Asianet Suvarna News Asianet Suvarna News

PM Modi:ಭಕ್ತರ ಅನುಕೂಲಕ್ಕೆ ಪಂಢರಪುರದ 2 ಹೆದ್ದಾರಿ ನವೀಕರಣ ಕಾಮಗಾರಿಗೆ ನ.8ಕ್ಕೆ ಮೋದಿ ಶಂಕುಸ್ಥಾಪನೆ!

  • ಪಂಢರಪುರದ ಎರಡು ಹೆದ್ದಾರಿಗಳ ವಿಸ್ತರಣೆ ಕಾಮಾಗಾರಿ
  • ಸಂತ ಜ್ಞಾನೇಶ್ವರ ಮಹಾರಾಜ್ ಪಾಲ್ಖಿ, ಸಂತ ತುಕಾರಾಂ ಮಹಾರಾಜ್ ಪಾಲ್ಖಿ ಮಾರ್ಗ
  • ಮಧ್ಯಾಹ್ನ 3:30 ಗಂಟೆಗೆ ವೀಡಿಯೊ ಕಾನ್ಫರೆನ್ಸಿಂಗ್ ಮೋದಿ ಶಂಕು ಸ್ಥಾಪನೆ
PM modi to lay foundation stone of Pandharpur four lane road of Sant Palkhi Marg on Nov 8th ckm
Author
Bengaluru, First Published Nov 7, 2021, 8:36 PM IST
  • Facebook
  • Twitter
  • Whatsapp

ನವದೆಹಲಿ(ನ.07):  ದೇಶದಲ್ಲಿ ಹೆದ್ದಾರಿ ಮಾರ್ಗಗಳನ್ನು(Multiple road projects) ಮೇಲ್ದರ್ಜೆಗೆ ಏರಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ರಸ್ತೆ ಕಾಮಾಗಾರಿಯಲ್ಲಿ ದೇಶ ಹಿಂದೆಂದು ಕಾಣದಂತ ಬದಲಾವಣೆ ಕಂಡಿದೆ. ಇದೀಗ ಪಂಢರಪುರಕ್ಕೆ(Pandharpur) ತೆರಳುವ ಭಕ್ತರ ಅನುಕೂಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಎರಡು ಹೆದ್ದಾರಿ ವಿಸ್ತರಣೆ ಕಾಮಾಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

24 ಗಂಟೆಯಲ್ಲಿ 2.5 ಕಿ.ಮೀ ಚತುಷ್ಪಥ ರಸ್ತೆ ನಿರ್ಮಿಸಿ ವಿಶ್ವ ದಾಖಲೆ ಬರೆದ ಭಾರತ!

ನಾಳೆ(ನ.08) ನರೇಂದ್ರ ಮೋದಿ(Narendra Modi) ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಧ್ಯಾಹ್ನ 3:30ಕ್ಕೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಉಪಸ್ಥಿತಿಲಿರಲಿದ್ದಾರೆ. ಸಂತ ಜ್ಞಾನೇಶ್ವರ ಮಹಾರಾಜ್ ಪಾಲ್ಖಿ (NH-965)ಮಾರ್ಗದ(Sant Dnyaneshawar Maharaj Palkhi Marg)  ಐದು ವಿಭಾಗ ಹಾಗೂ ಸಂತ ತುಕಾರಾಂ ಮಹಾರಾಜ್ ಪಾಲ್ಖಿ(Sant Tukaram Maharaj Palkhi Marg) ಮಾರ್ಗದ(NH-965G) ಮೂರು ವಿಭಾಗಗಳ ರಸ್ತೆಗೆ ಶಂಕು ಸ್ಥಾಪನೆ ನೇರವೇರಿಸಲಿದ್ದಾರೆ. ಇದು ನಾಲ್ಕು ಪಥಗಳ ರಸ್ತೆಯಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. 

 

ಹೆದ್ದಾರಿಗಳ ಎರಡೂ ಬದಿಗಳಲ್ಲಿ ಜನರು ಪಾದಸಂಚಾರಕ್ಕೆ ವಾಕ್‌ವೇಗಳನ್ನು ನಿರ್ಮಿಸಲಾಗುತ್ತಿದೆ. ಇದನ್ನು ಸಂತ ಪಾಲ್ಖಿಗೆ ಅರ್ಪಿಸಲಾಗುತ್ತಿದೆ. ಈ ವಾಕ್‌ವೇ ಭಕ್ತರ ಪಾದ ಸಂಚಾರಕ್ಕೆ ಮುಕ್ತ ಹಾಗೂ ಸುರಕ್ಷಿತ ಮಾರ್ಗ ಒದಗಿಸಲಿದೆ . ಅತ್ಯುತ್ತಮ ಮಟ್ಟದ ರಸ್ತೆ ನಿರ್ಮಾಣ ಕಾರ್ಯ ಮೋದಿ ಶಂಕುಸ್ಥಾಪನೆಯೊಂದಿಗೆ ಆರಂಭಗೊಳ್ಳಲಿದೆ.

ರಾಜ್ಯದ 10,110 ಕಿ.ಮೀ ಜಿಲ್ಲಾ ರಸ್ತೆಗಳಿಗೆ ಹೆದ್ದಾರಿ ಭಾಗ್ಯ

ದೇವೇಘಾಟ್‌ನಿಂದ ಮೊಹೋಲ್‌ವರೆಗಿನ ಸಂತ  ಜ್ಞಾನೇಶ್ವರ ಮಹಾರಾಜ್ ಪಾಲ್ಖಿ ಮಾರ್ಗ ಸುಮಾರು 221 ಕಿ.ಮೀ ಚತುಷ್ಟಥ ರಸ್ತೆ ಅಭಿವೃದ್ಧಿಯಾಗಲಿದೆ. ಇನ್ನು ಪಟಾಸ್‌ನಿಂದ ತೊಂಡಲೆ-ಬೊಂಡಲೆ ವರೆಗಿನ 130 ಕಿ.ಮೀ ಸಂತ ತುಕಾರಾಂ ಮಹಾರಾಜ್ ಪಾಲ್ಖಿ ಮಾರ್ಗ ಅಭಿವೃದ್ಧಿ ಪಡಿಸಲಾಗುತ್ತದೆ. ಪಾಲ್ಖಿಗಳಿಗೆ ಮೀಸಲಾದ ವಾಕ್‌ವೇ ಸೇರಿದಂತೆ ಒಟ್ಟು ನಾಲ್ಕು ಲೇನ್ ರಸ್ತೆ ನಿರ್ಮಾಣವಾಗಲಿದೆ. NH-965 ಮಾರ್ಗದ ಅಂದಾಜು ವೆಚ್ಚ 6,690 ಕೋಟಿ ರೂಪಾಯಿ. ಇನ್ನು NH-965G ಮಾರ್ಗದ ವೆಚ್ಚ 4,400 ಕೋಟಿ ರೂಪಾಯಿ ಆಗಲಿದೆ.

ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ 223 ಕಿಲೋಮೀಟರ್ ಉದ್ದದ ಪೂರ್ಣಗೊಂಡಿರುವ ರಸ್ತೆ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಮ್ಹಾಸ್ವಾದ್ - ಪಿಲಿವ್ - ಪಂಢರಪುರ (NH 548E), ಕುರ್ದುವಾಡಿ - ಪಂಢರಪುರ (NH 965C), ಪಂಢರಪುರ - ಸಂಗೋಲಾ (NH 965C), NH 561A ನ ತೆಂಭೂರ್ನಿ-ಪಂಢರಪುರ ವಿಭಾಗ ಮತ್ತು NH 56 ರ ಪಂಢರಪುರ - ಮಂಗಳವೇಧಾ - Umadi ವಿಭಾಗ ರಸ್ತೆ ಕಾಮಾಗಾರಿ ಪೂರ್ಣಗೊಂಡಿದೆ. 1,180 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣಗೊಂಡಿರುವ ಈ ರಸ್ತೆಗಳನ್ನು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸಮರ್ಪಿಸಲಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯನ್ನು 2 ಲಕ್ಷ ಕಿಲೋಮೀಟರ್‌ಗೆ ವಿಸ್ತರಿಸುವ ಬಹುದೊಡ್ಡ ಯೋಜನೆಯನ್ನು ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಹಾಕಿಕೊಂಡಿದೆ. ಪ್ರಧಾನ ಮಂತ್ರಿ ಗತಿ ಶಕ್ತಿ ಯೋಜನೆ ಮೂಲಕ ದೇಶದಲ್ಲಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಿಸು ವ ಯೋಜನೆಗೆ ಚಾಲನೆ ನೀಡಲಾಗಿದೆ 5,500 ಕಿ.ಮೀ ಉದ್ದರ ನಾಲ್ಕು ಲೇನ್ ಹಾಗೂ 6 ಲೇನ್ ರಸ್ತೆಗಳನ್ನ ದೇಶದ ಕರಾವಳಿ ಭಾಗದಲ್ಲಿ ಅಬಿವೃದ್ಧಿ ಮಾಡಲು ಕೇಂದ್ರ ಮುಂದಾಗಿದೆ.

Follow Us:
Download App:
  • android
  • ios