ನವದೆಹಲಿ(ಫೆ.27): ದೇಶದ ಜನತನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ನಾಳೆ(ಫೆ.28) ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಮಾತನಾಡಲಿದ್ದಾರೆ. ಫೆ.28ರ ಬೆಳಗ್ಗೆ 11 ಗಂಟೆಗೆ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಮೋದಿ ಮಾತನಾಡಲಿದ್ದಾರೆ.  ಈ ಬಾರಿ ಹಲವು ವಿಚಾರಗಳ ಕುರಿತು ಮೋದಿ ಬೆಳಕು ಚೆಲ್ಲಲಿದ್ದಾರೆ. 

ಮನ್ ಕಿ ಬಾತ್ ಸುದ್ದಿ : ಕರ್ನಾಟಕದ ವೀರಭದ್ರ ಸ್ವಾಮಿ ದೇವಸ್ಥಾನ, ಯುವಬ್ರಿಗೇಡ್ ಉಲ್ಲೇಖಿಸಿದ ಮೋದಿ!

ಈ ತಿಂಗಳ ಆರಂಭದಲ್ಲಿ ಮೋದಿ, ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಕಲೆ, ಸಂಸ್ಕೃತಿ , ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದೆ, ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಳ್ಳಲು ದೇಶದ ಜನರಲ್ಲಿ ಮನವಿ ಮಾಡಿದ್ದರು. ಸಂದೇಶಗಳನ್ನು ಕತೆಗಳನ್ನು ಹಂಚಿಕೊಳ್ಳಲು ಮೋದಿ, ಟೋಲ್ ಫ್ರೀ ಸಂಖ್ಯೆಯನ್ನು ಹಂಚಿಕೊಂಡಿದ್ರು. ಈ ನಂಬರ್ ಮೂಲಕ ಇಂಗ್ಲೀಷ್ ಅಥವಾ ಹಿಂದಿ ಮೂಲಕ ರೆಕಾರ್ಡ್ ಮಾಡಲು ಅವಕಾಶ ನೀಡಲಾಗಿದೆ. 

ಇದು 74ನೇ ಮನ್ ಕಿ ಬಾತ್ ಕಾರ್ಯಕ್ರಮವಾಗಿದೆ. ಪ್ರತಿ ತಿಂಗಳ ಕೊನೆಯ ಭಾನುವಾರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಮೋದಿ ನಡೆಸಿಕೊಡುತ್ತಿದ್ದಾರೆ. ಈ ಬಾರಿ ಕೊನೆಯ ಭಾನುವಾರ, ತಿಂಗಳ ಕೊನೆಯ ದಿನವಾಗಿದೆ. ಇದೀಗ ಮೋದಿ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ದೇಶದ ಜನತೆ ಕಾತರದಿಂದ ಕಾಯುತ್ತಿದ್ದಾರೆ.