Asianet Suvarna News Asianet Suvarna News

ಪ್ರಧಾನಿ ಮೋದಿಯವರ ವಿದೇಶ ಪ್ರವಾಸದ ಹಳೆ ಫೋಟೋ ವೈರಲ್‌: ಆನ್‌ಲೈನ್‌ನಲ್ಲಿ ಹೊಸ ಟ್ರೆಂಡ್

  • ಪ್ರಧಾನಿ ನರೇಂದ್ರ ಮೋದಿಯರ ಹಳೆ ಫೋಟೋ ವೈರಲ್‌
  • 30 ವರ್ಷದ ಹಿಂದೆ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ತೆಗೆದ ಫೋಟೋ
  • ಆನ್ಲೈನ್‌ನಲ್ಲಿ ಅಂದು ಇಂದು ಎಂಬ ಹೊಸ ಟ್ರೆಂಡ್ ಸೃಷ್ಟಿ
PM Modis 30 year old photo in Germany goes viral sets new trend in social media akb
Author
Bangalore, First Published May 4, 2022, 12:46 PM IST | Last Updated May 4, 2022, 12:46 PM IST

ಪ್ರಧಾನಿ ನರೇಂದ್ರ ಮೋದಿಯವರು ಪ್ರಸ್ತುತ ವಿದೇಶ ಪ್ರವಾಸದಲ್ಲಿದ್ದಾರೆ. ಫ್ರಾನ್ಸ್ ಜರ್ಮನಿ, ಡೆನ್ಮಾರ್ಕ್ ಪ್ರವಾಸದಲ್ಲಿರುವ ಪ್ರಧಾನಿ ಈಗಾಗಲೇ ಜರ್ಮನಿ ಪ್ರವಾಸವನ್ನು ಕೊನೆಗೊಳಿಸಿದ್ದಾರೆ. ಈ ಮಧ್ಯೆ ಪ್ರಧಾನಿಯವರ ಹಳೆ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಂದು ಇಂದು ಎಂಬ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ.

ಇದು 30 ವರ್ಷಗಳ ಹಿಂದೆ ಜರ್ಮನಿ ಪ್ರವಾಸ (Germany tour) ಕೈಗೊಂಡ ವೇಳೆ ಚಾರ್ಲೆಮ್ಯಾಗ್ನೆ (Charlemagne) ಪ್ರತಿಮೆಯ ಸ್ಥಳಕ್ಕೆ ಭೇಟಿ ನೀಡಿದ ವೇಳೆ ತೆಗೆಸಿಕೊಂಡ ಫೋಟೋ ಇದಾಗಿದೆ. ಇದರಲ್ಲಿ ಪ್ರಧಾನಿ ಯುವಕನಂತೆ ಕಾಣಿಸುತ್ತಿದ್ದು, ತಮ್ಮ ಸಹೋದ್ಯೋಗಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋವನ್ನು 1993 ರಲ್ಲಿ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ (Frankfurt) ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಅಲ್ಲಿ ಅವರು ಅಮೆರಿಕಾದಿಂದ ಭಾರತಕ್ಕೆ ಹಿಂದಿರುಗುತ್ತಿದ್ದ ವೇಳೆ ಅವರು ಅಲ್ಲಿ ಸ್ವಲ್ಪ ಸಮಯದವರೆಗೆ ತಂಗಿದ್ದರು. ಆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇವಲ ಬಿಜೆಪಿ ಕಾರ್ಯಕರ್ತರಾಗಿದ್ದರು. ವೈರಲ್ ಫೋಟೋವೋ (viral image) ಸಾಮಾಜಿಕ ಮಾಧ್ಯಮದಲ್ಲಿ 'ಅಂದು ಮತ್ತು ಇಂದು' ಎಂಬ ಟ್ರೆಂಡ್ ಅನ್ನು  ಸೃಷ್ಟಿ ಮಾಡಿದೆ.

26ನೇ ವಿದೇಶ ಪ್ರವಾಸಕ್ಕೆ ಕೇರಳ ಟೀ ಅಂಗಡಿ ವೃದ್ಧ ದಂಪತಿ ಸಜ್ಜು!

ಇತ್ತ ಪ್ರಧಾನಿ ನರೇಂದ್ರ ಮೋದಿ ಮೂರು ರಾಷ್ಟ್ರಗಳ ಯುರೋಪ್ ಪ್ರವಾಸದ ಎರಡನೇ ಹಂತದಲ್ಲಿ ಡೆನ್ಮಾರ್ಕ್‌ಗೆ ಆಗಮಿಸಿದ್ದಾರೆ. ಡ್ಯಾನಿಶ್ ಪ್ರಧಾನಿ (Danish Prime Minister)  ಫ್ರೆಡ್ರಿಕ್ಸನ್ (Frederiksen) ಅವರು ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು. ಈಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ 'ಕೋಪನ್‌ಹೇಗನ್‌ಗೆ (Copenhagen) ಬಂದಿಳಿದೆ. ಆತ್ಮೀಯ ಸ್ವಾಗತಕ್ಕಾಗಿ ಪಿಎಂ ಫ್ರೆಡೆರಿಕ್ಸೆನ್ ಅವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಅವರು ಜರ್ಮನಿಯಿಂದ ಆಗಮಿಸಿದರು ಅಲ್ಲಿ ಅವರು ಜರ್ಮನ್ ಚಾನ್ಸೆಲರ್ (German Chancellor) ಓಲಾಫ್ ಸ್ಕೋಲ್ಜ್ (Olaf Scholz) ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಮೋದಿ 3 ದಿನ ವಿದೇಶ ಪ್ರವಾಸ: ಜರ್ಮನಿ, ಡೆನ್ಮಾರ್ಕ್, ಫ್ರಾನ್ಸ್‌ಗೆ ಮೋದಿ ಭೇಟಿ!
 

ಪ್ರಧಾನಿ ಮೋದಿ ಅವರು ಡೆನ್ಮಾರ್ಕ್‌ಗೆ ಇದೇ ಮೊದಲು ಭೇಟಿ ನೀಡಿದ್ದು, ಅಲ್ಲಿ ಅವರು ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಒಪ್ಪಂದ ಹಾಗೂ ಮಾತುಕತೆಗಳಲ್ಲಿ ಭಾಗವಹಿಸಲಿದ್ದಾರೆ. ಅವರು ತಮ್ಮ ಡ್ಯಾನಿಶ್ ಸಹವರ್ತಿಯೊಂದಿಗೆ ಮಾತುಕತೆ ನಡೆಸಲಿದ್ದಾರೆ ಮತ್ತು 2 ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. 

ಅಲ್ಲದೇ ಪ್ರಧಾನಿ ಡೆನ್ಮಾರ್ಕ್‌ನ ರಾಣಿ ಮಾರ್ಗರೇಟ್ ಅವರನ್ನು ಕೋಪನ್‌ಹೇಗನ್‌ನ ಅಮೆಲಿನ್‌ಬರ್ಗ್‌ ಅರಮನೆಯಲ್ಲಿ ಭೇಟಿಯಾದರು.

ವಿದೇಶಿ ಪ್ರವಾಸದಲ್ಲಿರುವ ಮೋದಿ ಮಂಗಳವಾರ ಡೆನ್ಮಾರ್ಕ್‌ಗೆ ಭೇಟಿ ನೀಡಿದ್ದು, ಡ್ಯಾನಿಶ್‌ ಪ್ರಧಾನಿ ಫ್ರೆಡ್ರಿಕ್‌ಸನ್‌ ಜೊತೆಗೆ ಉಕ್ರೇನಿನ ಬಿಕ್ಕಟ್ಟಿನಿಂದಾಗಿ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟು ಸೇರಿದಂತೆ ಜಾಗತಿಕ ಪರಿಣಾಮಗಳ ಬಗ್ಗೆ ಮೆರಿನಬಗ್‌ರ್‍ನಲ್ಲಿರುವ ಪ್ರಧಾನಿ ನಿವಾಸದಲ್ಲಿ ಚರ್ಚೆ ನಡೆಸಿದರು. ಉಕ್ರೇನಿನಲ್ಲಿ ನಡೆಯುತ್ತಿರುವ ನಾಗರಿಕರ ಹತ್ಯೆಯ ಬಗ್ಗೆ ತೀವ್ರ ಕಳಕಳಿ ವ್ಯಕ್ತಪಡಿಸಿದ ಮೋದಿ, ಕೂಡಲೇ ಯುದ್ಧ ವಿರಾಮವನ್ನು ಘೋಷಿಸಿ, ವಿಶ್ವಸಂಸ್ಥೆಯ ಚಾರ್ಟರ್‌ನಲ್ಲಿ ತಿಳಿಸಿದಂತೇ ಮಾತುಕತೆಯ ಬಿಕ್ಕಟ್ಟನ್ನು ಪರಿಹರಿಸಲು ಉಭಯ ದೇಶಗಳು ಮುಂದಾಗಬೇಕು. ದೇಶದ ಸಮಗ್ರತೆ, ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಕಾನೂನುಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು

Latest Videos
Follow Us:
Download App:
  • android
  • ios