ಪ್ರಧಾನಿ ಮೋದಿಗೆ ರಷ್ಯಾ ಅಧ್ಯಕ್ಷ ಪುಟಿನ್ ಕರೆ, ಉಕ್ರೇನ್ ಯುದ್ಧದ ಕುರಿತು ಮಹತ್ವದ ಚರ್ಚೆ!
ರಷ್ಯಾದ ಕಾರ್ಯಕ್ರಮವೊಂದರಲ್ಲಿ ಪುಟಿನ್, ಪ್ರಧಾನಿ ಮೋದಿಯ ಮೇಕ್ ಇನ್ ಇಂಡಿಯಾವನ್ನು ಹಾಡಿ ಹೊಗಳಿದ್ದರು. ಇದೇ ವೇಳೆ ಮೋದಿ, ರಷ್ಯಾದ ಅತೀ ದೊಡ್ಡ ಗಳೆಯ ಎಂದು ಬಣ್ಣಿಸಿದ್ದರು. ಇದರ ಬೆನ್ನಲ್ಲೇ ಪುಟಿನ್, ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿ ಉಕ್ರೇನ್ ಯುದ್ಧದ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ.
ನವದೆಹಲಿ(ಜೂ.30) ಭಾರತ ಹಾಗೂ ರಷ್ಯಾ ನಡುವೆ ಹಲವು ದ್ವಿಪಕ್ಷೀಯ ಒಪ್ಪಂದಗಳಿವೆ, ವ್ಯಾಪಾರ ವಹಿವಾಟುಗಳಿವೆ. ಇದಕ್ಕೂ ಮಿಗಿಲಾದ ಗೆಳೆತನವಿದೆ. ವಿಶ್ವದ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ರಷ್ಯಾ ಇದೀಗ ಹಲವು ವಿಚಾರಗಳಿಗೆ ಭಾರತವನ್ನೇ ಅವಲಂಬಿಸುತ್ತಿದೆ. ಉಕ್ರೇನ್ ಯುದ್ಧದ ಕುರಿತು ಮಹತ್ವದ ಚರ್ಚೆಗಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದಿಢೀರ್ ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಉಕ್ರೇನ್ ಯುದ್ಧದಿಂದ ನಿರ್ಮಾಣವಾಗಿರುವ ಪರಿಸ್ಥಿತಿತಿ, ಉಕ್ರೇನ್ ಸುತ್ತಮುತ್ತಲಿನ ಪರಿಸ್ಥಿತಿ ಕುರಿತು ಮೋದಿ ಜೊತೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಮಾಸ್ಕೋದಲ್ಲಿ ಇತ್ತೀಚೆಗೆ ನಡೆದ ಸಶಸ್ತ್ರ ದಂಗೆಯನ್ನು ಹತ್ತಿಕ್ಕಿದ ರೀತಿಯನ್ನು ಪುಟಿನ್ ವಿವರಿಸಿದ್ದಾರೆ.
ರಷ್ಯಾದ ಕಾರ್ಯಕ್ರಮವೊಂದರಲ್ಲಿ ವ್ಲಾದಿಮಿರ್ ಪುಟಿನ್, ಭಾರತ ಹಾಗೂ ಪ್ರಧಾನಿ ಮೋದಿಯನ್ನು ಹೊಗಳಿದ ಬೆನ್ನಲ್ಲೇ ಇದೀಗ ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿರುವುದು ಭಾರಿ ಸಂಚಲನ ಸೃಷ್ಟಿಸಿದೆ. ಇಷ್ಟೇ ಅಲ್ಲ ರಷ್ಯಾ ಇದೀಗ ಭಾರತದ ಜೊತೆ ಅತ್ಯುತ್ತಮ ರಾಜತಾಂತ್ರಿಕ ಸಂಬಂಧ ಹೊಂದಿದೆ.
ತನ್ನ ವಿರುದ್ಧವೇ ದಂಗೆಯೆದ್ದ ಖಾಸಗಿ ಸೇನೆಗೆ ಪುಟಿನ್ ಕ್ಷಮೆ: ‘ದೇಶದ್ರೋಹಿಗಳ’ ಎದುರು ಮಂಡಿಯೂರಿದ ರಷ್ಯಾ?
ಇತ್ತೀಚೆಗೆ ಪುಟಿನ್ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಹಾಗೂ ಭಾರತವನ್ನು ಪ್ರಶಂಸಿಸಿದ್ದರು. ಮೋದಿ ಅವರನ್ನು ರಷ್ಯಾದ ಅತ್ಯಾಪ್ತ ಮಿತ್ರ ಎಂದು ಬಣ್ಣಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಬಹುವಾಗಿ ಹೊಗಳಿದ್ದಾರೆ. ಮೋದಿ ಜಾರಿಗೊಳಿಸಿದ ಈ ಯೋಜನೆ ಇದೀಗ ಭಾರತದ ಆರ್ಥಿಕತೆಯಲ್ಲಿ ಬಿಂಬಿತವಾಗಿದೆ ಎಂದು ಪುಟಿನ್ ಹೇಳಿದ್ದರು.
ಮಾಸ್ಕೋದಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪುಟಿನ್ ‘ಭಾರತದಲ್ಲಿನ ನನ್ನ ಸ್ನೇಹಿತ, ಪ್ರಧಾನಿ ನರೇಂದ್ರ ಮೋದಿ, ರಷ್ಯಾಕ್ಕೂ ಅತ್ಯಂತ ಆತ್ಮೀಯ ಸ್ನೇಹಿತ. ಕೆಲ ವರ್ಷಗಳ ಹಿಂದೆ ಅವರೊಂದು ಮೇಕ್ ಇನ್ ಇಂಡಿಯಾ ಎಂಬ ಪರಿಕಲ್ಪನೆಯನ್ನು ಮುಂದಿಟ್ಟಿದ್ದರು. ವಿದೇಶಿ ವಸ್ತುಗಳ ಮೇಲಿನ ಅವಲಂಬನೆ, ವಸ್ತುಗಳ ಆಮದಿನ ಬದಲಾಗಿ ದೇಶೀಯವಾಗಿಯೇ ತನ್ನದೇ ಆದ ಅತ್ಯಾಧುನಿಕ ವಸ್ತುಗಳ ಉತ್ಪಾದನೆ, ಸೇವೆ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಯೋಜನೆ ಅದಾಗಿತ್ತು.ಆ ಯೋಜನೆಯ ಫಲ ಇದೀಗ ಭಾರತದ ಆರ್ಥಿಕತೆ ಮೂಲಕ ಕಾಣಸಿಗುತ್ತಿದೆ. ಭಾರತದಂತೆ ನಾವು ಕೂಡಾ ದೇಶೀಯವಾಗಿ ಆಧುನಿಕ ವಸ್ತುಗಳ ಉತ್ಪಾದನೆ, ಸೇವೆ ಮತ್ತು ತಂತ್ರಜ್ಞಾನ ಅಭಿವೃದ್ಧಿಪಡಿಸುವ ಆರ್ಥಿಕತೆಯನ್ನು ಸೃಷ್ಟಿಸಬೇಕು ಎಂದು ಪುಟಿನ್ ಕರೆ ಕೊಟ್ಟಿದ್ದಾರೆ.
ಮೋದಿ ದೂರದೃಷ್ಟಿ ಫಲ ಭಾರತದ ಆರ್ಥಿಕತೆಯಲ್ಲಿ ಕಾಣುತ್ತಿದೆ: ರಷ್ಯಾ ಅಧ್ಯಕ್ಷ
ಇತ್ತೀಚೆಗೆ ರಷ್ಯಾಗೆ ವ್ಯಾಗ್ನರ್ ದಂಗೆ ತೀವ್ರ ತಲೆನೋವಾಗಿ ಪರಿಣಮಿಸಿತ್ತು. ಪರಿಸ್ಥಿತಿ ವಿಕೋಪಕ್ಕೆ ತೆರಳುವ ಮುನ್ನ ಮಾತುಕತೆ ಮೂಲಕ ದಂಗೆಯನ್ನು ಹತ್ತಿಕ್ಕಲಾಗಿದೆ. ರಷ್ಯಾ ಸೇನೆ ತನ್ನನ್ನು ಕಡೆಗಣಿಸಿದೆ ಎಂದು ಆರೋಪಿಸಿರುವ ‘ವ್ಯಾಗ್ನರ್’ ಎಂಬ ಈ ಹಿಂದಿನ ರಷ್ಯಾ ಬೆಂಬಲಿತ ಖಾಸಗಿ ಸೇನಾ ಪಡೆ, ಇದೀಗ ನೇರವಾಗಿ ರಷ್ಯಾದ ಮೇಲೆ ಸಶಸ್ತ್ರ ಬಂಡಾಯ ಘೋಷಿಸಿತ್ತು. ತೀವ್ರ ಸ್ವರೂಪ ಪಡೆದ ದಂಗೆ ಹತ್ತಿಕ್ಕಲಾಗಿತ್ತು.