ವರ್ಕ್ ಫ್ರಮ್ ಹೋಮ್, ವಿದೇಶದಲ್ಲಿ ಮದುವೆ ಬೇಡ, ವಿದೇಶ ಯಾತ್ರೆ ಕಡಿತ, ಮನೆಯಿಂದ ಕೆಲಸ, ಇವಿ ವಾಹನ ಬಳಕೆ, ಅನಗತ್ಯ ಚಿನ್ನ ಖರೀದಿ ಬೇಡ ಸೇರಿದಂತೆ ಈ ಒಂದು ವರ್ಷ 8 ಸೂತ್ರ ಅನುಸರಿಸಲು ಸೂಚಿಸಿದ್ದಾರೆ.

ನವದೆಹಲಿ (ಮೇ.10) ಯುದ್ಧಗಳಿಂದ ಭಾರತ ಸೇರಿದಂತೆ ವಿಶ್ವದಲ್ಲೇ ಅನಿಲ, ಇಂಧನ ಕೊರತೆ ಎದುರಾಗಿದೆ. ಯುದ್ಧ ಕಾರ್ಮೋಡದಲ್ಲಿ ಸರಬರಾಜು ನಿಂತಿದೆ. ಇದರ ಪರಿಣಾಮ ಬೆಲೆ ಏರಿಕೆ ತೀವ್ರಗೊಂಡಿದೆ. ಇದು ಭಾರತದ ಆರ್ಥಿಕ ನೀತಿ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಹೀಗಾಗಿ ಭಾರತೀಯರು ಜೀವನ ಶೈಲಿಯಲ್ಲಿ ಮಹತ್ತರ ಬದಲಾವಣೆ ಮಾಡಲು ಪ್ರಧಾನಿ ಮೋದಿ ಸೂಚಿಸಿದ್ದಾರೆ. ದೇಶಕ್ಕಾಗಿ ತ್ಯಾಗ ಮಾಡುವುದು ಕೇವಲ ಗಡಿಯಲ್ಲಿ ಮಾತ್ರವಲ್ಲ, ನಾಗರೀಕರಾಗಿ ದೇಶದ ಅಗತ್ಯ ಅರಿತುಕೊಂಡು ಕೆಲ ತ್ಯಾಗ ಮಾಡಲು ಮೋದಿ ಸೂಚಿಸಿದ್ದಾರೆ. ಇಂಧನ, ವಿದೇಶಿ ವಿನಿಮಯ ಸಮಸ್ಯೆಗಳ ಪರಿಹರಿಸಲು ಮೋದಿ 8 ಸೂತ್ರ ಅನುಸರಿಸಲು ಸೂಚಿಸಿದ್ದಾರೆ.

Add Asianetnews Kannada as a Preferred SourcegooglePreferred

ಬೆಲೆ ಏರಿಕೆ ನಿಯಂತ್ರಣಕ್ಕೆ ಮೋದಿ ಸೂಚನೆ

ವಿದೇಶಿ ವಿನಿಮಯ ಉಳಿಸಲು ಹಾಗೂ ಇಂಧನ ಮೇಲಿನ ಅವಲಂಬನೆ ಕಡಿಮೆ ಮಾಡಿ ಬೆಲೆ ಏರಿಕೆ ನಿಯಂತ್ರಿಸಲು ಕೆಲ ಕ್ರಮಗಳು ಅನಿವಾರ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ. ದೇಶದಲ್ಲಿ ಎದುರಾಗಿರುವ ಹಣದುಬ್ಬರ ಹಾಗೂ ಬೆಲೆ ಏರಿಕೆ ತಡೆಯಲು ಬದಲಾವಣೆಗೆ ಸೂಚಿಸಿದ್ದಾರೆ. ಪೆಟ್ರೋಲ್ ಡೀಸೆಲ್ ಬಳಕೆ ಕಡಿಮೆ ಮಾಡಲು ಸಾರಿಗೆ ವಾಹನ ಬಳಕೆ ಮಾಡಲು ಸೂಚಿಸಿದ್ದಾರೆ. ರೈಲು ಸೇವೆ, ಸಾರಿಗೆ ಬಸ್ ಸೇವೆ, ಕಾರ್ ಪುಲ್ಲಿಂಗ್ ಸೇರಿದಂತೆ ಹಲವು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ವರ್ಕ್ ಫ್ರಮ್ ಹೋಮ್‌ಗೆ ಒತ್ತು ನೀಡಿದ ಮೋದಿ

ಇದೇ ವೇಳೆ ಎಲೆಕ್ಟ್ರಿಕ್ ವಾಗನಗಳ ಬಳಕೆ ಮಾಡಲು ಮೋದಿ ಸೂಚಿಸಿದ್ದಾರೆ. ಕೋವಿಡ್ ಸಮಯದಲ್ಲಿ ಬಹುತೇಕರು ಮನೆಯಿಂದಲೇ ಕೆಲಸಕ್ಕೆ ( ವರ್ಕ್ ಫ್ರಮ್ ಹೋಮ್) ಒತ್ತು ನೀಡಿದ್ದರು. ಇದೀಗ ಇಂಧನ ಉಳಿತಾಯ ಹಾಗೂ ವಿದೇಶಿ ವಿನಿಮಯ ಉಳಿತಾಯಕ್ಕೂ ಮನೆಯಿಂದ ಕೆಲಸಕ್ಕೆ ಒತ್ತು ನೀಡುವಂತೆ ಮೋದಿ ಸೂಚಿಸಿದ್ದಾರೆ.

ವಿದೇಶದಲ್ಲಿ ಮದುವೆಗಿಂತ ಭಾರತದಲ್ಲೇ ಮದುವೆ

ವಿದೇಶದಲ್ಲಿ ಮದುವೆಯಾಗುವ ಬದಲು ಭಾರತದಲ್ಲೇ ಮದುವೆಯಾಗಲು ಮೋದಿ ಮನವಿ ಮಾಡಿದ್ದಾರೆ. ವಿದೇಶದಲ್ಲಿ ಅದ್ಧೂರಿ ವಿವಾಹ ಮಾಡುವುದರಿಂದ ದೇಶದ ಹಣ ವಿದೇಶಗಳಲ್ಲಿ ಖರ್ಚಾಗುತ್ತಿದೆ. ಇದರ ಬದಲು ವೆಡ್ ಇನ್ ಇಂಡಿಯಾಗೆ ಒತ್ತು ನೀಡಬೇಕು ಎಂದಿದ್ದಾರೆ. ಇದರಿಂದ ಸ್ಥಳೀಯ ಉದ್ಯೋಗವಕಾಶದ ಜೊತೆ ಆರ್ಥಿಕತೆಗೂ ಬಲ ನೀಡಲಿದೆ ಎಂದಿದ್ದಾರೆ.

Scroll to load tweet…

ಅನಗತ್ಯ ಚಿನ್ನ ಖರೀದಿ ಬೇಡ

ಕನಿಷ್ಠ ಒಂದು ವರ್ಷ ಭಾರತೀಯರು ಅನಗತ್ಯ ಚಿನ್ನ ಖರೀದಿಗೆ ಮಾಡುವುದು ತಪ್ಪಿಸಲು ಸೂಚಿಸಿದ್ದಾರೆ. ಅಗತ್ಯವಿಲ್ಲದ, ಅನಿವಾರ್ಯವಲ್ಲದ ಚಿನ್ನ ಖರೀದಿ ಒಂದು ವರ್ಷ ಮುಂದೂಡಿ ಎಂದಿದ್ದಾರೆ. ಭಾರತ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಈ ಆಮದು ಕಡಿಮೆ ಮಾಡಲು ಮೋದಿ ಮನವಿ ಮಾಡಿದ್ದಾರೆ.

ಅಡುಗೆ ಎಣ್ಣೆ ಬಳಕೆ ಕಡಿಮೆ ಮಾಡಿ

ಇದರ ನಡುವೆ ಮೋದಿ ಕುಟುಂಬಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ಭಾರತ ಅಡುಗೆ ಎಣ್ಣೆಗಳನ್ನು ಹೆಚ್ಚಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಇದೀಗ ಆರ್ಥಿಕ ಸಂಕಷ್ಟ ಸರಿದೂಗಿಸಲು ಅಡುಗೆ ಎಣ್ಣೆಗಳನ್ನು ಕಡಿಮೆ ಬಳಸಲು ಸೂಚಿಸಿದ್ದಾರೆ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ ಜೊತೆಗೆ ದೇಶದ ಆರ್ಥಿಕತೆಗೂ ಬಲ ಸಿಗಲಿದೆ ಎಂದಿದ್ದಾರೆ.

ಮೇಡ್ ಇಂಡಿಯಾ ಉತ್ಪನ್ನ ಬಳಕೆ

ಭಾರತೀಯರು ಭಾರತದಲ್ಲೇ ತಯಾರಾದ ಉತ್ಪನ್ನಗಳ ಬಳಕೆಗೆ ಮನವಿ ಮಾಡಿದ್ದಾರೆ. ಇದರಿಂದ ಸ್ಥಳೀಯರ ಆರ್ಥಿಕತೆ ಉತ್ತಮವಾಗಲಿದೆ. ಪ್ರತಿನಿತ್ಯ ಬಳಸುವ ವಸ್ತುಗಳಿಂದ ಹಿಡಿದು, ಶೂ, ಚಪ್ಪಲ್, ಬ್ಯಾಗ್ ಸೇರಿದಂತೆ ಪ್ರಮುಖ ವಸ್ತುಗಳಲ್ಲಿ ವಿದೇಶಿ ಬ್ರ್ಯಾಂಡ್ ಬದಲು ಸ್ಥಳೀಯ ಉತ್ತಮ ಉತ್ಪನ್ನ ಬಳಸಲು ಸೂಚಿಸಿದ್ದಾರೆ.

ರೈತರು ರಸಗೊಬ್ಬರ, ರಾಸಾಯನಿಕ ವಸ್ತುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಲು ಮೋದಿ ಸೂಚಿಸಿದ್ದಾರೆ. ಇದೇ ವೇಳೆ ಡೀಸೆಲ್ ಪಂಪ್‌ಗದಳ ಬದಲು ಸೋಲಾರ್ ಚಾಲಿತ ಪಂಪ್ ಬಳಕೆಗೆ ಸೂಚಿಸಿದ್ದಾರೆ. ಇಷ್ಟೇ ಅಲ್ಲ ವಿದೇಶಿ ಪ್ರವಾಸ ಕಡಿತಗೊಳಿಸಲು ಸೂಚಿಸದ್ದಾರೆ. ಇದರ ಬದಲು ಭಾರತದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಸೂಚಿಸಿದ್ದಾರೆ.