ಗುಡ್‌ ನ್ಯೂಸ್‌: ನಾಳೆ 71,000 ಮಂದಿಗೆ ಸರ್ಕಾರಿ ಉದ್ಯೋಗ ನೇಮಕಾತಿ ಪತ್ರ ನೀಡಲಿರುವ ಪ್ರಧಾನಿ ಮೋದಿ

ರೋಜಗಾರ್‌ ಮೇಳವು ಮತ್ತಷ್ಟು ಉದ್ಯೋಗ ಸೃಷ್ಟಿಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯುವಜನರಿಗೆ ಅವರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಭಾಗವಹಿಸುವಿಕೆಗೆ ಅರ್ಥಪೂರ್ಣ ಅವಕಾಶಗಳನ್ನು ಒದಗಿಸುವ ನಿರೀಕ್ಷೆಯಿದೆ ಎಂದು ಪಿಐಬಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆ ತಿಳಿಸಿದೆ.

pm modi to distribute 71000 employment letters under rozgar mela ash

ನವದೆಹಲಿ (ಏಪ್ರಿಲ್‌ 12, 2023): ಹೊಸದಾಗಿ ನೇಮಕಗೊಂಡ 71 ಸಾವಿರ ಉದ್ಯೋಗಿಗಳಿಗೆ ಏಪ್ರಿಲ್ 13ರಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಅಲ್ಲದೇ ಈ ವೇಳೆ ಅವರು ಹೊಸದಾಗಿ ನೇಮಕಗೊಂಡವರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ. 

2022ರ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಈ ಮೇಳ ಆಯೋಜಿಸಿದ್ದು, ನಂತರ ದೇಶಾದ್ಯಂತ ನಡೆದ ವಿವಿಧ ಮೇಳಗಳ ಮೂಲಕ ಇದುವರೆಗೆ 2,48,596 ಜನರಿಗೆ ಉದ್ಯೋಗದ ಪ್ರಮಾಣದ ಪತ್ರ ವಿತರಿಸಲಾಗಿದೆ. ಪ್ರಧಾನಿ ಮೋದಿ ಅವರು ಈ ನೇಮಕಾತಿ ಪತ್ರಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿತರಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಭಾರತದ ಪ್ರಧಾನ ಮಂತ್ರಿಗಾಗಿ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

ಇದನ್ನು ಓದಿ: ಹಳೆಯ ಪಾಪ ಪ್ರಾಯಶ್ಚಿತಕ್ಕೆ ಚರ್ಚ್‌ಗೆ ಹೋಗಿದ್ರೆ ಒಳ್ಳೇದು: ಮೋದಿ ವಿರುದ್ಧ ಪಿಣರಾಯಿ ವಿಜಯನ್‌ ವ್ಯಂಗ್ಯ

ಇದು ಸರ್ಕಾರ ಆಯೋಜಿಸುತ್ತಿರುವ ‘ಉದ್ಯೋಗ ಮೇಳ’ ಯೋಜನೆಯ ಭಾಗವಾಗಿದ್ದು, ಸುಮಾರು 10 ಲಕ್ಷ ಮಂದಿಗೆ ಉದ್ಯೋಗ ನೀಡಲು ಸರ್ಕಾರ ಮುಂದಾಗಿದೆ. ಈ ಉದ್ಯೋಗ ಮೇಳ ಮುಂದಿನ ತಲೆಮಾರಿಗೆ ಪರಿವರ್ತನಾಕಾರಿಯಾಗಿ ಕೆಲಸ ಮಾಡಲಿದೆ. ಅಲ್ಲದೇ ಯುವಕರು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಅರ್ಥಪೂರ್ಣ ರೀತಿಯಲ್ಲಿ ಅವರಿಗೆ ಅವಕಾಶವನ್ನು ಒದಗಿಸಲಿದೆ ಎಂದು ಕಾರ್ಯಾಲಯ ಹೇಳಿದೆ. 

ಈ ನೇಮಕಾತಿಯಡಿಯಲ್ಲಿ ಕೇಂದ್ರ ಸರ್ಕಾರದ ಉದ್ಯೋಗಗಳಾದ ರೈಲು ವ್ಯವಸ್ಥಾಪಕ, ಸ್ಟೇಶನ್‌ ಮಾಸ್ಟರ್‌, ಟಿಕೆಟ್‌ ಕ್ಲರ್ಕ್, ಇನ್ಸ್‌ಪೆಕ್ಟರ್‌, ಕಾನ್ಸ್‌ಟೇಬಲ್‌, ಸ್ಟೆನೋಗ್ರಾಫರ್‌, ಅಕೌಂಟೆಂಟ್‌, ಪೋಸ್ಟಲ್‌ ಅಸಿಸ್ಟೆಂಟ್‌, ಶಿಕ್ಷಕ ಸೇರಿದಂತೆ ಹಲವು ಹುದ್ದೆಗಳನ್ನು ನೀಡಲಾಗುತ್ತದೆ. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹೊಸದಾಗಿ ನೇಮಕಗೊಂಡವರಿಗೆ ಆನ್‌ಲೈನ್ ಓರಿಯಂಟೇಶನ್ ಕೋರ್ಸ್ ಆಗಿರುವ ‘ಕರ್ಮಯೋಗಿ ಪ್ರಾರಂಭ’ ಮೂಲಕ ತರಬೇತಿ ಪಡೆಯುವ ಅವಕಾಶವನ್ನು ಅವರು ಪಡೆಯುತ್ತಾರೆ ಎಂದು ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: ಸಂಸದ ಸ್ಥಾನದಿಂದ ತೆಗೆದು, ಪ್ರಶ್ನೆ ಕೇಳದಂತೆ ಹೆದರಿಸಲಾಗದು: ರಾಹುಲ್‌ ಗಾಂಧಿ; ನಾಳೆ ಮಾನನಷ್ಟ ಮೊಕದ್ದಮೆ ಕೇಸ್‌ ವಿಚಾರಣೆ

"ರೋಜಗಾರ್‌ ಮೇಳವು ಮತ್ತಷ್ಟು ಉದ್ಯೋಗ ಸೃಷ್ಟಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯುವಜನರಿಗೆ ಅವರ ಸಬಲೀಕರಣ ಹಾಗೂ ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಭಾಗವಹಿಸುವಿಕೆಗೆ ಅರ್ಥಪೂರ್ಣ ಅವಕಾಶಗಳನ್ನು ಒದಗಿಸುತ್ತದೆ" ಎಂದೂ ಹೇಳಿದೆ. ಪ್ರಧಾನಿ ಮೋದಿ ಅವರು ಅಕ್ಟೋಬರ್ 2022 ರಲ್ಲಿ ರೋಜ್‌ಗಾರ್ ಮೇಳವನ್ನು ಪ್ರಾರಂಭಿಸಿದರು. ಈ ನೇಮಕಾತಿ ಅಭಿಯಾನದ ಮೂಲಕ ಕೇಂದ್ರ ಸರ್ಕಾರವು ಭಾರತದಲ್ಲಿ ಯುವಕರಿಗೆ 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ರೋಜಗಾರ್‌ ಮೇಳಕ್ಕೆ ಕೇಂದ್ರೀಯ ಸಂಸ್ಥೆಗಳಾದ ಯುಪಿಎಸ್‌ಸಿ, ಸ್ಟಾಫ್ ಸೆಲೆಕ್ಷನ್ ಕಮಿಷನ್, ರೈಲ್ವೇ ನೇಮಕಾತಿ ಮಂಡಳಿ ಮತ್ತು ಇತರ ಇಲಾಖೆಗಳು ನೇಮಕಾತಿ ಮಾಡುತ್ತವೆ.

"ರೋಜಗಾರ್‌ ಮೇಳವು ಮತ್ತಷ್ಟು ಉದ್ಯೋಗ ಸೃಷ್ಟಿಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯುವಜನರಿಗೆ ಅವರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಭಾಗವಹಿಸುವಿಕೆಗೆ ಅರ್ಥಪೂರ್ಣ ಅವಕಾಶಗಳನ್ನು ಒದಗಿಸುವ ನಿರೀಕ್ಷೆಯಿದೆ" ಎಂದು ಪಿಐಬಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: ಇಸ್ರೇಲ್‌ ತಂತ್ರಾಂಶ ಬಳಸಿ ಮೋದಿ ಸರ್ಕಾರದಿಂದ ಬೇಹುಗಾರಿಕೆ: ಕಾಂಗ್ರೆಸ್‌

Latest Videos
Follow Us:
Download App:
  • android
  • ios