿ ಏನು ಮಾಡಿದೆ? ಎಂದು ಮೋದಿ ಪ್ರಶ್ನಿಸಿದ್ದಾರೆ. ಇದು ಉತ್ತಮ ಸಮಯ, ವಿಶ್ವಸಂಸ್ಥೆಯ ಸ್ವರೂಪ ಬದಲಾಗಬೇಕಿದೆ. ಈ ಅನಿವಾರ್ಯತೆ ಬಂದಿದೆ ಎಂದು ಮೋದಿ ಹೇಳಿದ್ದಾರೆ.  ಭಾರತೀಯರು ಕಳೆದ ಹಲವು ದಶಕಗಳಿಂದ ಬದಲಾವಣೆಗಾಗಿ ಕಾದು ಕುಳಿತಿದ್ದಾರೆ. ಇದೀಗ ಭಾರತೀಯರ ಮನದಲ್ಲಿ ಈ ಬದಲಾವಣೆಗ ತಾರ್ಕಿಕ ಅಂತ್ಯ ಸಿಗುವುದೇ ಎಂಬು ಚಿಂತೆ ಕಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ. ಇಷ್ಟೇ ಅಲ್ಲ ವಿಶ್ವ ಸಂಸ್ಥೆಯಿಂದ ಎಷ್ಟು ದಿನ ಭಾರತವನ್ನು ಹೊರಗಿಡುತ್ತೀರಿ ಎಂದು ನೇರವಾಗಿ ಖಾಯಂ ಸದಸ್ಯತ್ವ ಕುರಿತು ಮೋದಿ ಪ್ರಶ್ನಿಸಿದ್ದಾರೆ.. 

ಕೊರೋನಾ ವೈರಸ್ ಲಸಿಕೆ ಸಂಶೋಧನೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಭಾರತ ಶೀಘ್ರದಲ್ಲೇ ಲಸಿಕೆ ಹೊರತರಲಿದೆ. ಇದರ ಲಾಭ ಇತರ ದೇಶಗಳಿಗೂ ಆಗಲಿದೆ. ಈ ಮೂಲಕ ಕೊರೋನಾ ಸಾಂಕ್ರಾಮಿಕ ರೋಗದಿಂದ ಮುಕ್ತವಾಗಲು ಭಾರತ ನೆರವಾಗಲಿದೆ ಎಂದು ಮೋದಿ ಹೇಳಿದ್ದಾರೆ.