ಗೊಂಡ್ವಾನಾದ ಮಹಾರಾಣಿ ದುರ್ಗಾವತಿಗೆ ಪ್ರಧಾನಿ ಮೋದಿ ನಾಳೆ  ಗೌರವ ನಮನ ಸಲ್ಲಿಸಲಿದ್ದಾರೆ. ಸಿಕಲ್ ಸೆಲ್ ಅನೀಮಿಯಾ ಎಲಿಮಿನೇಷನ್ ಮಿಷನ್, ಗ್ರಾಮದ ಮುಖ್ಯಸ್ಥರ ಜೊತೆ ಸಂವಾದ ಸೇರಿದಂತೆ ಹಲವು ಕಾರ್ಯಕ್ರಮಗಳ ನಿಮಿತ್ತ ಮೋದಿ ಮಧ್ಯಪ್ರದೇಶಕ್ಕೆ ಬೇಟಿ ನೀಡುತ್ತಿದ್ದಾರೆ.

ನವದೆಹಲಿ(ಜೂ. 30): ಪ್ರಧಾನಿ ನರೇಂದ್ರ ಮೋದಿ ನಾಳೆ ಮಧ್ಯಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಹಲವು ಕಾರ್ಯಕ್ರಮಗಳ ನಿಮಿತ್ತ ಮಧ್ಯಪ್ರದೇಶಕ್ಕೆ ತೆರಳುತ್ತಿರವ ಮೋದಿ ಸ್ವಾಗತಕ್ಕೆ ಭರ್ಜರಿ ತಯಾರಿ ನಡೆಸಲಾಗಿದೆ. ಶೆಹಡೋಲ್‌ನಲ್ಲಿ ನಡೆಯಲಿರುವ ಸಾರ್ವಜನಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ, ರಾಷ್ಟ್ರೀಯ ಸಿಕಲ್ ಸೆಲ್ ಅನೀಮಿಯಾ ಎಲಿಮಿನೇಷನ್ ಮಿಷನ್ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಲ್ಳುತ್ತಿದ್ದಾರೆ. ಇದೇ ವೇಳೆ ಗೊಂಡ್ವಾನಾದ 16ನೇ ಶತಮಾನದ ಧೈರ್ಯಶಾಲಿ ರಾಣಿ ಮಹಾರಾಣಿ ದುರ್ಗಾವತಿಗೆ ಮೋದಿ ಗೌರವ ನಮನ ಸಲ್ಲಿಸಲಿದ್ದಾರೆ.

ಶೆಹಡೋಲ್‌ನಲ್ಲಿ ಮೋದಿ, ರಾಷ್ಟ್ರೀಯ ಸಿಕಲ್ ಸೆಲ್ ಅನೀಮಿಯಾ ಎಲಿಮಿನೇಷನ್ ಮಿಷನ್ (ರಾಷ್ಟ್ರೀಯ ಕುಡಗೋಲು ಕೋಶ(ಜೀವಕಣ) ರಕ್ತಹೀನತೆ ರೋಗ ನಿರ್ಮೂಲನಾ ಯೋಜನೆ) ಅನ್ನು ಪ್ರಾರಂಭಿಸಲಿದ್ದಾರೆ. ಹಾಗೂ, ಫಲಾನುಭವಿಗಳಿಗೆ ಕುಡಗೋಲು ಕೋಶ ವಂಶೀಯ ತಳಿ ಸ್ಥಿತಿ ಕಾರ್ಡ್ಗಳನ್ನು (ಸಿಕಲ್ ಸೆಲ್ ಜೆನೆಟಿಕ್ ಸ್ಟೇಟಸ್ ಕಾರ್ಡ್) ವಿತರಿಸಲಿದ್ದಾರೆ. 

ಪ್ರಧಾನಿ ಮೋದಿಗೆ ರಷ್ಯಾ ಅಧ್ಯಕ್ಷ ಪುಟಿನ್ ಕರೆ, ಉಕ್ರೇನ್ ಯುದ್ಧದ ಕುರಿತು ಮಹತ್ವದ ಚರ್ಚೆ!

ವಿಶೇಷವಾಗಿ ಬುಡಕಟ್ಟು ಜನರಲ್ಲಿ ಕಂಡುಬರುವ ಕುಡಗೋಲು ಕೋಶ ರೋಗದಿಂದ ಉಂಟಾಗುವ ಆರೋಗ್ಯದ ವಿವಿಧ ಸವಾಲುಗಳನ್ನು ಎದುರಿಸಿ ನಿಯಂತ್ರಿಸುವ ಗುರಿಯನ್ನು ಈ ಮಿಷನ್ ಹೊಂದಿದೆ. ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿರುವ ಕುಡಗೋಲು ಕೋಶ ರೋಗವನ್ನು 2047ರ ವೇಳೆಗೆ ಸಂಪೂರ್ಣವಾಗಿ ತೊಡೆದುಹಾಕಲು ಸರ್ಕಾರದ ಮಾಡುತ್ತಿರುವ ಪ್ರಯತ್ನಗಳಲ್ಲಿ ಈ ಯೋಜನೆಯು ನಿರ್ಣಾಯಕ ಮೈಲಿಗಲ್ಲಾಗಿದೆ. ರಾಷ್ಟ್ರೀಯ ಕುಡಗೋಲು ಕೋಶ ರಕ್ತಹೀನತೆ ನಿರ್ಮೂಲನಾ ಯೋಜನೆಯನ್ನು 2023ರ ಕೇಂದ್ರ ಬಜೆಟ್ನಲ್ಲಿ ಈಗಾಗಲೇ ಘೋಷಿಸಲಾಗಿದೆ. ಇದನ್ನು ದೇಶದಲ್ಲಿ ಅತ್ಯಧಿಕ ಕೇಂದ್ರೀಕರಿಸಲಾದ ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಅಸ್ಸಾಂ, ಉತ್ತರ ಪ್ರದೇಶ, ಕೇರಳ, ಬಿಹಾರ ಮತ್ತು ಉತ್ತರಾಖಂಡ ಮೊದಲಾದ 17 ರಾಜ್ಯಗಳ ಗುರುತಿಸಲಾದ 278 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು.

ಮಧ್ಯಪ್ರದೇಶದಲ್ಲಿ ಸುಮಾರು 3.57 ಕೋಟಿ “ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಕಾರ್ಡ್” ಗಳ ವಿತರಣೆಯನ್ನು ಪ್ರಧಾನಮಂತ್ರಿಯವರು ಪ್ರಾರಂಭಿಸಲಿದ್ದಾರೆ. ಆಯುಷ್ಮಾನ್ ಕಾರ್ಡ್ ವಿತರಣೆ ಸಮಾರಂಭವನ್ನು ರಾಜ್ಯಾದ್ಯಂತ ನಗರ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಮತ್ತು ಅಭಿವೃದ್ಧಿ ಬ್ಲಾಕ್ ಗಳಲ್ಲಿ ಆಯೋಜಿಸಲಾಗಿದೆ. ಆಯುಷ್ಮಾನ್ ಕಾರ್ಡ್ ವಿತರಣಾ ಅಭಿಯಾನವು, ಜನಕಲ್ಯಾಣ ಯೋಜನೆಗಳ 100 ಪ್ರತಿಶತದಷ್ಟು ಶುದ್ಧತ್ವವನ್ನು ಖಚಿತಪಡಿಸಿಕೊಳ್ಳಲು, ಪ್ರತಿಯೊಬ್ಬ ಫಲಾನುಭವಿಯನ್ನು ಯೋಜನೆಗಳು ತಲುಪುವ ಪ್ರಧಾನಮಂತ್ರಿಯವರ ದೂರದೃಷ್ಟಿಯನ್ನು ಸಾಕಾರಗೊಳಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ.

ದೆಹಲಿ ವಿವಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ

16 ನೇ ಶತಮಾನದ ಮಧ್ಯಭಾಗದಲ್ಲಿ ಗೊಂಡ್ವಾನಾ ಪ್ರದೇಶದ ಆಡಳಿತ ರಾಣಿಯಾಗಿದ್ದ “ಮಹಾರಾಣಿ ದುರ್ಗಾವತಿಗೆ ಮೋದಿ ಗೌರವಿಸಲಿದ್ದಾರೆ. ಮೊಘಲರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕೆಚ್ಚೆದೆಯ, ನಿರ್ಭೀತ ಮತ್ತು ಧೈರ್ಯಶಾಲಿ ಯೋಧೆ ಎಂದು ಮಹಾರಾಣಿ ದುರ್ಗಾವತಿಯವರನ್ನು ಪ್ರಧಾನಮಂತ್ರಿಯವರು ನೆನಪಿಸಿಕೊಳ್ಳಲಿದ್ದಾರೆ.

ಸಂಜೆ ಸುಮಾರು 5 ಗಂಟೆಗೆ, ಒಂದು ವಿಶಿಷ್ಟ ಉಪಕ್ರಮದ ಭಾಗವಾಗಿ ಪ್ರಧಾನಮಂತ್ರಿಯವರು ಶಹದೋಲ್ ಜಿಲ್ಲೆಯ ಪಕಾರಿಯಾ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಬುಡಕಟ್ಟು ಸಮುದಾಯದ ಮುಖಂಡರು, ಸ್ವ-ಸಹಾಯ ಗುಂಪುಗಳು, ಪಿ.ಇ.ಎಸ್.ಎ. (ಪಂಚಾಯತ್ಗಳ (ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯಿದೆ, 1996) ಸಮಿತಿಗಳು ಮತ್ತು ಗ್ರಾಮದ ಕಾಲ್ಚೆಂಡು ಆಟದ ತಂಡಗಳ ಮುಖ್ಯಸ್ಥರುಗಳೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಲಿದ್ದಾರೆ.