ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟುಅಭಿವೃದ್ಧಿಪಡಿಸುವ ನಿಟ್ಟಿನ ಸಭೆ ಆಸ್ಟ್ರೇಲಿಯಾ ಪ್ರಧಾನಿ ಜೊತೆ ಮೋದಿ ವರ್ಚುವಲ್ ಸಭೆ ಮಿಲಿಟರಿ ರಕ್ಷಣಾ ಸಹಕಾರ ಕುರಿತು ಸಭೆಯಲ್ಲಿ ಚರ್ಚೆ  

ನವದೆಹಲಿ(ಮಾ.21): ಭಾರತ ಮತ್ತು ಆಸ್ಪ್ರೇಲಿಯಾ ನಡುವಿನ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟುಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆಸ್ಟೇಲಿಯಾದ ಪ್ರಧಾನಿ ಸ್ಕಾಟ್‌ ಮಾರಿಸನ್‌ ಅವರೊಂದಿಗೆ ಸೋಮವಾರ ಮಾಚ್‌ರ್‍ 21ರಂದು ಮೋದಿ ವರ್ಚುವಲ್‌ ಸಭೆಯನ್ನು ನಡೆಸಿಲಿದ್ದಾರೆ. ಈ ವೇಳೆ ಭಾರತದಲ್ಲಿ 1500 ಕೋಟಿ ರು. ಹೂಡಿಕೆಯನ್ನು ಮಾರಿಸನ್‌ ಪ್ರಕಟಿಸುವ ನಿರೀಕ್ಷೆಯಿದೆ. ಇದೇ ವೇಳೆ, ಈ ಮಾಸಾಂತ್ಯದಲ್ಲಿ ಎರಡೂ ದೇಶಗಳು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದ್ದು, ಈ ಬಗ್ಗೆ ಉಭಯ ನಾಯಕರು ಚರ್ಚಿಸಲಿದ್ದಾರೆ. ಇನ್ನು ಮಿಲಿಟರಿ ರಕ್ಷಣಾ ಸಹಕಾರ ಹಾಗೂ ಇನ್ನಿತರ ವಿಷಯಗಳು ಈ ವರ್ಚುವಲ್‌ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆಗಳಿವೆ.

ಕ್ವಾಡ್‌ ಶೃಂಗಸಭೆಯಲ್ಲಿ ಮೋದಿ ಭಾಷಣ
ರಷ್ಯಾ ಉಕ್ರೇನ್‌ ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಉಕ್ರೇನ್‌ ಬಿಕ್ಕಟ್ಟಿನ ಸಂಬಂಧ ನಡೆಸಲಾದ ಕ್ವಾಡ್‌ ರಾಷ್ಟ್ರಗಳ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ಯುದ್ಧದ ಬದಲು ಶಾಂತಿ ಮಾತುಕತೆಗೆ ಹೆಚ್ಚಿನ ಒತ್ತು ನೀಡಬೇಕು. ಉಭಯ ದೇಶಗಳು ಪರಸ್ಪರ ಸಾರ್ವಭೌಮತೆಯನ್ನು ಗೌರವಿಸಬೇಕು. ಕ್ವಾಡ್‌ ರಾಷ್ಟ್ರಗಳು ಯಾವಾಗಲೂ ತಮ್ಮ ಮೂಲ ಉದ್ದೇಶಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕು. ಇಂಡೋ ಪೆಸಿಫಿಕ್‌ ವಲಯದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಕ್ವಾಡ್‌ ದೇಶಗಳು ಸಹಕಾರ ನೀಡಬೇಕು. ಉಕೇನ್‌ನಲ್ಲಿ ನಡೆದಿರುವಂತಹ ಘಟನೆ ಇಂಡೋ ಪೆಸಿಫಿಕ್‌ ವಲಯದಲ್ಲಿ ನಡೆಯದಂತೆ ಎಚ್ಚರವಹಿಸಬೇಕು ಎಂದು ಅವರು ಹೇಳಿದರು. ಕ್ವಾಡ್‌ ಶೃಂಗದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಜಪಾನ್‌ ಪ್ರಧಾನಿ ಫುಮಿಯೋ ಕಿಶಿದಾ ಹಾಗೂ ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಪಾಲ್ಗೊಂಡಿದ್ದರು.

PM Modi to visit Kashmir ಏ.24 ರಂದು ಮೋದಿ ಜಮ್ಮು-ಕಾಶ್ಮೀರ ಭೇಟಿ ಸಾಧ್ಯತೆ!

ರಷ್ಯಾ ಯುದ್ಧವನ್ನು ಆಯ್ಕೆ ಮಾಡಿ ಅಂತಾರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆಯ ಚಾರ್ಟರ್‌ನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ನಾವು ಈ ಅತಿರೇಕವನ್ನು ಪ್ರಬಲವಾಗಿ ಖಂಡಿಸುತ್ತೇವೆ.
ಸ್ಕಾಟ್‌ ಮಾರಿಸನ್‌, ಆಸ್ಪ್ರೇಲಿಯಾ ಪ್ರಧಾನಿ

ದ್ವೀಪ ದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಭಾರತ ನೆರವು: ಮೋದಿ
ಹವಾಮಾನ ಬದಲಾವಣೆಯ ಅಡ್ಡ ಪರಿಣಾಮಗಳಿಂದ ಪುಟ್ಟದ್ವೀಪ ದೇಶಗಳು ಎದುರಿಸುವ ಸಮಸ್ಯೆಯನ್ನು ನಿವಾರಿಸಲು ಅಗತ್ಯವಾದ ಮೂಲಸೌಕರ್ಯ ಕಲ್ಪಿಸುವ ಭಾರತದ ಯೋಜನೆಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌, ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಮತ್ತು ವಿಶ್ವ ಸಂಸ್ಥೆಯ ಮಹಾಪ್ರಧಾನ ಕಾರ್ಯರ್‍ದರ್ಶಿ ಆ್ಯಂಟೋನಿಯಾ ಗ್ಯುಟೆರ್ರೆಸ್‌ ಸಮ್ಮುಖದಲ್ಲಿ ಮೋದಿ ಅವರು ಐರಿಸ್‌ (ಇನಿಷಿಯೇಟಿವ್‌ ಫಾರ್‌ ದ ರಿಸಿಲಿಯಂಟ್‌ ಐಲ್ಯಾಂಡ್‌ ಸ್ಟೇಟ್ಸ್‌) ಹೆಸರಿನ ಯೋಜನೆಗೆ ಚಾಲನೆ ನೀಡಿದರು.

ಜಪಾನ್ ಪ್ರಧಾನಿಗೆ 'ಕೃಷ್ಣ ಪಂಖಿ'ಯನ್ನು ಉಡುಗೊರೆಯಾಗಿ ಕೊಟ್ಟ ಪಿಎಂ ಮೋದಿ, ವಿಶೇಷತೆ ಏನು ಗೊತ್ತಾ?

ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮೋದಿ ‘ಐರಿಸ್‌ ಯೋಜನೆ ಜಾರಿಯು ಹೊಸ ಭರವಸೆ ಮತ್ತು ಹೊಸ ವಿಶ್ವಾಸ ಮೂಡಿಸುತ್ತದೆ. ಜೊತೆಗೆ ಅತ್ಯಂತ ಅಪಾಯದ ಭೀತಿಯಲ್ಲಿರುವ ದೇಶಗಳಿಗೆ ಏನಾದರೂ ಮಾಡಿದ ತೃಪ್ತಿಯ ಭಾವನೆ ಮೂಡಿಸುತ್ತದೆ. ಮನುಕುಲಕ್ಕೆ ನಾವೆಲ್ಲರೂ ಹೊಂದಿರುವ ಸಾಮುದಾಯಿಕ ಹೊಣೆಗಾರಿಕೆ, ಜೊತೆಗೆ ಒಂದು ರೀತಿಯಲ್ಲಿ ನಮ್ಮ ತಪ್ಪಿಗೆ ಪ್ರಾಯಶ್ಚಿತ್ತದ ಅವಕಾಶ ಎಂದು ಬಣ್ಣಿಸಿದರು.

ದ್ವೀಪ ದೇಶಗಳಿಗೆ ಇಸ್ರೋ ನೆರವು:
ಇದೇ ವೇಳೆ, ಪುಟ್ಟದ್ವೀಪ ದೇಶಗಳಿಗೆ ನೆರವಾಗಲೆಂದೇ ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ವಿಶೇಷ ವಿಭಾಗವೊಂದನ್ನು ತೆರೆದಿದ್ದು, ಅದರ ಮೂಲಕ ಈ ದೇಶಗಳಿಗೆ ಚಂಡಮಾರುತ, ಹಳವದ ದ್ವೀಪಗಳ ಮೇಲೆ ಕಣ್ಗಾವಲು, ಕರಾವಳಿ ಪ್ರದೇಶಗಳ ಮೇಲಿನ ನಿಗಾ ಮೊದಲಾದ ವಿಷಯಗಳ ಕುರಿತು ಉಪಗ್ರಹ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಹಂಚಿಕೊಳ್ಳುತ್ತದೆ ಎಂದು ಹೇಳಿದರು.