Asianet Suvarna News Asianet Suvarna News

ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ನನ್ನ ಗುರಿ, ಬಡವರ ಹಾಗೂ ದೇಶದ ಘನತೆ ಎತ್ತಿಹಿಡಿಯಲು ಶ್ರಮ: ಮೋದಿ

ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ ಹಾಗೂ ಮಾಡುವ ಪ್ರತಿಯೊಂದು ಕ್ರಿಯೆಯು ಜನರ ಜೀವನವನ್ನು ಸುಧಾರಿಸುವ ಬಯಕೆಯಿಂದ ಕೂಡಿದೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಾವು ಇನ್ನೂ ಹೆಚ್ಚು ಶ್ರಮಿಸುತ್ತೇವೆ ಎಂದು ಮೋದಿ ಹೇಳಿದ್ದಾರೆ.

building a developed india is my goal pm modi on 9 years of his govt ash
Author
First Published May 31, 2023, 7:54 AM IST

ನವದೆಹಲಿ (ಮೇ 31, 2023): ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದು ಮಂಗಳವಾರ 9 ವರ್ಷ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಮೋದಿ, ‘ನನ್ನ ಎಲ್ಲ ನಿರ್ಧಾರಗಳು ಜನಜೀವನ ಸುಧಾರಣೆಯ ಉದ್ದೇಶ ಹೊಂದಿವೆ’ ಎಂದು ಬಣ್ಣಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಸರಣಿ ಸಂದೇಶ ಪ್ರಕಟಿಸಿರುವ ಮೋದಿ, ‘ಇಂದು ನಾವು ದೇಶ ಸೇವೆಯ 9 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ನಮ್ರತೆ ಮತ್ತು ಕೃತಜ್ಞತಾ ಭಾವ ಆವರಿಸಿದೆ. ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ ಹಾಗೂ ಮಾಡುವ ಪ್ರತಿಯೊಂದು ಕ್ರಿಯೆಯು ಜನರ ಜೀವನವನ್ನು ಸುಧಾರಿಸುವ ಬಯಕೆಯಿಂದ ಕೂಡಿದೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಾವು ಇನ್ನೂ ಹೆಚ್ಚು ಶ್ರಮಿಸುತ್ತೇವೆ’ ಎಂದಿದ್ದಾರೆ.

ಇದನ್ನು ಓದಿ: ಮೋದಿ @ 9: 1 ತಿಂಗಳು ಬಿಜೆಪಿ ಪ್ರಚಾರ, 51 ನಾಯಕರಿಂದ ದೇಶದ ವಿವಿಧೆಡೆ ರ‍್ಯಾಲಿ, 2024 ಲೋಕಸಭೆ ಚುನಾವಣೆ ಟಾರ್ಗೆಟ್

‘ಕಳೆದ 9 ವರ್ಷಗಳಲ್ಲಿ ನಾವು ಭಾರತದ ಬಡವರ ಘನತೆಯನ್ನು ಎತ್ತಿಹಿಡಿಯಲು ಮತ್ತು ಜೀವನೋಪಾಯವನ್ನು ಸುಧಾರಿಸಲು ಶ್ರಮಿಸಿದ್ದೇವೆ. ಹಲವಾರು ಉಪಕ್ರಮಗಳ ಮೂಲಕ ನಾವು ಲಕ್ಷಾಂತರ ಜೀವನವನ್ನು ಪರಿವರ್ತಿಸಿದ್ದೇವೆ. ಪ್ರತಿಯೊಬ್ಬ ನಾಗರಿಕನ ಉನ್ನತಿ ಮತ್ತು ಅವರ ಕನಸುಗಳನ್ನು ಈಡೇರಿಸಲು ನಮ್ಮ ಆಂದೋಲನ ಮುಂದುವರಿಯುತ್ತದೆ’ ಎಂದು ಇನ್ನೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ. ಜತೆಗೆ ಅವರು ಸರ್ಕಾರದ ಸಾಧನೆಯ ಮಾಹಿತಿಯುಳ್ಳ ಗ್ರಾಫಿಕ್ಸ್‌ ಅನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಇಂದು ಅಜ್ಮೇರ್‌ನಲ್ಲಿ ಮೋದಿ ರ‍್ಯಾಲಿ
ಸರ್ಕಾರಕ್ಕೆ 9 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಂಗಳವಾರದಿಂದಲೇ ಬಿಜೆಪಿ 1 ತಿಂಗಳ ಪ್ರಚಾರ ಅಭಿಯಾನ ಆರಂಭಿಸಿದೆ. ಇದರ ಅಂಗವಾಗಿ ಬುಧವಾರ ರಾಜಸ್ಥಾನದ ಅಜ್ಮೇರ್‌ನಲ್ಲಿ ಮೋದಿ ರ‍್ಯಾಲಿ ಹಮ್ಮಿಕೊಂಡಿದ್ದಾರೆ.

ಇದನ್ನೂ ಓದಿ: ಲೂಟಿಯೇ ಮೋದಿ ಸರ್ಕಾರದ 9 ವರ್ಷದ ಸಾಧನೆ; ಜಿಎಸ್‌ಟಿಯಿಂದ ಜನರ ಜೀವನ ಕಷ್ಟವಾಗಿಸಿದೆ: ಮಲ್ಲಿಕಾರ್ಜುನ ಖರ್ಗೆ

ಸರ್ಕಾರಕ್ಕೆ 9 ವರ್ಷ

  • ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದು ಮಂಗಳವಾರಕ್ಕೆ 9 ವರ್ಷ
  • ಸರಣಿ ಟ್ವೀಟ್‌ನಲ್ಲಿ ಅನುಭವ ಹಂಚಿಕೊಂಡ ಪ್ರಧಾನಿ
  • ಕಳೆದ 9 ವರ್ಷ ಬಡವರ ಹಾಗೂ ದೇಶದ ಘನತೆ ಎತ್ತಿಹಿಡಿಯಲು ಶ್ರಮ
  • ವಿವಿಧ ಯೋಜನೆ ಮೂಲಕ ಲಕ್ಷಾಂತರ ಜನರ ಜೀವನದಲ್ಲಿ ಬದಲಾವಣೆ
  • ಇದೇ ಬದ್ಧತೆ ಇನ್ನು ಮುಂದೆಯೂ ಸರ್ಕಾರಕ್ಕೆ ಇರಲಿದೆ ಎಂದು ಭರವಸೆ

ಇದನ್ನೂ ಓದಿ: ಪ್ರಧಾನಿ ಮೋದಿಗೆ ‘ನವ’ವಸಂತ: ಇಡೀ ತಿಂಗಳು ಹಲವಾರು ಕಾರ್ಯಕ್ರಮ; ಸಾಧನೆಗಳ ಹೈಲೈಟ್ಸ್‌ ಹೀಗಿದೆ.. 

Follow Us:
Download App:
  • android
  • ios