ವಿಜಯ್ ಮಲ್ಯ, ನೀರವ್ ಮೋದಿ ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರ? ಯುಕೆ ಪ್ರಧಾನಿ ಜೊತೆ ಮೋದಿ ಚರ್ಚೆ!

ಭಾರತದಿಂದ ಪರಾರಿಯಾಗಿ ಬ್ರಿಟನ‌್‌ನಲ್ಲಿ ಹಾಯಾಗಿರುವ ವಿಜಯ್ ಮಲ್ಯ ಹಾಗೂ ನೀರವ್ ಮೋದಿಗೆ ನಡುಕ ಶುರುವಾಗಿದೆ. ಕಾರಣ ಪ್ರಧಾನಿ ಮೋದಿ ಬ್ರಿಟನ್ ಪ್ರಧಾನಿ ಜೊತೆಗಿನ ಮಾತುಕತೆಯಲ್ಲಿ ಇಬ್ಬರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಚರ್ಚಿಸಿದ್ದಾರೆ.
 

PM Modu urge UK PM keir starmer to extradite Vijay Mallya Nirav modi at G20 Brazil ckm

ನವದೆಹಲಿ(ನ.20) ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಬ್ರಿಟನ್‌‌ಗೆ ಪರಾರಿಯಾಗಿರುವ ಉದ್ಯಮಿಗಳಾದ ಮಿಜಯ್ ಮಲ್ಯ ಹಾಗೂ ನೀರವ್ ಮೋದಿಗೆ ಸಂಕಷ್ಟ ಹೆಚ್ಚಾಗಿದೆ. ಇಬ್ಬರನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಯುಕೆ ಪ್ರಧಾನಿ ಕೈರ್ ಸ್ಟಾರ್ಮರ್‌ ಜೊತೆ ಚರ್ಚಿಸಿದ್ದಾರೆ. ಬ್ರಿಜಿಲ್‌ನಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಮೋದಿ ಹಾಗೂ ಕೈರ್ ಸ್ಟಾರ್ಮರ್ ಮಹತ್ವದ ಚರ್ಚೆಯಲ್ಲಿ ಮಲ್ಯ ಹಾಗೂ ನೀರವ್ ಮೋದಿ ಹಸ್ತಾಂತರ ಕುರಿತು ಮಾತನಾಡಿದ್ದಾರೆ. 

ಜಿ20 ಶೃಂಗಸಭೆಯ ಬಳಿಕ ಪ್ರತ್ಯೇಕವಾಗಿ ಕೈರ್ ಸ್ಟಾರ್ಮರ್ ಹಾಗೂ ಮೋದಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತದ ಬ್ಯಾಂಕ್‌ಗಳಿಗೆ ವಂಚಿಸಿರುವ ಆರೋಪಿಗಳನ್ನು ಭಾರತಕ್ಕೆ ಶೀಘ್ರದಲ್ಲೆ ಹಸ್ತಾಂತರಿಸಬೇಕು ಎಂದಿದ್ದಾರೆ. ಕಾನೂನು ಪ್ರಕ್ರಿಯೆ ಮುಗಿಸಿ ಆರೋಪಿಗಳನ್ನು ಭಾರತದ ವಶಕ್ಕೆ ನೀಡಬೇಕು ಎಂದು ಮಾತುಕತೆಯಲ್ಲಿ ಮೋದಿ ಸೂಚಿಸಿದ್ದಾರೆ. ಪ್ರಧಾನಿ ಮೋದಿ ಮನವಿಗೆ ಕೈರ್ ಸ್ಟಾರ್ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಮೋದಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಗೌರವ

 ವಿಜಯ್ ಮಲ್ಯ ಭಾರತದ ಬ್ಯಾಂಕ್‌ಗಳಿಗೆ ಬರೋಬ್ಬರಿ 9,000 ಕೋಟಿ ರೂಪಾಯಿ ವಂಚಿಸಿದ್ದಾರೆ. ಕಿಂಗ್‌ಫಿಶರ್ ಏರ್‌ಲೈನ್ಸ್ ಸಂಬಂಧ ಹಲುವ ಬ್ಯಾಂಕ್‌ಗಳಿಂದ ಸಾಲ ಪಡೆದ ವಿಜಯ್ ಮಲ್ಯ ಬಳಿಕ 2016ರಲ್ಲಿ ಬ್ರಿಟನ್‌ಗೆ ಪರಾರಿಯಾಗಿದ್ದಾರೆ. ವಿಜಯ್ ಮಲ್ಯ ಬಂಧನಕ್ಕೆ ಸಿದ್ದತೆ ನಡೆಯುತ್ತಿದ್ದಂತೆ ವಿದೇಶಕ್ಕೆ ಪರಾರಿಯಾಗಿದ್ದಾರೆ. ಬ್ರಿಟನ್‌ನಲ್ಲಿ ವಿಜಯ್ ಮಲ್ಯ ಕಾನೂನು ಹೋರಾಟ ನಡೆಸುತ್ತಿದ್ದಾರೆ.  ಇತ್ತ ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಮೂಲಕ ಬರೋಬ್ಬರಿ 13,000 ಕೋಟಿ ರೂಪಾಯಿ ವಂಚಿಸಿದ್ದಾರೆ. ನೀರವ್ ಮೋದಿ ಸದ್ಯ ಲಂಡನ್ ಜೈಲಿನಲ್ಲಿದ್ದಾರೆ. 

ಇತ್ತೀಚೆಗೆ ಸೆಂಟ್ರಲ್ ಬ್ಯೂರೋ ಇನ್ವೆಸ್ಟಿಗೇಶನ್(ಸಿಬಿಐ) ನಿರ್ದೇಶಕ ಪ್ರವೀಣ್ ಸೂದ್, ಯುಕೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದರು. ಬ್ರಿಟನ್ ಸೆಕ್ಯೂರಿಟಿ ಮಿನಿಸ್ಟರ್ ಡ್ಯಾನ್ ಜರ್ವಿಸ್ ಜೊತೆ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಶಸ್ತ್ರಾಸ್ತ್ರ ಪೂರೈಕೆ ಹಾಗೂ ಒಪ್ಪಂದದಲ್ಲಿ ವಂಚಿಸಿರುವ ಸಂಜಯ್ ಭಂಡಾರಿ ಹಸ್ತಾಂತರಕ್ಕೂ ಮನವಿ ಮಾಡಿದ್ದರು. 

ಪ್ರಧಾನಿ ಮೋದಿ ಹಾಗೂ ಸ್ಟಾರ್ಮರ್ ಮಾತುಕತೆಯಲ್ಲಿ ಭಾರತ ಹಾಗೂ ಬ್ರಿಟನ್ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲು ಉಭಯ ನಾಯಕರು ಮಹತ್ವ ನೀಡಿದ್ದಾರೆ. ಭಾರತೀಯ ವಿದ್ಯಾರ್ಥಿಗಳು, ಭಾರತೀಯ ಸಮುದಾಯಕ್ಕೆ ಸುರಕ್ಷತೆ ಒದಗಿಸುವುದು ಸೇರಿದಂತೆ ಹಲವು ವ್ಯಾಪಾರ ವಹಿವಾಟುಗಳ ಕುರಿತು ಮಾತುಕತೆ ನಡೆಸಿದ್ದಾರೆ.
 

Latest Videos
Follow Us:
Download App:
  • android
  • ios