ಸಿಎಂ ಚಂದ್ರಬಾಬು, ಡಿಸಿಎಂ ಪವನ್ ಕಲ್ಯಾಣ್ ಮನೆಗೆ ಮೋದಿ ದಿಢೀರ್ ಭೇಟಿ, ಕಾರಣವೇನು?
ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಮೋದಿ ಹೈದರಾಬಾದ್ ಪ್ರವಾಸದ ವೇಳೆ ದಿಢೀರ್ ಆಂಧ್ರ ಸಿಎಂ ಚಂದ್ರಬಾಬು ಹಾಗೂ ಡಿಸಿಎಂ ಪವನ್ ಕಲ್ಯಾಣ್ ಮನೆಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ಭೇಟಿಗೆ ಕಾರಣವೇನು?

ಮೋದಿ ದಿಢೀರ್ ಭೇಟಿ
ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿನಲ್ಲಿ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಹಲವು ಅಭಿವೃದ್ಧಿ ಯೋಜನೆಗಳ ಕಾರ್ಯಕ್ರಮಕ್ಕಾಗಿ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದ್ದರು. ಕಾರ್ಯಕ್ರಮ ಮುಗಿಸಿದ ಬಳಿಕ ಪ್ರಧಾನಿ ಮೋದಿ ದಿಢೀರ್ ಆಂದ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಉಪ ಮುಖ್ಯಮಂತರಿ ಪವನ್ ಕಲ್ಯಾಣ್ ಮನೆಗೆ ಭೇಟಿ ನೀಡಿದ್ದಾರೆ.

ನಾಯ್ಡು ಕುಟುಂಬದ ಜೊತೆ ಕೆಲ ಹೊತ್ತು ಕಳೆದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಪ್ರವಾಸದಲ್ಲಿ ಇದೇ ಮೊದಲ ಬಾರಿಗೆ ಮನೆಗೆ ಭೇಟಿ ನೀಡಿದ್ದಾರೆ. ಚಂದ್ರಬಾಬು ನಾಯ್ದ ಮನೆಗೆ ಭೇಟಿ ನೀಡಿದ ಮೋದಿ, ಕುಟುಂಬಸ್ಥರ ಜೊತೆ ಮಾತನಾಡುತ್ತಾ ಕೆಲ ಹೊತ್ತು ಕಳೆದಿದ್ದಾರೆ. ಇದೇ ವೇಳೆ ಸಚಿವ ನಾರಾ ಲೋಕೇಶ್ ಕುಟುಂಬ ಕೂಡ ಉಪಸ್ಥಿತವಿತ್ತು.
ಪವನ್ ಕಲ್ಯಾಣ್ ಮನೆಗೆ ಮೋದಿ ಭೇಟಿ
ಇದೇ ವೇಳೆ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮನೆಗೆ ಮೋದಿ ಭೇಟಿ ನೀಡಿದ್ದಾರೆ. ಪವನ್ ಕಲ್ಯಾಣ್ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ಪವನ್ ಕಲ್ಯಾಣ್ ಕುಟುಂಬಸ್ಥರೊಂದಿಗೆ ಸಮಯ ಕಳೆದಿದ್ದಾರೆ. ಇದೇ ವೇಳೆ ಪವನ್ ಕಲ್ಯಾಣ್ ಕುಟುಂಬಸ್ಥರ ಜೊತೆ ಫೋಟೋಗೆ ಫೋಸ್ ನೀಡಿದ್ದಾರೆ.
ದಿಢೀರ್ ಭೇಟಿ ಹಿಂದಿನ ಕಾರಣವೇನು?
ಮೋದಿ ಆಗಮಿಸುತ್ತಿದ್ದಂತೆ ಪವನ್ ಕಲ್ಯಾಣ್ ಕೈಹಿಡಿದು ಮನೆಗೆ ಬರ ಮಾಡಿಕೊಂಡಿದ್ದಾರೆ. ಪವನ್ ಕಲ್ಯಾಣ್ ಇತ್ತೀಚೆಗೆ ಆರೋಗ್ಯ ಸಮಸ್ಯೆಯಿಂದ ಸರ್ಜರಿಗೆ ಒಳಗಾಗಿದ್ದರು. ಹೀಗಾಗಿ ಮೋದಿ ಮನೆಗೆ ಭೇಟಿ ನೀಡಿದ ಆರಂಭದಲ್ಲೇ ಪವನ್ ಕಲ್ಯಾಣ್ ಆರೋಗ್ಯದ ಕುರಿತು ಕೇಳಿದ್ದಾರೆ. ಪವನ್ ಕಲ್ಯಾಣ್ ಭೇಚಿ ಹಿಂದೆ ಸರ್ಜರಿ ಪ್ರಮುಖ ಕಾರಣನ್ನು ಹೇಳಲಾಗುತ್ತಿದೆ.
ಚಂದ್ರಬಾಬು ನಾಯ್ಡು ಭೇಟಿ ಕುತೂಹಲ
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮನೆಗೆ ಭೇಟಿ ನೀಡಿದರ ಹಿಂದಿನ ಕಾರಣ ಸ್ಪಷ್ಟವಿಲ್ಲ. ಆದರೆ ಈ ಎರಡೂ ಭೇಟಿಗಳು ಸೌಹಾರ್ದಯುತ ಭೇಟಿ ಎಂದು ವಿಶ್ಲೇಷಿಸಲಾಗುತ್ತದೆ. ಹೈದರಾಬಾದ್ ಕಾರ್ಯಕ್ರಮ ಮುಗಿಸಿ ಬಿಡುವಿನ ಸಮಯದಲ್ಲಿ ಮೋದಿ ಭೇಟಿ ನೀಡಿದ್ದಾರೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ
ದಕ್ಷಿಣದಲ್ಲಿ ಬಿಜೆಪಿ ಬಲವರ್ಧನೆ
ಇದೇ ವೇಳೆ ಕೆಲವರು ಮೋದಿ ದಿಢೀರ್ ಭೇಟಿ ಹಿಂದೆ ದಕ್ಷಿಣ ಭಾರತದಲ್ಲಿ ಬಿಜೆಪಿ ಬಲವರ್ಧನೆ ಮಾಡುವ ಪ್ರಯತ್ನವಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಸದ್ಯ ಈ ಭೇಟಿ ಹಿಂದೆ ವಿಶೇಷ ಉದ್ದೇಶ, ಅರ್ಥಗಳಿಲ್ಲ.
ದಕ್ಷಿಣದಲ್ಲಿ ಬಿಜೆಪಿ ಬಲವರ್ಧನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

