ಸುರಿನಾಮ್‌ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು: ಪ್ರಧಾನಿ ಮೋದಿ ಶುಭ ಹಾರೈಕೆ

ಸುರಿನಾಮ್‌ ದೇಶದ ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್ ಅನ್ನು ದ್ರೌಪದಿ ಮುರ್ಮು ಅವರಿಗೆ ನೀಡಲಾಯಿತು.

pm narendra modi congratulates president droupadi murmu as she received suriname s highest civilian award ash

ನವದೆಹಲಿ (ಜೂನ್ 6, 2023): ಮೂರು ದಿನಗಳ ಸುರಿನಾಮ್‌ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸುರಿನಾಮ್‌ ದೇಶದ ಗ್ರ್ಯಾಂಡ್ ಆರ್ಡರ್ ಆಫ್ ದಿ ಚೈನ್ ಆಫ್ ದಿ ಯೆಲ್ಲೋ ಸ್ಟಾರ್ ಅನ್ನು ದ್ರೌಪದಿ ಮುರ್ಮು ಅವರಿಗೆ ನೀಡಲಾಯಿತು. ಈ ಸಂಬಂಧ ಪ್ರಧಾನಿ ಮೋದಿ ರಾಷ್ಟ್ರಪತಿಗೆ ಅಭಿನಂದನೆ ಸಲ್ಲಿಸಿದ್ದಾರೆ.

"ಸುರಿನಾಮ್ ಸರ್ಕಾರ ಮತ್ತು ಜನರ ಈ ವಿಶೇಷ ಗೆಸ್ಚರ್ ನಮ್ಮ ದೇಶಗಳ ನಡುವಿನ ನಿರಂತರ ಸ್ನೇಹವನ್ನು ಸಂಕೇತಿಸುತ್ತದೆ" ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದು, ರಾಷ್ಟ್ರಪತಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನೊಂದೆಡೆ, "ಸುರಿನಾಮ್‌ನ ಅತ್ಯುನ್ನತ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ಬಹಳ ಗೌರವವಿದೆ ಎಂದು ಟ್ವೀಟ್‌ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.“ಈ ಮನ್ನಣೆಯು ನನಗೆ ಮಾತ್ರವಲ್ಲದೆ ನಾನು ಪ್ರತಿನಿಧಿಸುವ ಭಾರತದ 1.4 ಶತಕೋಟಿ ಜನರಿಗೆ ಸಹ ಮಹತ್ತರವಾದ ಮಹತ್ವವನ್ನು ಹೊಂದಿದೆ. ನಮ್ಮ ಎರಡು ದೇಶಗಳ ನಡುವಿನ ಭ್ರಾತೃತ್ವದ ಬಾಂಧವ್ಯವನ್ನು ಉತ್ಕೃಷ್ಟಗೊಳಿಸುವಲ್ಲಿ ನಾಕ್ಷತ್ರಿಕ ಪಾತ್ರವನ್ನು ವಹಿಸಿರುವ ಭಾರತೀಯ -ಸುರಿನಾಮಿಗಳ ಸಮುದಾಯದ ಸತತ ಪೀಳಿಗೆಗೆ ನಾನು ಈ ಗೌರವವನ್ನು ಅರ್ಪಿಸುತ್ತೇನೆ’’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ: ಪ್ರಧಾನಿ ಮೋದಿ ಜಗತ್ತಿನ ಎಲ್ಲೆಡೆ ಗೌರರ್ವಕ್ಕೆ ಅರ್ಹರು; ಆ ಬಗ್ಗೆ ಹೆಮ್ಮೆ ಇದೆ: ಕಾಂಗ್ರೆಸ್‌ ನಾಯಕನ ಅಚ್ಚರಿಯ ಹೇಳಿಕೆ

ಈ ಮಧ್ಯೆ, ಭಾರತದ ಸಾಗರೋತ್ತರ ಪೌರತ್ವ (ಒಸಿಐ) ಕಾರ್ಡ್‌ಗಾಗಿ ಅರ್ಹತಾ ಮಾನದಂಡಗಳನ್ನು ನಾಲ್ಕನೇ ತಲೆಮಾರಿನಿಂದ ಆರನೇ ತಲೆಮಾರಿಗೆ ವಿಸ್ತರಿಸಲು ಭಾರತ ಸರ್ಕಾರವು ಅನುಮೋದನೆ ನೀಡಿದೆ ಎಂದು ರಾಷ್ಟ್ರಪತಿ ಘೋಷಿಸಿದರು. "ಇದು ಅವರ ಪೂರ್ವಜರು ಮೊದಲ ಹಡಗು-ಲಲ್ಲಾ ರೂಖ್‌ನಲ್ಲಿ ಸುರಿನಾಮ್‌ಗೆ ಬಂದವರಿಗೆ OCI ಕಾರ್ಡ್‌ಗಳನ್ನು ಪಡೆಯಲು ಸಹಾಯ ಮಾಡುತ್ತದೆ" ಎಂದು ದ್ರೌಪದಿ ಮುರ್ಮು ಅವರು ಸುದ್ದಿ ಸಂಸ್ಥೆ ANI ಗೆ ಹೇಳಿದ್ದಾರೆ.

ಇನ್ನೊಂದೆಡೆ, ರಾಷ್ಟ್ರಪದಿ ದ್ರೌಪದಿ ಮುರ್ಮು ಅವರು ಸೋಮವಾರ ಸುರಿನಾಮ್‌ನಲ್ಲಿ ಚಂದ್ರಿಕಾಪರ್ಸಾದ್ ಸಂತೋಖಿ ಅವರನ್ನು ಭೇಟಿಯಾದರು. ಅಲ್ಲದೆ, ಅವರು ಎರಡೂ ಕಡೆಯ ನಡುವೆ ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿದ್ದಾರೆ. “ನಿಮ್ಮ ದೇಶಕ್ಕೆ ಇದು ನನ್ನ ಮೊದಲ ಭೇಟಿ. ವೈವಿಧ್ಯತೆಗೆ ಹೆಸರುವಾಸಿಯಾಗಿರುವ ಈ ದೇಶ ಮತ್ತು ಭಾರತದ ನಡುವೆ ಹಲವು ಸಾಮ್ಯತೆಗಳಿವೆ. ಸುರಿನಾಮ್‌ನಲ್ಲಿ ನಾನು ನನ್ನ ಸ್ವಂತ ಮನೆಯಲ್ಲಿ ಇದ್ದೇನೆ ಎಂದು ನನಗೆ ಅನಿಸುತ್ತದೆ,” ಎಂದೂ ದ್ರೌಪದಿ ಮುರ್ಮು ಹೇಳಿದರು.

ಇದನ್ನೂ ಓದಿ: ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ನನ್ನ ಗುರಿ, ಬಡವರ ಹಾಗೂ ದೇಶದ ಘನತೆ ಎತ್ತಿಹಿಡಿಯಲು ಶ್ರಮ: ಮೋದಿ

ಈ ವೇಳೆ ಮಾತನಾಡಿದ ಚಂದ್ರಿಕಾಪರ್ಸಾದ್ ಸಂತೋಖಿ, ಸುರಿನಾಮ್‌ನಲ್ಲಿ ನಾವು ಇಂದಿಗೂ ಅದೇ ವೈಭವದ ಭಾರತೀಯ ಸಂಸ್ಕೃತಿಯನ್ನು ಆಚರಿಸುತ್ತೇವೆ ಮತ್ತು ಆನಂದಿಸುತ್ತೇವೆ. ಭಾರತೀಯ ಸಾಂಸ್ಕೃತಿಕ ಪರಂಪರೆಯು ನಮ್ಮ ಎರಡು ಪ್ರೀತಿಯ ದೇಶಗಳ ನಡುವೆ ಅತ್ಯಂತ ಬಂಧಿಸುವ ಅಂಶಗಳಲ್ಲಿ ಒಂದಾಗಿದೆ  ಎಂದೂ ಹೇಳಿದರು. 

ಇದನ್ನೂ ಓದಿ: ಫಿಜಿ, ಪಪುವಾ ನ್ಯೂ ಗಿನಿ ದೇಶಗಳ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಪಡೆದ ಪ್ರಧಾನಿ ಮೋದಿ

Latest Videos
Follow Us:
Download App:
  • android
  • ios