lifestyle
74 ರ ಇಳಿವಯಸ್ಸಿನಲ್ಲೂ ಪ್ರಧಾನಿ ಮೋದಿಯವರ ಉತ್ಸಾಹ, ಚುರುಕುತನ, ಮಾತುಗಾರಿಕೆ, ದಣಿವರಿಯದ ಪ್ರಯಾಣ, ನಾಯಕತ್ವ ಗುಣ ವಿಶ್ವ ನಾಯಕರನ್ನೇ ಬೆರಗಾಗುವಂತೆ ಮಾಡಿದೆ.
ಸೆಪ್ಟೆಂಬರ್ 17, 2024 ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 74 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 73 ನೇ ವಯಸ್ಸಿನಲ್ಲೂ ಅತ್ಯಂತ ಫಿಟ್ ಆಗಿರುವ ಪ್ರಧಾನಿ ಜೀವನವನ್ನು ಶಿಸ್ತಿನಿಂದ ನಡೆಸುತ್ತಾರೆ.
ದೇಶ-ವಿದೇಶಗಳಲ್ಲಿ ಯೋಗವನ್ನು ಪ್ರಚಾರ ಮಾಡುವ ನರೇಂದ್ರ ಮೋದಿ ತಮ್ಮನ್ನು ಫಿಟ್ ಆಗಿಟ್ಟುಕೊಳ್ಳಲು ಯೋಗಾಭ್ಯಾಸ ಮಾಡುತ್ತಾರೆ. ವಜ್ರಾಸನ, ಸೇತುಬಂಧಾಸನ, ಭುಜಂಗಾಸನ, ಉತ್ತಾನಪಾದಾಸನ ಮುಂತಾದ ಯೋಗಗಳನ್ನು ಮಾಡುತ್ತಾರೆ.
ವಯಸ್ಸಾದಂತೆ ಜನರು ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡುತ್ತಾರೆ. ನರೇಂದ್ರ ಮೋದಿಜಿಗೆ ನಡೆಯುವುದರಿಂದ ಹಿಡುಕೊಂಡು ಸೈಕ್ಲಿಂಗ್ ಇಷ್ಟ. ಇದು ದೇಹವನ್ನು ವಯಸ್ಸಾದ ನಂತರವೂ ಫಿಟ್ ಆಗಿ ಇಡಲು ಸಹಾಯ ಮಾಡುತ್ತದೆ.
ನರೇಂದ್ರ ಮೋದಿ ಹಲವು ಸ್ಥಳಗಳಲ್ಲಿ ಜಪ ಮಾಡುವುದನ್ನು ಕಾಣಬಹುದು. ಇದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ವ್ಯಕ್ತಿ ಧನಾತ್ಮಕತೆಯನ್ನು ಅನುಭವಿಸುತ್ತಾನೆ. ಜೊತೆಗೆ ಚಿಂತೆ ಮತ್ತು ಒತ್ತಡವೂ ದೂರವಾಗುತ್ತದೆ.
ನರೇಂದ್ರ ಮೋದಿ ಛಾಯಾಗ್ರಹಣ ಮಾಡುತ್ತಿರುವ ಹಲವು ಫೋಟೋಗಳು ಬೆಳಕಿಗೆ ಬಂದಿವೆ. ಮಾನಸಿಕ ಆರೋಗ್ಯಕ್ಕೆ ಛಾಯಾಗ್ರಹಣ ಪ್ರಮುಖ ಪಾತ್ರ ವಹಿಸುತ್ತದೆ. ಮೈಂಡ್‌ಫುಲ್‌ನೆಸ್‌ಗೆ ಛಾಯಾಗ್ರಹಣ ಉತ್ತಮ.
ಪ್ರಧಾನಿ ನರೇಂದ್ರ ಮೋದಿ ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಅವರೊಂದಿಗಿನ ಸಂವಾದದಲ್ಲಿ ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರತಿದಿನ ಹಳದಿ ಕಿಚಡಿಯನ್ನು ಸೇವಿಸುತ್ತೇನೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ತಮ್ಮ ಹಗುರ ಆಹಾರದಲ್ಲಿ ಕಿಚಡಿ ತಿನ್ನಲು ಇಷ್ಟಪಡುತ್ತಾರೆ. ಕಿಚಡಿಯಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ತುಪ್ಪದ ಒಳ್ಳೆಯ ಕೊಬ್ಬು ಇರುತ್ತದೆ.