Asianet Suvarna News Asianet Suvarna News

ನಗರಗಳ ರೂಪಾಂತರ ಯೋಜನೆಗೆ ಇಂದು ಮೋದಿ ಚಾಲನೆ

  • 7 ವರ್ಷಗಳ ಹಿಂದೆ ಜಾರಿಗೆ ತಂದ ಸ್ವಚ್ಛ ಭಾರತ ಹಾಗೂ ಆರು ವರ್ಷಗಳ ಹಿಂದೆ ಅನುಷ್ಠಾನಗೊಂಡ ಅಮೃತ್‌ (ಅಟಲ್‌ ಪುನರುಜ್ಜೀವನ ಹಾಗೂ ನಗರ ರೂಪಾಂತರ ಮಿಷನ್‌) ಯೋಜನೆ
  • ಯೋಜನೆಗಳ ಯಶಸ್ಸಿನಿಂದ ಉತ್ತೇಜಿತಗೊಂಡಿರುವ ಕೇಂದ್ರ ಸರ್ಕಾರ, ಈ ಎರಡೂ ಯೋಜನೆಗಳ ಎರಡನೇ ಹಂತ ಆರಂಭ
PM Modi to Launch Second Phases of Swachh Bharat Mission and amrut projects snr
Author
Bengaluru, First Published Oct 1, 2021, 8:42 AM IST

 ನವದೆಹಲಿ (ಅ.01):7 ವರ್ಷಗಳ ಹಿಂದೆ ಜಾರಿಗೆ ತಂದ ಸ್ವಚ್ಛ ಭಾರತ (swach Bharath) ಹಾಗೂ ಆರು ವರ್ಷಗಳ ಹಿಂದೆ ಅನುಷ್ಠಾನಗೊಂಡ ಅಮೃತ್‌ (ಅಟಲ್‌ ಪುನರುಜ್ಜೀವನ ಹಾಗೂ ನಗರ ರೂಪಾಂತರ ಮಿಷನ್‌) ( Urban and Atal Mission for Rejuvenation and Urban Transformation)ಯೋಜನೆಗಳ ಯಶಸ್ಸಿನಿಂದ ಉತ್ತೇಜಿತಗೊಂಡಿರುವ ಕೇಂದ್ರ ಸರ್ಕಾರ, ಈ ಎರಡೂ ಯೋಜನೆಗಳ ಎರಡನೇ ಹಂತವನ್ನು ಇಂದು ಪ್ರಾರಂಭಿಸುತ್ತಿದೆ.

ಶುಕ್ರವಾರ ಬೆಳಗ್ಗೆ 11ಕ್ಕೆ ದೆಹಲಿಯ ಡಾ. ಅಂಬೇಡ್ಕರ್‌ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆಯುವ ಸಮಾರಂಭದಲ್ಲಿ ಸ್ವಚ್ಛ ಭಾರತ ಮಿಷನ್‌- ನಗರ 2.0 ಹಾಗೂ ಅಮೃತ್‌ 2.0 ಎಂಬ ಈ ಎರಡೂ ಯೋಜನೆಗಳಿಗೂ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಚಾಲನೆ ನೀಡಲಿದ್ದಾರೆ. ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಹರ್ದೀಪ್‌ ಸಿಂಗ್‌ ಪುರಿ, ರಾಜ್ಯ ಖಾತೆ ಸಚಿವ ಕೌಶಲ್‌ ಕಿಶೋರ್‌ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಈ ಎರಡೂ ಯೋಜನೆಗಳ ಒಟ್ಟಾರೆ ವೆಚ್ಚ 4.28 ಲಕ್ಷ ಕೋಟಿ ರು.

ಗೆಹ್ಲೋಟ್‌ಗೆ ಮೋದಿ ಪ್ರಶಂಸೆ.. ಇದೆ ಅಲ್ಲವೇ ಪ್ರಜಾಪ್ರಭುತ್ವದ ಗೆಲುವು!

ಪ್ರಧಾನಿ ಮೋದಿ ಅವರ ದೂರದೃಷ್ಟಿಗೆ ಅನುಗುಣವಾಗಿ ದೇಶದ ಎಲ್ಲ ನಗರಗಳನ್ನು ಕಸಮುಕ್ತ ಮಾಡುವುದರ ಜತೆಗೆ, ಕುಡಿಯುವ ನೀರಿನ ಖಾತ್ರಿ ಒದಗಿಸುವುದು ಈ ಯೋಜನೆಗಳ ಒಟ್ಟಾರೆ ಉದ್ದೇಶ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಏನಿದು ಸ್ವಚ್ಛ ಭಾರತ ಮಿಷನ್‌- ನಗರ 2.0?

ದೇಶದ ಎಲ್ಲ ನಗರಗಳನ್ನೂ ಕಸ ಮುಕ್ತಗೊಳಿಸಿ, ಶೌಚಾಲಯ ಹಾಗೂ ಗೃಹ ಬಳಕೆಯ ನೀರನ್ನು ನಿರ್ವಹಿಸುವುದು. ಎಲ್ಲ ನಗರ ಸ್ಥಳೀಯ ಸಂಸ್ಥೆಗಳನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವುದು. ತನ್ಮೂಲಕ ನಗರ ಪ್ರದೇಶಗಳಲ್ಲಿ ಸುರಕ್ಷಿತ ನೈರ್ಮಲ್ಯ ಕನಸನ್ನು ಸಾಕಾರಗೊಳಿಸುವುದು. ಜತೆಗೆ ಘನ ತಾಜ್ಯಗಳನ್ನು ಮೂಲದಲ್ಲೇ ವಿಂಗಡಿಸುವುದಕ್ಕೆ ಒತ್ತು ನೀಡುವುದು. 3ಆರ್‌ ((reduce, reuse, recycle) ಎಂಬ ತತ್ವವನ್ನು ಬಳಸಿಕೊಳ್ಳುವುದು. ನಗರಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ಬಗೆಯ ಘನತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸುವುದು. ಯೋಜನೆಯ ಒಟ್ಟು ವೆಚ್ಚ 1.41 ಲಕ್ಷ ಕೋಟಿ ರು.

ಅಮೃತ್‌ 2.0 ಉದ್ದೇಶ ಏನು?

ದೇಶದಲ್ಲಿರುವ ಎಲ್ಲ 4700 ನಗರ ಸ್ಥಳೀಯ ಸಂಸ್ಥೆಗಳಿಗೆ 2.68 ಕೊಳಾಯಿ ಸಂಪರ್ಕ (Tap System)  ನೀಡುವ ಮೂಲಕ ಎಲ್ಲ ಮನೆಗಳಿಗೂ ನೀರು ಪೂರೈಕೆ ಗುರಿಯನ್ನು ತಲುಪುವುದು. 500 ಅಮೃತ್‌ ನಗರಗಳಲ್ಲಿ ಶೇ.100ರಷ್ಟುಒಳಚರಂಡಿ ವ್ಯವಸ್ಥೆ. ಇದಕ್ಕಾಗಿ 2.64 ಕೋಟಿ ಒಳಚರಂಡಿ ಅಥವಾ ಸೆಪ್ಟಿಕ್‌ ಸಂಪರ್ಕ ಒದಗಿಸುವುದು. ತನ್ಮೂಲಕ 10.5 ಕೋಟಿ ನಗರ ವಾಸಿಗಳಿಗೆ ಅನುಕೂಲ ಕಲ್ಪಿಸುವುದು. ಈ ಯೋಜನೆಯ ಒಟ್ಟು ವೆಚ್ಚ 2.87 ಲಕ್ಷ ಕೋಟಿ ರು.

Follow Us:
Download App:
  • android
  • ios