Asianet Suvarna News Asianet Suvarna News

PM Modi to visit Kashmir ಏ.24 ರಂದು ಮೋದಿ ಜಮ್ಮು-ಕಾಶ್ಮೀರ ಭೇಟಿ ಸಾಧ್ಯತೆ!

  • ಕಾಶ್ಮೀರ ಬಿಸಿ ಬಿಸಿ ಚರ್ಚೆ ನಡುವೆ ಕಣಿವೆ ರಾಜ್ಯಕ್ಕೆ ಮೋದಿ
  • ಪಂಚಾಯತಿ ರಾಜ್‌ ದಿನದ ಅಂಗವಾಗಿ ಮೋದಿ ಭೇಟಿ
  • ಲವಾರು ಅಭಿವೃದ್ಧಿ ಯೋಜನೆಗಳ ಶಂಕು ಸ್ಥಾಪನೆ ಸಾಧ್ಯತೆ
     
PM Modi likely to visit Jammu and Kashmir on April 24 for occasion of Panchayati Raj Day ckm
Author
Bengaluru, First Published Mar 20, 2022, 4:41 AM IST | Last Updated Mar 20, 2022, 4:41 AM IST

ನವದೆಹಲಿ(ಮಾ.20): ಪಂಚಾಯತಿ ರಾಜ್‌ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್‌ 24 ರಂದು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ ವೇಳೆ ಅವರು ಜಮ್ಮು ಹಾಗೂ ಕಾಶ್ಮೀರದ ಪಂಚಾಯತಿ ರಾಜ್‌ ಸಂಸ್ಥೆಯ ಸದಸ್ಯರೊಂದಿಗೆ ಮಾತುಕತೆ ನಡೆಸಲಿದ್ದು, ಕೈಗಾರಿಕಾ ಹೂಡಿಕೆಗೆ ಚಾಲನೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳ ಶಂಕು ಸ್ಥಾಪನೆ ನೆರವೇರಿಸುವ ಸಾಧ್ಯತೆಗಳಿವೆ. ಬಹುಶಃ ಜಮ್ಮುವಿನಲ್ಲಿ ಸಮಾರಂಭ ನಡೆಯುವ ಸಾಧ್ಯತೆ ಇದೆ.

ಏಪ್ರಿಲ್‌ 24 ರಂದು ದೇಶದಲ್ಲಿ ಪಂಚಾಯತಿ ರಾಜ್‌ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಈ ದಿನದಂದು ಪ್ರಧಾನಿ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಪಂಚಾಯತಿ ಸದಸ್ಯರೊಂದಿಗೆ ಮಾತುಕತೆ ನಡೆಸುತ್ತಾರೆ. ಈ ಬಾರಿ ಪ್ರಧಾನಿ ಜಮ್ಮು ಹಾಗೂ ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ಜಿಲ್ಲಾ ಅಭಿವೃದ್ಧಿ ಮಂಡಳಿ, ಬ್ಲಾಕ್‌ ಅಭಿವೃದ್ಧಿ ಮಂಡಳಿ, ಪಂಚಾಯತಿಯ ಸರಪಂಚ ಹಾಗೂ ಪಂಚರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವರ್ಷವೂ ಪ್ರಧಾನಿ ಮೋದಿ ವಿಶ್ವದ ನಂ.1 ಜನಪ್ರಿಯ ನಾಯಕ

ಜಮ್ಮು ಕಾಶ್ಮೀರದಲ್ಲಿ ಮೊದಲ ಬಾರಿ 3 ಹಂತದ ಪಂಚಾಯತಿ ರಾಜ್‌ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಅಲ್ಲದೇ 2022-23ರ ಆರ್ಥಿಕ ವರ್ಷಕ್ಕಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಜಮ್ಮು ಕಾಶ್ಮೀರಕ್ಕೆ ವಾರ್ಷಿಕ ಬಜೆಟ್‌ ಘೋಷಿಸಿದ್ದು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಸಾಕಷ್ಟುಅನುದಾನ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ಭೇಟಿಯ ವೇಳೆ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ಕೈಗೊಳ್ಳುವ ಸಾಧ್ಯತೆಗಳಿವೆ.

ಈ ಮೊದಲು ಮೋದಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ ಅಕ್ಟೋಬರ್‌ 27, 2019ರಂದು ರಜೌರಿಯಲ್ಲಿ ಹಾಗೂ ನವೆಂಬರ್‌ 3, 2021ರಂದು ನೌಶೇರಾದಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು.

ಪ್ರಧಾನಿ ಮೋದಿ ಬಳಿ ವಿಭಿನ್ನ ದಕ್ಷಿಣೆ ಕೇಳಿದ ಕಾಶೀ ಪಂಡಿತರು, ಬದಲಾಗುತ್ತಾ ಕಾಶ್ಮೀರ?

ಭಾರತದಲ್ಲಿ 3.2 ಲಕ್ಷ ಕೋಟಿ ರು. ಹೂಡಿಕೆ: ಜಪಾನ್‌ ಘೋಷಣೆ
ಭಾರತದಲ್ಲಿ ಮುಂದಿನ 5 ವರ್ಷದಲ್ಲಿ 3.20 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಜಪಾನ್‌ ಪ್ರಧಾನಿ ಫ್ಯುಮಿಕೋ ಕಿಶೀದಾ ಘೋಷಿಸಿದ್ದಾರೆ. ಇದು ಎರಡೂ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟುಗಟ್ಟಿಗೊಳ್ಳುವ ದ್ಯೋತಕವಾಗಿದೆ. 14ನೇ ಭಾರತ-ಜಪಾನ್‌ ಶೃಂಗದ ಹಿನ್ನೆಲೆಯಲ್ಲಿ ಜಪಾನ್‌ ಪ್ರಧಾನಿ ಫä್ಯಮಿಯೋ ಕಿಶಿದಾ ಅವರು ಶನಿವಾರ ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಜಾಗತಿಕ ಮತ್ತು ಪ್ರಾದೇಶಿಕ ವಿಷಯ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಿ 6 ಒಪ್ಪಂದಗಳಿಗೆ ಸಹಿ ಹಾಕಿದರು.

ಈ ವೇಳೆ ಭಾರತದಲ್ಲಿ ಮುಂದಿನ 5 ವರ್ಷದಲ್ಲಿ 5 ಟ್ರಿಲಿಯನ್‌ ಯೆನ್‌ (3.20 ಲಕ್ಷ ಕೋಟಿ) ಹೂಡಿಕೆ ಮಾಡುವುದಾಗಿ ಕಿಶಿದಾ ಘೋಷಿಸಿದರು. ಜೊತೆಗೆ 300 ಬಿಲಿಯನ್‌ ಯೆನ್‌ ಸಾಲ ಮಂಜೂರಿಗೂ ಒಪ್ಪಿಗೆ ನೀಡಿದ್ದಲ್ಲದೆ, ಈಶಾನ್ಯ ಪ್ರದೇಶದ ಸುಸ್ಥಿರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಏತನ್ಮಧ್ಯೆ ಶುದ್ಧ ಇಂಧನ ಪೂರೈಕೆ ಸಂಬಂಧ ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿವೆ.2014ರಲ್ಲಿಯೂ ಜಪಾನ್‌ ಪ್ರಧಾನಿ ಶಿಂಜೋ ಅಬೆ ಭಾರತದಲ್ಲಿ 3.5 ಟ್ರಿಲಿಯನ್‌ ಯೆನ್‌ ಹೂಡಿಕೆ ಮಾಡುವುದಾಗಿ ಘೋಷಿಸಿದ್ದರು.

ಮುಕ್ತ, ಸ್ವತಂತ್ರ ಇಂಡೋ ಫೆಸಿಫಿಕ್‌:
ಪ್ರಧಾನಿ ಮೋದಿ ಜೊತೆ ಮಾತನಾಡಿದ ಕಿಶಿದಾ ಅವರು ಮುಕ್ತ ಮತ್ತು ಸ್ವತಂತ್ರ ಇಂಡೋ ಫೆಸಿಫಿಕ್‌ ರಾಷ್ಟ್ರ ನಿರ್ಮಾಣಕ್ಕಾಗಿ ಭಾರತ-ಜಪಾನ್‌ ಒಗ್ಗೂಡಿ ಕೆಲಸ ಮಾಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ಭಾರತ-ಜಪಾನ್‌ ಸಹಭಾಗಿತ್ವವು ಇಂಡೋ ಫೆಸಿಫಿಕ್‌ ಮತ್ತು ಜಾಗತಿಕ ಮಟ್ಟದಲ್ಲಿ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯನ್ನು ಪ್ರೋತ್ಸಾಹಿಸುತ್ತದೆ ಎಂದರು. ಇದೇ ವೇಳೆ ಭಾರತ ಮತ್ತು ಜಪಾನ್‌ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಸ್ಥಿರವಾದ ಇಂಧನ ಪೂರೈಕೆಯ ಮಹತ್ವವನ್ನು ಅರ್ಥಮಾಡಿಕೊಂಡಿವೆ ಎಂದೂ ಹೇಳಿದರು.

Latest Videos
Follow Us:
Download App:
  • android
  • ios