'ಮುಂದಿನ 1000 ವರ್ಷಗಳ ಅಭಿವೃದ್ಧಿಗಾಗಿ ಭಾರತ ಬುನಾದಿಯನ್ನು ಸೃಷ್ಟಿಸುತ್ತಿದೆ. ಮೊದಲ ಸ್ಥಾನಕ್ಕೇರುವುದಷ್ಟೇ ನಮ್ಮ ಆದ್ಯತೆಯಲ್ಲ, ಆ ಪಟ್ಟವನ್ನು ಉಳಿಸಿಕೊಳ್ಳುವುದು ಕೂಡ ಆಗಿದೆ ಎಂದು ತಿಳಿಸಿದ ಪ್ರಧಾನಿ ನರೇಂದ್ರ ಮೋದಿ 

ಗಾಂಧಿನಗರ(ಸೆ.17): 'ದೇಶದಕ್ಷಿಪ್ರ ಪ್ರಗತಿಗಾಗಿ ತಮ್ಮ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ಪ್ರತಿಯೊಂದು ವಲಯ ಹಾಗೂ ಅಂಶಗಳಿಗೂ ಸ್ಪಂದಿಸಲು ಯತ್ನಿಸಿದ್ದೇವೆ. ನಮ್ಮ ಸರ್ಕಾರದ ಆದ್ಯತೆಗಳು, ವೇಗ ಹಾಗೂ ಪ್ರಮಾಣವನ್ನು ನೀವು ಗಮನಿಸಬಹುದು' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 'ಮುಂದಿನ 1000 ವರ್ಷಗಳ ಅಭಿವೃದ್ಧಿಗಾಗಿ ಭಾರತ ಬುನಾದಿಯನ್ನು ಸೃಷ್ಟಿಸುತ್ತಿದೆ. ಮೊದಲ ಸ್ಥಾನಕ್ಕೇರುವುದಷ್ಟೇ ನಮ್ಮ ಆದ್ಯತೆಯಲ್ಲ, ಆ ಪಟ್ಟವನ್ನು ಉಳಿಸಿಕೊಳ್ಳುವುದು ಕೂಡ ಆಗಿದೆ ಎಂದು ತಿಳಿಸಿದ್ದಾರೆ. 

Add Asianetnews Kannada as a Preferred SourcegooglePreferred

ಅಯೋಧ್ಯೆ ಹಾಗೂ ಇತರೆ 16 ನಗರಗಳನ್ನು ಮಾದರಿ ಸೌರನಗರ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದೇವೆ' ಎಂದೂ ಹೇಳಿದ್ದಾರೆ. 4ನೇ ಆವೃತ್ತಿಯ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶ ಹಾಗೂ ಎಕ್ಸ್‌ಪೋ (ರೀ-ಇನ್ ವೆಸ್ಟ್ 2024) ಅನ್ನು ಗುಜರಾತಿನ ಗಾಂಧಿನಗರದಲ್ಲಿ ಸೋಮ ವಾರ ಉದ್ಘಾಟಿಸಿ ಮಾತನಾಡಿದ ಮೋದಿ ಅವರು, ಭಾರತೀಯರಷ್ಟೆ ಅಲ್ಲ, ಇಡೀ ವಿಶ್ವವೇ ಭಾರತ 21ನೇ ಶತಮಾನದ ಯಶಸ್ವಿ ದೇಶ ಎಂಬ ಭಾವನೆ ಹೊಂದಿದೆ ಎಂದು ತಿಳಿಸಿದರು. ಹಸಿರು ಭವಿಷ್ಯ ಹಾಗೂ ನೆಟ್ ಜೀರೋ ಎಂಬುದು ನಮಗೆ ಅಲಂಕಾರಿಕ ಪದಗಳಲ್ಲ, ಇದು ದೇಶದ ಅಗತ್ಯಗಳು. ಅದನ್ನು ಸಾಧಿಸಲು ಬದ್ಧವಾಗಿದ್ದೇವೆ. 21ನೇ ಶತಮಾನವು ಭಾರತದ ಪಾಲಿಗೆ ಸೌರಶಕ್ತಿಯಲ್ಲಿ ಸುವರ್ಣ ಯುಗವಾಗಲಿದೆ ಎಂದು ತಿಳಿಸಿದರು. 

74ರ ಇಳಿವಯಸ್ಸಿನಲ್ಲೂ ಚುರುಕುತನ; ಫಿಟ್‌ನೆಸ್ ರಹಸ್ಯ ಬಿಚ್ಚಿಟ್ಟ ಪ್ರಧಾನಿ ಮೋದಿ!

ಹೂಡಿಕೆಗೆ ಸಚಿವ ಪ್ರಹ್ಲಾದ ಜೋಶಿ ಮನವಿ: 

ದೇಶದ ಹಸಿರು ಯೋಜನೆಗಳಿಗೆ 32.45 ಲಕ ಕೋಟಿ ರು. ಹಣಕಾಸು ನೆರವು ನೀಡಲು ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಬದ್ದತೆ ವ್ಯಕ್ತಪಡಿಸಿವೆ.ಹೀಗಾಗಿಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಬೇಕು' ಎಂದು ಸಮಾರಂಭದಲ್ಲಿ ಹಾಜರಿದ್ರ ನವೀಕರಿಸ ಬಹುದಾದ ಇಂಧನ ಸಚಿವ ಪ್ರಹ್ಲಾದ ಜೋತಿ ಮನವಿ ಮಾಡಿದರು.

ಮೋದಿಗೆ ಇಂದು 74ನೇ ಜನ್ಮದಿನ ಸಂಭ್ರಮ 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ 74ನೇ ವಸಂತಕ್ಕೆ ಕಾಲಿಡಲಿದ್ದಾರೆ. ತಮ್ಮ ನಾಯಕನ ಜನ್ಮದಿನವನ್ನು ವಿಭಿನ್ನವಾಗಿ ಆಚ ರಿಸಲು ಬಿಜೆಪಿ ಒಂದೆಡೆ ಭರ್ಜರಿ ಸಿದ್ಧತೆ ಮಾಡಿ ಕೊಂಡಿದ್ದರೆ, ಮತ್ತೊಂದೆಡೆಮೋದಿ ಅಭಿಮಾನಿಗಳು ವಿಶಿಷ್ಟವಾಗಿ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ. 

ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅಜೈರ್ ಪರೀಫ್ ದರ್ಗಾವು 4 ಸಾವಿರ ಕೆಜಿಯಸಸ್ಯಾಹಾರಿಲಂಗೇರ್ ಆಹಾರ ವಿತರಿಸಲು ಮುಂದಾಗಿದೆ. ಚೆನ್ನೈ ಮೂಲದ 13 ವರ್ಷದ ಬಾಲಕಿ ಮೋದಿ ಚಿತ್ರವನ್ನು 800 ಕೆ.ಜಿ ಸಿರಿಧಾನ್ಯ ಬಳಸಿ ತಯಾರಿಸಿದ್ದಾಳೆ. ತವರುರಾಜ್ಯ ಗುಜರಾತಿನ ಸೂರತ್‌ನಲ್ಲಿ ಪ್ರಧಾನಿ ಜನ್ಮದಿನದಂದು ವ್ಯಾಪಾರಿಗಳು ರಿಯಾಯಿತಿ ದರದಲ್ಲಿ ವಸ್ತುಗಳ ಮಾರಾಟಕ್ಕೆ ಮುಂದಾಗಿದ್ದಾರೆ. 

ಗಾಂಧಿನಗರದಲ್ಲಿ 4ನೇ ಆವೃತ್ತಿಯ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶ ಹಾಗೂ ಎಕ್ಸ್‌ ಪೋದಲ್ಲಿ ಸೋಮವಾರ ಪ್ರಧಾನಿ ಮೋದಿಗೆ ಸಚಿವ ಪ್ರಹ್ಲಾದ ಜೋಶಿ ಅವರಿಂದ ಸನ್ಮಾನ. ಮತ್ತೊಂದೆಡೆ ದೇಶದಲ್ಲಿ ಎನ್‌ಡಿಎ ಸರ್ಕಾರ ಸೆ.15ಕ್ಕೆ ಅಧಿಕಾರಕ್ಕೆ ಬಂದು 100 ದಿನಗಳು ಸಂದಿದೆ. ಹೀಗಾಗಿ ಮೋದಿ ಹುಟ್ಟುಹಬ್ಬದ ದಿನ ಬಿಜೆಪಿ ನಾಯಕರು 100 ದಿನದ ಸಾಧನೆ ವಿವರಿಸಲಿದ್ದಾರೆ. 

ಏಕತೆ ಒಡೆಯಲು ವಿದೇಶದಲ್ಲಿ ಯತ್ನ: ರಾಹುಲ್‌ ಗಾಂಧಿ ವಿರುದ್ಧ ಮೋದಿ ಕಿಡಿ

ಇಂದಿನಿಂದ ಮೋದಿ ವಸ್ತು ಹರಾಜು: 

ಮೋದಿ ಅವರಿಗೆ ಬಂದ ಸುಮಾರು 600 ಕಾಣಿಕೆಗಳನ್ನು ಜನ್ಮದಿನ.17 ರಿಂದ ಅ.2ರವರೆಗೆ ಹರಾಜು ಹಾಕಲಾಗುತ್ತದೆ. ಮೂಲ ಬೆಲೆ 1.5 ಕೋಟಿ ರು. 

100 ದಿನದ ವೀಕ್ ಸರ್ಕಾರ- ಕಾಂಗ್ರೆಸ್: 

100 ದಿನದ ದುರ್ಬಲ ಸರ್ಕಾರ ಇದಾಗಿದೆ. ಪಿಂಚಣಿ ಯೋಜನೆ ಸೇರಿದಂತೆ ಹಲವು ವಿಷಯಗಳಲ್ಲಿ ಯೂ-ಟರ್ನ್ ಹೊಡೆದ ಸರ್ಕಾರ ಇದಾಗಿದೆ ಎಂದು ಮೋದಿ-3 ಸರ್ಕಾರದ ಮೊದಲ 100 ದಿನಗಳ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ.