ನವದೆಹಲಿ( ಸೆ.18) ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಕ್ಕೆ ಶುಭಾಶಯಗಳ ಸುರಿಮಳೆಯಾಗಿದೆ.  ಜನ್ಮದಿನಕ್ಕೆ ಶುಭಾಶಯ ಕೋರಿದ ಅನೇಕರಿಗೆ ಪ್ರಧಾನಿ ಧನ್ಯವಾದ ತಿಳಿಸಿದ್ದಾರೆ.

ಆದರೆ  ನಟ, ಮಾಡೆಲ್ ಮೀಲಿಂದ್ ಸೋಮನ್ ಅವರಿಗೆ ಪ್ರಧಾನಿ ಧನ್ಯವಾದ ಹೇಳಿದ್ದು ಟ್ರೋಲ್ ಗೆ ಗುರಿಯಾಗಿದೆ. 'ಆತ್ಮೀಯ ಪ್ರಧಾನಿ ನರೇಂದ್ರ ಮೋದಿಯವರೆ ನಿಮಗೆ 70ನೇ ಜನ್ಮದಿನದ ಶುಭಾಶಯ, ಒಳ್ಳೆಯ ಆರೋಗ್ಯದ ಜತೆಗೆ ನಿಮ್ಮನ್ನು ದೇಶದ ಒಳಿತಿನ ಕೆಲಸಕ್ಕೆ ಹಚ್ಚುವ ಉತ್ತಮ ವಿರೋಧ ಪಕ್ಷವೂ  ಇರಲಿ ಎಂದು ಆಶಿಸುತ್ತೇನೆ'  ಎಂದು ಮಿಲಿಂದ್ ಬರೆದಿದ್ದರು. 

ಅಲೆಮಾರಿ ಬ್ರಹ್ಮಚಾರಿಯ ಸಾಧನೆಯ ಬದುಕು

ವ್ಯಂಗ್ಯಭರಿತವಾಗಿ ಮಿಲಿಂದ್ ಮಾಡಿದ್ದ ಟ್ವೀಟ್‌ಗೆ ಪ್ರಧಾನಿ ಧನ್ಯವಾದ ಸಲ್ಲಿಕೆ ಮಾಡಿದ್ದಾರೆ..  ಪ್ರತಿಕ್ರಿಯೆ ನೀಡಿದ ಪ್ರಧಾನಿ, ಜನ್ಮದಿನಕ್ಕೆ ಶುಭಾಶಯ ಕೋರಿದ್ದಕ್ಕೆ ಧನ್ಯವಾದ, ನಿಮ್ಮ ಹೊಸ ಆಲೋಚನೆಗೂ ಧನ್ಯವಾದ ಎಂದಿದ್ದಾರೆ.

ಕೆಲವೆ ಕ್ಷಣದಲ್ಲಿ ವೈರಲ್ ಆದ ಟ್ವೀಟ್ ಮತ್ತು ಮರುಟ್ವೀಟ್  23,100  ಲೈಕ್ ಮತ್ತು 2,400  ರಿಟ್ವೀಟ್ ಪಡೆದುಕೊಂಡಿತು. ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ  2014ರಲ್ಲಿ ದೇಶದ ಪ್ರಧಾನಿಯಾದರು.  ಪ್ರಧಾನಿಗಳೆ ನಿಮ್ಮ ಹಾಸ್ಯಪ್ರಜ್ಞೆ ಮೆಚ್ಚಲೇಬೇಕು ಎಂದು ಕೆಲವರು ಹೇಳಿದ್ದಾರೆ.