ಭ್ರಷ್ಟಾಚಾರವೇ ಅವರ ಗ್ಯಾರಂಟಿ: ಕುಟುಂಬವೇ ಮೊದಲು, ದೇಶ ಲೆಕ್ಕಕ್ಕಿಲ್ಲ; ವಿಪಕ್ಷ ಸಭೆಗೆ ಮೋದಿ ಕೆಂಡಾಮಂಡಲ

ಪ್ರತಿಪಕ್ಷಗಳಿಗೆ ತಮ್ಮ ಗಮನ ಕುಟುಂಬವಾಗಿದೆಯೇ ಹೊರತು ರಾಷ್ಟ್ರವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. 

family first, nation nothing pm modi s all out attack on opposition ash

ನವದೆಹಲಿ (ಜುಲೈ 18, 2023): ಇಂದು ವಿಪಕ್ಷ ಒಕ್ಕೂಟಗಳ ಮಹಾಘಟಬಂಧನ ಸಭೆ ನಡೆಯುತ್ತಿರುವ ನಡುವೆಯೇ ಪ್ರಧಾನಿ ಮೋದಿ ಇಂದು ವಿಪಕ್ಷಗಳ ಸಭೆಗೆ ವಾಗ್ದಾಳಿ ನಡೆಸಿದ್ದಾರೆ. ಪ್ರತಿಪಕ್ಷಗಳಿಗೆ ತಮ್ಮ ಗಮನ ಕುಟುಂಬವಾಗಿದೆಯೇ ಹೊರತು ರಾಷ್ಟ್ರವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. 

"ಅವರಿಗೆ ಕುಟುಂಬವೇ ಮೊದಲು, ರಾಷ್ಟ್ರ ಲೆಕ್ಕಕ್ಕಿಲ್ಲ. ಭ್ರಷ್ಟಾಚಾರವೇ ಅವರ ಪ್ರೇರಣೆ. ಹಗರಣ ದೊಡ್ಡದಾದಷ್ಟು, ಭ್ರಷ್ಟಾಚಾರ ದೊಡ್ಡದಾದಷ್ಟೂ ಅವರಿಗೆ ಟೇಬಲ್‌ನಲ್ಲಿ ಉನ್ನತ ಸ್ಥಾನ ಸಿಗುತ್ತದೆ’’ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್‌ನ ಪೋರ್ಟ್ ಬ್ಲೇರ್‌ನಲ್ಲಿ ವೀರ್ ಸಾವರ್ಕರ್ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಹೊಸ ಟರ್ಮಿನಲ್ ಅನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ಈ ರೀತಿ ಹೇಳಿದ್ದಾರೆ.

ಇದನ್ನು ಓದಿ: ಮೋದಿ ನೇತೃತ್ವದಲ್ಲಿ ಇಂದು ಎನ್‌ಡಿಎ ಸಭೆ: 38 ಪಕ್ಷ ಭಾಗಿ; ಹ್ಯಾಟ್ರಿಕ್‌ ಜಯಕ್ಕೆ ರಣತಂತ್ರ
 
ಹಾಗೂ, "ಅವರ ಮಂತ್ರ - ಕುಟುಂಬದಿಂದ ಮತ್ತು ಕುಟುಂಬಕ್ಕಾಗಿ ಹಾಗೂ ಕುಟುಂಬಕ್ಕೋಸ್ಕರ," ಎಂದೂ ಮೋದಿ ತಿಳಿಸಿದರು. ಬೆಂಗಳೂರಿನಲ್ಲಿ ಭ್ರಷ್ಟಾಚಾರದ ಸಮ್ಮೇಳನ ನಡೆಯುತ್ತಿದೆ, ಅವರ ಅಂಗಡಿಯಲ್ಲಿ ಜಾತೀಯತೆಯೇ ತುಂಬಿಕೊಂಡಿದೆ. ದ್ವೇಷ, ಭ್ರಷ್ಟಚಾರ ಮಾತ್ರವೇ ಅವರಿಗೆ ಬೇಕಿರುವುದು ಎಂದೂ ಪ್ರಧಾನಿ ಮೋದಿ ಟೀಕೆ ಮಾಡಿದ್ದಾರೆ. ನಾವು ಪ್ರೀತಿಯ ಅಂಗಡಿ ತೆರೆದಿದ್ದೇವೆ ಎಂದು ರಾಹುಲ್‌ ಗಾಂಧಿ ಹಾಗೂ ಇತರ ಕಾಂಗ್ರೆಸ್‌ ನಾಯಕರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಹೇಳಿದ್ದರು. ಇದೇ ರೀತಿ, ಕಾಂಗ್ರೆಸ್‌ ಹೇಳುತ್ತಿದೆ. ಕಾಂಗ್ರೆಸ್‌ನ ಈ ಹೇಳಿಕೆಗೆ ಮೋದಿ ವ್ಯಂಗ್ಯವಾಡಿದ್ದಾರೆ.

ಅಲ್ಲದೆ, ವಿರೋಧ ಪಕ್ಷದ ಸಭೆಯಲ್ಲಿ ಜಮಾಯಿಸಿದವರು ಅವರ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಕೇಳಿದಾಗ ಅವರೆಲ್ಲರೂ ಮೌನವಾಗಿರುತ್ತಾರೆ ... ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಹಿಂಸಾಚಾರ ನಡೆದಿತ್ತು ಮತ್ತು ಅವರೆಲ್ಲರೂ ಸುಮ್ಮನಿದ್ದರು. ಕಾಂಗ್ರೆಸ್ ಮತ್ತು ಎಡಪಕ್ಷಗಳ ಕಾರ್ಯಕರ್ತರು ತಮ್ಮ ಸುರಕ್ಷತೆಗಾಗಿ ಮನವಿ ಮಾಡಿದರು.ಆದರೆ ಅವರ ನಾಯಕರು ಕಾರ್ಮಿಕರನ್ನು ಆ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಡುವಷ್ಟು ಸ್ವಾರ್ಥಿಗಳಾಗಿದ್ದಾರೆ. ತಮಿಳುನಾಡಿನಲ್ಲಿ ಈಗ ಹಲವಾರು ಭ್ರಷ್ಟಾಚಾರ ಪ್ರಕರಣಗಳು ಬಯಲಾಗುತ್ತಿವೆ ಆದರೆ ಅವರು (ವಿರೋಧ) ಈಗಾಗಲೇ ಕ್ಲೀನ್ ಚಿಟ್ ಪಡೆದಿದ್ದಾರೆ. " ಎಂದೂ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: 26 ಪ್ರತಿಪಕ್ಷಗಳಿಂದ ‘ಗೇಮ್‌ ಚೇಂಜರ್‌’ ಸಭೆ! ‘ಯುನೈಟೆಡ್‌ ವಿ ಸ್ಟ್ಯಾಂಡ್‌’ ಘೋಷವಾಕ್ಯದಡಿ ಸಮಾಲೋಚನೆ

ಸುಮಾರು 710 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಕಟ್ಟಡವು ದ್ವೀಪದ ಸಂಪರ್ಕವನ್ನು ಹೆಚ್ಚಿಸುತ್ತದೆ. ಸುಮಾರು 40,800 ಚದರ ಮೀಟರ್‌ನ ಒಟ್ಟು ನಿರ್ಮಿತ ಪ್ರದೇಶದೊಂದಿಗೆ, ಹೊಸ ಟರ್ಮಿನಲ್ ಕಟ್ಟಡವು ವಾರ್ಷಿಕವಾಗಿ ಸುಮಾರು 50 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ: ಇಂದು ಕೇಂದ್ರ ವಿಪಕ್ಷಗಳ ಒಕ್ಕೂಟದ ಎರಡನೇ ಸಭೆ: ಮೀಟಿಂಗ್‌ನಲ್ಲಿ ಈ 6 ವಿಚಾರಗಳ ಚರ್ಚೆ; ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್‌..

Latest Videos
Follow Us:
Download App:
  • android
  • ios