Asianet Suvarna News Asianet Suvarna News

PM Modi Kedarnath visit:ನ.5ಕ್ಕೆ ಮೋದಿ ಕೇದಾರನಾಥಕ್ಕೆ ಭೇಟಿ, ಶಂಕರಾಚಾರ್ಯ ಪುತ್ಥಳಿ ಅನಾವರಣ!

  • ಪವಿತ್ರ ಕ್ಷೇತ್ರ ಕೇದಾರನಾಥಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ
  • 180 ಕೋಟಿ ರೂಪಾಯಿ ಹಲವು ಯೋಜನೆ ಉದ್ಘಾಟನೆ
  • ಶಂಕಾರಾಚಾರ್ಯ ಸಮಾಧಿ ಸ್ಥಳಕ್ಕೆ ಭೇಟಿ, ಪುತ್ಥಳಿ ಅನಾವರಣ
     
PM Modi To Visit Kedarnath inaugurate key infrastructure projects in Uttarakhand ckm
Author
Bengaluru, First Published Nov 4, 2021, 8:55 PM IST

ನವದೆಹಲಿ(ನ.04): ಯುಕೆ ಪ್ರವಾಸದಿಂದ ತವರಿಗೆ ಮರಳಿದ ಪ್ರಧಾನಿ ನರೇಂದ್ರ ಮೋದಿ(Narendra Modi) ನೇರವಾಗಿ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು(ನ.04) ನೌಶೆರಾ ಸೆಕ್ಟರ್‌ಗೆ ತೆರಳಿದ ಪ್ರಧಾನಿ ಮೋದಿ ಯೋಧರೊಂದಿಗೆ ದೀಪಾವಳಿ ಹಬ್ಬ(Diwali Festival) ಆಚರಿಸಿದ್ದಾರೆ. ಇದೀಗ ನಾಳೆ(ನ.05) ಮೋದಿ ಪವಿತ್ರ ಕೇದಾರನಾಥಕ್ಕೆ(Kedaranath) ಭೇಟಿ ನೀಡಲಿದ್ದಾರೆ.

ನಮ್ಮ ಸೈನಿಕರು ಭಾರತ ಮಾತೆಯ ರಕ್ಷಾ ಕವಚ : ಯೋಧರೊಂದಿಗೆ ಮೋದಿ ದೀಪಾವಳಿ ಸಂಭ್ರಮ!

ನವದೆಹಲಿಯಿಂದ ಪ್ರಧಾನಿ ಮೋದಿ ನಾಳೆ ಬೆಳಗ್ಗೆ 6.30ಕ್ಕೆ ಉತ್ತರಖಂಡಕ್ಕೆ(Uttarakhand) ಆಗಮಿಸಲಿದ್ದಾರೆ. ಇನ್ನು ಕೇದಾರನಾಥ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಆದಿ ಶಂಕರಾಚಾರ್ಯ( Adi Guru Shankaracharya) ಸಮಾಧಿ ಸ್ಥಳಕ್ಕೆ ತೆರಳಲಿದ್ದಾರೆ. ಸಮಾಧಿ ಸ್ಥಳದಲ್ಲಿ ಹೊಸದಾಗಿ ನಿರ್ಮಿಸಿರುವ ಆದಿ ಶಂಕರಾಚಾರ್ಯರ ಪುತ್ಥಳಿಯನ್ನು ಮೋದಿ ಅನಾವರಣ ಮಾಡಲಿದ್ದಾರೆ.

2013ರಲ್ಲಿ ಉತ್ತರಖಂಡದಲ್ಲಿ ಸಂಭವಿಸಿದ ಮಹಾ ಪ್ರವಾಹಕ್ಕೆ ಆದಿ ಶಂಕಾರಾಚಾರ್ಯ ಸಮಾಧಿ ಸ್ಥಳದಲ್ಲಿದ್ದ ಪುತ್ಥಳಿ ನಾಶವಾಗಿತ್ತು. ಈ ಪುತ್ಥಳಿಯನ್ನು ಹೊಸದಾಗಿ ನಿರ್ಮಿಸಲಾಗಿದೆ. ಈ ಪುತ್ಥಳಿಯನ್ನು ಮೋದಿ ಅನಾವರಣ ಮಾಡಲಿದ್ದಾರೆ. 

ಕೇದಾರನಾಥ ಭೇಟಿಯಲ್ಲಿ ಸಂಘಮ್ ಘಾಟ್ ಅಭಿವೃದ್ಧಿ, ಪ್ರಥಮ ಚಿಕಿತ್ಸಾ ಹಾಗೂ ಪ್ರವಾಸಿ ಸೌಲಭ್ಯ ಕೇಂದ್ರ, ಎರಡು ಅಥಿಥಿ ಗೃಹ, ಆಸ್ಪತ್ರೆ, ನಾಗರೀಕ ಸೌಕರ್ಯ ಕಟ್ಟಡ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳನ್ನು ಮೋದಿ ಉದ್ಘಾಟಿಸಲಿದ್ದಾರೆ.  ಸುಮಾರು 180 ಕೋಟಿ ರೂಪಾಯಿ ವೆಚ್ಚದ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೋದಿ ಉದ್ಘಾಟಿಸಲಿದ್ದಾರೆ.

ಜನರ ಮನೆ ಮನೆಗೆ ಹೋಗಿ ಲಸಿಕೆ ಹಾಕಿ : ಪಿಎಂ ಮೋದಿ

ಈ ಭೇಟಿಯಲ್ಲಿ, ಸರಸ್ವತಿ ಅಷ್ಠಪಥ ಕಾಮಗಾರಿಯನ್ನು ಮೋದಿ ಪರಿಶೀಲಿಸಲಿದ್ದಾರೆ. ಬೆಳಗ್ಗೆ 9.40ರ ಸುಮಾರಿಗೆ ಈಗಾಗಲೇ ಕಾಮಾಗಾರಿ ಪೂರ್ಣಗೊಳಿಸಿರುವ ಹಲವು ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಪ್ರವಾಹ ತಡೆಯಲು ನಿರ್ಮಿಸಿರುವ ಸರಸ್ವತಿ ಅಷ್ಠಪಥ ತಡೆಗೋಡೆ ಹಾಗೂ ಘಾಟ್ಸ್,  ಮಂದಾಕಿನಿ ಅಷ್ಟಪಥ ತಡೆಗೋಡೆ, ಪುರೋಹಿತರ ಮನೆ, ಮಂದಾಕಿನಿ ನದಿಯ ಗರುಡ ಚಟ್ಟಿ ಸೇತುವೆ ಸೇರಿದಂತೆ ಪೂರ್ಣಗೊಂಡಿರುವ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಮೋದಿ ಉದ್ಘಾಟಿಸಲಿದ್ದಾರೆ.

 

ಕಮಾಗಾರಿ ಪೂರ್ಣಗೊಂಡಿರುವ ಯೋಜನೆಗಳ ಪೈಕಿ ಗುರು ಆದಿ ಶಂಕಾರಾಚಾರ್ಯರ ಸಮಾಧಿ ಸ್ಥಳ ಹಾಗೂ ಪುತ್ಥಳಿ ಸೇರಿದಂತೆ ತಡೆಗೋಡೆಗಳ ಕುರಿತು ಉತ್ತರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. 

Petrol Diesel Price Drop; ಪೆಟ್ರೋಲ್ 5, ಡೀಸೆಲ್ 10 ರು. ಅಬಕಾರಿ ಸುಂಕ ಕಡಿತ

ಕೇದಾರನಾಥದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಮಾವೇಶದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಪೂರ್ಣಗೊಂಡಿರುವ ಯೋಜನೆಗಳ ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಪ್ರಧಾನಿ ಮೋದಿ ಆಗಮನದ ಹಿನ್ನಲೆಯಲ್ಲಿ ಕೇದಾರನಾಥದಲ್ಲಿ ಅಂತಿಮ ಹಂತದ ಕೆಲಸಗಳು ನಡೆಯುತ್ತಿದೆ. ಮೋದಿ ಸ್ವಾಗತಕ್ಕೂ ಭರದ ಸಿದ್ಧತೆ ನಡೆಯುತ್ತಿದೆ. 

ಕೇದಾರನಾಥ ಮಂದಿರ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಉತ್ತರಖಂಡ ಸಿಎಂ ಪುಷ್ಕರ್ ಸಿಂಗ್ ಧಮಿ ಎಲ್ಲಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದ್ದು, ಎಲ್ಲಾ ವ್ಯವಸ್ಥೆಗಳನ್ನು ಸಿಎಂ ಪರಿಶೀಲಿಸಿದ್ದಾರೆ.

ಮೋದಿ ದೀಪಾವಳಿ ಹಬ್ಬ:
ಯುಕೆ ಪ್ರವಾಸದಲ್ಲಿ ಶೃಂಗಸಭೆ, ಹವಾಮಾನ ಬದಲಾವಣೆ ಸಮಾವೇಶ ಸೇರಿದಂತೆ ಹಲವು ಸಮಾವೇಶಗಳಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ತವರಿಗೆ ಮರಳಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ತೈಲ ಬೆಲೆ ಇಳಿಕೆ ಸೇರಿದಂತೆ ಮಹತ್ವದ ಸಭೆಯಲ್ಲಿ ಪಾಲ್ಗೊಂಡು ನಿರ್ಧಾರ ಪ್ರಕಟಿಸಿದ್ದರು. ಬಳಿಕ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿನ ನೌಶೆರಾ ಸೆಕ್ಟರ್‌ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಯೋಧರ ಜೊತೆ ದೀಪಾವಳಿ ಹಬ್ಬ ಆಚರಿಸಿದ್ದಾರೆ.

ಯೋಧರಿಗೆ ಸಿಹಿ ತಿನಿಸಿದ ಮೋದಿ,  ದೀಪಾವಳಿ ಹಬ್ಬ ಆಚರಿಸಿದ್ದಾರೆ. ಮೋದಿ ಪ್ರತಿ ಭಾರಿ ಯೋದರೊಂದಿಗೆ ದೀಪಾವಳಿ ಹಬ್ಬ ಆಚರಿಸುವ ಸಂಪ್ರದಾಯ ಮುಂದುವರಿಸಿದ್ದಾರೆ. ಇದೀಗ ನಾಳೆ ಕೇದಾರನಾಥಕ್ಕೆ ತೆರಳಲಿದ್ದಾರೆ. ಈ ಮೂಲಕ ಎಂದಿನಂತೆ ತಮ್ಮ ಬಿಡುವಿಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.


 

Follow Us:
Download App:
  • android
  • ios