Asianet Suvarna News Asianet Suvarna News

ಗೆಹ್ಲೋಟ್‌ಗೆ ಮೋದಿ ಪ್ರಶಂಸೆ.. ಇದೆ ಅಲ್ಲವೇ ಪ್ರಜಾಪ್ರಭುತ್ವದ ಗೆಲುವು!

* ರಾಜಕಾರಣವೇ  ಬೇರೆ, ಸಂಬಂಧಗಳೇ ಬೇರೆ
*ಇದನ್ನೇ ಪ್ರಜಾಪ್ರಭುತ್ದವ ಯಶಸ್ಸು ಎಂದು ಕರೆಯಬಹುದು
* ರಾಜಸ್ಥಾನದ ಸಿಎಂಗೆ ಮೋದಿ ಶ್ಲಾಘನೆ
* ಅಭಿವೃದ್ಧಿಯಲ್ಲಿ ಒಟ್ಟಾಗಿ ಕೆಲಸ ಮಾಡಬೇಕು

PM Modi, Rajasthan CM Ashok Gehlot build on trust despite political differences mah
Author
Bengaluru, First Published Sep 30, 2021, 9:18 PM IST

ಜೈಪುರ/ ನವದೆಹಲಿ(ಸೆ. 30)  ರಾಜಕಾರಣವೇ ಬೇರೆ.. ಸಂಬಂಧಗಳೇ ಬೇರೆ.. ಅಭಿವೃದ್ಧಿ ಕೆಲಸಗಳನ್ನು ಹೊಗಳುವುದೇ ಬೇರೆ.  ಅದಕ್ಕೆ ಮತ್ತೊಂದು ನಿದರ್ಶನ ಸಿಕ್ಕಿದೆ.  ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್(Ashok Gehlot)  ಅವರೊಂದಿಗಿನ ಸ್ನೇಹವನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಕೊಂಡಾಡಿದ್ದಾರೆ.

ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಪೆಟ್ರೋ ಕೆಮಿಕಲ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಸಂಸ್ಥೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ  ಉದ್ಘಾಟಿಸಿದ ಪ್ರಧಾನಿ ಗೆಹ್ಲೋಟ್ ಅವರನ್ನು ಕೊಂಡಾಡಿದ್ದಾರೆ.

ನಾನು ಮೊದಲಿಗೆ ಧನ್ಯವಾದ ಹೇಳುತ್ತೇನೆ. ಇದಕ್ಕೆ ಪ್ರಜಾಪ್ರಭುತ್ವದ ಯಶಸ್ಸು ಎಂದು ಕರೆಯಬಹುದು. ನಾವು ಇಬ್ಬರೂ ಬೇರೇ ಬೇರೆ ಪಕ್ಷದವರು ..ಬೇರೆ ಬೇರೆ ಐಡಿಯಾಲಜಿಯವರು ಎಂದು ಮೋದಿ ಹೇಳಿದರು.

ಜೈಪುರಕ್ಕೆ ಇದೊಂದು ವಿಶೇಷ ಕೊಡುಗೆಯಾಗಿದೆ.  ಮೆಡಿಕಲ್ ಕಾಲೇಜುಗಳನ್ನು ಅಗತ್ಯಕ್ಕೆ ತಕ್ಕಂತೆ ಎಲ್ಲ ರಾಝ್ಯಗಳಿಗೂ ನೀಡಿಕೊಂಡು ಬರಲಾಗಿದೆ ಎಂದು ಮೋದಿ ತಿಳಿಸಿದರು.

ಕಸ ಮುಕ್ತ ನಗರಕ್ಕೆ ಕೇಂದ್ರ ಸರ್ಕಾರದ ಸಂಕಲ್ಪ

ವಿಡಿಯೋ ಕಾನ್ಫರೆನ್ಸ್ ಮೂಲಕ ಬನ್ಸಾವರ, ಸಿರೋಹಿ, ಹನುಮಾನಘರ್, ದೌಸಾ ಜಿಲ್ಲೆಗಳಲ್ಲಿ ನಾಲ್ಕು ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ  ಮೋದಿ ಹಸಿರು ನಿಶಾನೆ ತೋರಿದ್ದಾರೆ. . ಈ ವೈದ್ಯಕೀಯ ಕಾಲೇಜುಗಳು ಕೇಂದ್ರೀಯ ಅನುದಾನಿತ ಯೋಜನೆಯಲ್ಲಿ ಮಂಜೂರಾಗಿವೆ. ಈ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯು ಜಿಲ್ಲಾ ಅಥವಾ ಉಲ್ಲೇಖಿತ ಆಸ್ಪತ್ರೆಗಳೊಂದಿಗೆ ಜೊತೆಯಾಗಿ ಕಾರ್ಯ ನಿರ್ವಹಿಸಲಿವೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.

ಹಿಂದುಳಿತ ಜಿಲ್ಲೆಗಳಲ್ಲಿ ವೈದ್ಯಕೀಯ ಸೇವೆ ಒದಗಿಸುವ ಮಹತ್ವಾಕಾಂಕ್ಷೆಯ ಆದ್ಯತೆ ಮೇರೆಗೆ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಅನುದಾನದಡಿ ಮೂರು ಹಂತಗಳಲ್ಲಿ ಒಟ್ಟು 157 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.

 

Follow Us:
Download App:
  • android
  • ios