ನವದೆಹಲಿ(ನ.15): ಕೊರೋನಾ ವೈರಸ್ ತಗುಲಿ ಸುದೀರ್ಘ ದಿನಗಳಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಹಿರಿಯ ನಟ ಸೌಮಿತ್ರ ಚಟರ್ಜಿ (85) ನಿಧನರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಸತತ ಚಿಕಿತ್ಸೆ ಪಡೆದ ಸೌಮಿತ್ರ ಚಟರ್ಜಿ ಕಳೆದೊಂದು ವಾರದಿಂದ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇಂದು(ನ.15) ಹಿರಿಯ ಕಲಾವಿದ ನಿಧನರಾಗಿದ್ದಾರೆ.

ಗಾನ ಗಂಧರ್ವ SPB ಅಗಲಿಕೆಗೆ ಕಂಬನಿ ಮಿಡಿದ ಕ್ರಿಕೆಟರ್ಸ್!.

ಸೌಮಿತ್ರ ಚಟರ್ಜಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಹಿರಿಯ ನಟ  ಸೌಮಿತ್ರಾ ಚಟರ್ಜಿಯವರ ನಿಧನ ಸಿನಿ ಲೋಕಕ್ಕೆ ತುಂಬಲಾರದ ನಷ್ಟ. ಪಶ್ಚಿಮ ಬಂಗಾಳ ಮತ್ತು ಭಾರತೀಯ ಸಾಂಸ್ಕೃತಿ ಜೀವನಕ್ಕೆ ಅಪಾರ ನಷ್ಟವಾಗಿದೆ. ಸೌಮಿತ್ರ ಚಟರ್ಜಿ ಕುಟುಂಬ, ಅಭಿಮಾನಿಗಳಿಗೆ ಮೋದಿ ಸಂತಾಪ ಸೂಚಿಸಿದ್ದಾರೆ.

 

ಹಿರಿಯ ತಮಿಳು ನಟ ಕೊರೋನಾದಿಂದ ಸಾವು

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವು ಗಣ್ಯರು ಸೌಮಿತ್ರ ಚಟರ್ಜಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

 

ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಸೌಮಿತ್ರ ಚಟರ್ಜಿ ಬಂಗಾ ಬಿಭೂಷಣ, ಪದ್ಮಭೂಷಣ ಸೇರಿದಂತೆ ಹಲವು ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತೀಯ ಸಿನಿಮಾ ಪಿತಾಮಹ  ಸತ್ಯಜಿತ್ ರೇ ಜೊತೆ ಸಿನಿಮಾ ಮಾಡಿದ ಕೀರ್ತಿ ಸೌಮಿತ್ರ ಚಟರ್ಜಿಗಿದೆ.