Asianet Suvarna News Asianet Suvarna News

ಪ್ರಧಾನಿ ಮೋದಿ ಒರಿಜಿನಲ್ ಅಲ್ಲ ಡೂಪ್ಲಿಕೇಟ್, ಜೆಡಿಯು ಮುಖ್ಯಸ್ಥ ವಾಗ್ದಾಳಿ!

ಪ್ರಧಾನಿ ನರೇಂದ್ರ ಮೋದಿ ನಕಲಿ. ಅಸಲಿ ಅಲ್ಲ. ಇದು ಜೆಡಿಯು ಮುಖ್ಯಸ್ಥ ಲಲನ್ ಸಿಂಗ್ ಹೇಳಿದ್ದಾರೆ. ಈ ಹೇಳಿಕೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. 

PM Narendra Modi duplicate man not an original because he lied on caste for politics  says JDU national president Lalan Singh ckm
Author
First Published Oct 15, 2022, 3:48 PM IST

ಪಾಟ್ನಾ(ಅ.15):  ಬಿಹಾರದಲ್ಲಿ ಬಿಜೆಪಿ ಮೈತ್ರಿ ತೊರೆದು ಆರ್‌ಜೆಡಿ ಜೊತೆ ಸೇರಿ ಸರ್ಕಾರ ರಚಿಸಿರುವ ನಿತೀಶ್ ಕುಮಾರ್ ನೇತೃತ್ವಜ ಜೆಡಿಯು ಒಂದರ ಮೇಲೊಂದರಂತೆ ಕೇಸರಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿತೀಶ್ ಸೇರಿದಂತೆ ಜೆಡಿಯು ಹಾಗೂ ಆರ್‌ಜೆಡಿ ನಾಯಕರು ಆರೋಪ ಮಾಡುತ್ತಲೇ ಇದ್ದಾರೆ. ಇದರ ಮುಂದವರಿದ ಭಾಗವಾಗಿ ಜೆಡಿಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಲಲನ್ ಸಿಂಗ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಅಸಲಿ ಅಲ್ಲ, ಸಂಪೂರ್ಣ ನಕಲಿ ಎಂದಿದ್ದಾರೆ. 2014ರಲ್ಲಿ ಪ್ರಧಾನಿ ಮೋದಿ ತಾವು ಅತ್ಯಂತ ಹಿಂದುಳಿದ ಜಾತಿಯಿಂದ ಬಂದಿದ್ದೇನೆ ಎಂದು ದೇಶದ ಮುಂದೆ ಸುಳ್ಳು ಹೇಳಿದ್ದಾರೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಗುಜರಾತ್‌ನಲ್ಲಿ ಅತ್ಯಂತ ಹಿಂದುಳಿದ ಜಾತಿಯೇ ಇಲ್ಲ. ಹೀಗಾಗಿ ಮೋದಿ ಒರಿಜಿನಲ್ ಅಲ್ಲ, ಡೂಪ್ಲಿಕೇಟ್ ಎಂದು ಲಲನ್ ಸಿಂಗ್ ಹೇಳಿದ್ದಾರೆ.

ಪಾಟ್ನಾದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಲಲನ್ ಸಿಂಗ್(Lalan Singh), ಪ್ರಧಾನಿ ಮೋದಿ ಎಂದಿಗೂ ಸತ್ಯ ಹೇಳಿಲ್ಲ. ಸುಳ್ಳು ಹೇಳಿ ಅದಕ್ಕೆ ಪೂರಕ ದಾಖಲೆ ಹುಡುಕವ ಹಾಗೂ ಸೃಷ್ಟಿಸುವ ಕೆಲಸ ಮಾಡುತ್ತಾರೆ ಎಂದು ಲಲನ್ ಸಿಂಗ್ ಹೇಳಿದ್ದಾರೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ತಾನು ಅತ್ಯಂತ ಹಿಂದುಳಿದ ಜಾತಿ(EBC) ಯಿಂದ ಬಂದಿದ್ದೇನೆ ಎಂದು ಜನರಲ್ಲಿ ಮತ ಕೇಳಿದ್ದಾರೆ. ಗುಜರಾತ್‌ನಲ್ಲಿ(Gujarat) EBC ಸಮುದಾಯವೇ ಇಲ್ಲ. ಗುಜರಾತ್‌ನಲ್ಲಿರುವುದು ಒಬಿಸಿ ಮಾತ್ರ ಇಬಿಸಿ ಅಲ್ಲ. ಆದರೆ ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ ತಮ್ಮ ಜಾತಿ ಹಾಗೂ ಸಮುದಾವನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದಾರೆ. ಹೀಗಾಗಿ ಮೋದಿ ಒರಿಜನ್ ಅಲ್ಲ, ಡೂಪ್ಲಿಕೇಟ್ ಎಂದು ಲಲನ್ ಸಿಂಗ್ ಆರೋಪಿಸಿದ್ದಾರೆ.

 

 

ಮೋದಿಗೆ ಜನ್ಮ ನೀಡಿದ್ದೆ ಮಹಾ ಅಪರಾಧ, ಮೋದಿ ತಾಯಿ ವಿರುದ್ಧ ಆಪ್ ಅಧ್ಯಕ್ಷನ ವಿವಾದಾತ್ಮಕ ಹೇಳಿಕೆ!

ಲಲನ್ ಸಿಂಗ್ ಆರೋಪಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ.  ಒಬಿಸಿ ಅಥವಾ ಇಬಿಸಿ ಅನ್ನೋ ಕಾರಣಕ್ಕೆ ಭಾರತೀಯರು ಎರಡೆರಡು ಬಾರಿ ಪ್ರಧಾನಿ ಮೋದಿಯನ್ನು ಗಲ್ಲಿಸಿ ಪ್ರಧಾನಿ ಮಾಡಿದ್ದಾರಾ? ನಿಮ್ಮ ಮಾತು ಕೇಳಿ ತಲೆಯಾಡಿಸಲು ಮೂರ್ಖರಲ್ಲ. ಮೋದಿ ಬಂದ ಬಳಿಕ ದೇಶದ ಚಿತ್ರಣ ಯಾವ ರೀತಿ ಬದಲಾಗಿದೆ ಅನ್ನೋದು ಜಗತ್ತಿಗೆ ತಿಳಿದಿದೆ. ಇದೀಗ ವಿಶ್ವದ ನಾಯಕರು ಮೋದಿ ಹೊರಗಿಟ್ಟು ಯಾವುದೇ ನಿರ್ಣಯ ತೆಗೆದುಕೊಳ್ಳುವುದಿಲ್ಲ. ಭಾರತ ಮತ್ತೆ ತನ ಗತವೈಭದತ್ತ ತೆರಳುತ್ತಿದೆ. ದೇವಸ್ಥಾನಗಳು ಜೀರ್ಣೋದ್ಧಾರಗೊಳ್ಳುತ್ತಿದೆ. ಮೂಲಭೂತ ಸೌಕರ್ಯಗಳು ಅಂತಾರಾಷ್ಟ್ರೀಯ ದರ್ಜೆಗೆ ಏರಿಸಲಾಗಿದೆ. ರೈಲು ನಿಲ್ದಾಣದ ಸ್ವರೂಪವೇ ಬದಲಾಗಿದೆ. ಪ್ರತಿ ಮನೆಗೆ ಕುಡಿಯುವ ನೀರು ತಲುಪುತ್ತಿದೆ. ರೈತರಿಗೆ ಕಿಸಾನ್ ಸಮ್ಮಾನ್, ಫಸಲ್ ಭೀಮಾ, ಕಿಸಾನ್ ಕ್ರೆಡಿಟ್ ಕಾರ್ಡ್ ಸೇರಿದಂತೆ ಹಲವು ಸೌಲಭ್ಯಗಳು ಸಿಗುತ್ತಿದೆ. ಇದನ್ನು ಆಡಳತದಲ್ಲಿದ್ದ ಯಾವುದೇ ಪಕ್ಷಕ್ಕೆ ಮಾಡಬಹುದಿತ್ತು. ಭಾರತವನ್ನು ಬದಲಾಯಿಸುವ ಸುದೀರ್ಘ ಅವಕಾಶವೂ ಇತ್ತು. ಆದರೆ ಮನಸ್ಸು ಮಾತ್ರ ಇರಲಿಲ್ಲ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ್ದಾರೆ. 

 

ಶೇರ್ ಆಯಾ ಶೇರ್ ಆಯಾ, ಹಿಮಾಚಲ ಪ್ರದೇಶದಲ್ಲಿ ಮೊಳಗಿತು ಮೋದಿಗೆ ಭರ್ಜರಿ ಜಯಘೋಷದ ಸ್ವಾಗತ!

ಬಿಜೆಪಿ ವಿರುದ್ಧ ಕೂಟ ರಚನೆ ಪ್ರಕ್ರಿಯೆ ಚುರುಕು
 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ವಿಪಕ್ಷಗಳ ಬೃಹತ್‌ ಮೈತ್ರಿಕೂಟ ರಚಿಸುವ ಯತ್ನಗಳಿಗೆ ಭಾನುವಾರ ಮತ್ತೊಂದಿಷ್ಟುಯಶ ಸಿಕ್ಕಿದೆ. ಮಾಜಿ ಉಪಪ್ರಧಾನಿ ದೇವಿಲಾಲ್‌ ಜನ್ಮದಿನದ ಅಂಗವಾಗಿ ಎನ್‌ಎನ್‌ಎಲ್‌ಡಿ ಭಾನುವಾರ ಇಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ 6 ಪ್ರಮುಖ ಪಕ್ಷಗಳ ನಾಯಕರು ಭಾಗಿಯಾಗುವ ಮೂಲಕ, 2024ರಲ್ಲಿ ಒಂದಾಗಿ ಹೋರಾಡುವ ಮುನ್ಸೂಚನೆ ನೀಡಿದ್ದಾರೆ.

Follow Us:
Download App:
  • android
  • ios