Asianet Suvarna News Asianet Suvarna News

ಹಳೆಯ ಪಾಪ ಪ್ರಾಯಶ್ಚಿತಕ್ಕೆ ಚರ್ಚ್‌ಗೆ ಹೋಗಿದ್ರೆ ಒಳ್ಳೇದು: ಮೋದಿ ವಿರುದ್ಧ ಪಿಣರಾಯಿ ವಿಜಯನ್‌ ವ್ಯಂಗ್ಯ

ದೇಶದ ಪ್ರಧಾನಿ ದೆಹಲಿಯ ಪ್ರಸಿದ್ಧ ಕ್ರಿಶ್ಚಿಯನ್ ಚರ್ಚ್‌ಗೆ ಭೇಟಿ ನೀಡಿದ್ದರು. ತಮ್ಮ ಹಿಂದಿನ ಪಾಪಗಳಿಗೆ ಪ್ರಾಯಶ್ಚಿತ ಮಾಡಿಕೊಂಡರೆ ಒಳ್ಳೆಯದು. ಆದರೆ ಇದು ಸಾಧ್ಯವೇ? ಒಮ್ಮೆ ರುಚಿ ಸಿಕ್ಕ ಮೇಲೆ ಹುಲಿ ತನ್ನ ನಿಲುವನ್ನು ಬದಲಿಸಬಲ್ಲದೇ?, ಬೇರೆ ದಾರಿಯಲ್ಲಿ ಸಾಗಬಲ್ಲದೇ? ಎಂದು ಪಿಣರಾಯಿ ವಿಜಯನ್ ಪ್ರಶ್ನಿಸಿದ್ದಾರೆ.

good if it was atonement for past deeds pinarayi vijayan dig at pm over church visit ash
Author
First Published Apr 12, 2023, 12:01 PM IST

ಎರ್ನಾಕುಲಂ, ಕೇರಳ (ಏಪ್ರಿಲ್ 12, 2023): ಪ್ರಧಾನಿ ಮೋದಿ ದೆಹಲಿಯ ಚರ್ಚ್‌ಗೆ ಭೇಟಿ ನೀಡಿದ್ದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವ್ಯಂಗ್ಯವಾಡಿದ್ದಾರೆ. ಸಂಘ ಪರಿವಾರದ "ಹಿಂದಿನ ಕರ್ಮಗಳಿಗೆ ಪ್ರಾಯಶ್ಚಿತ್ತವಾಗಿ" ಇದನ್ನು ಮಾಡಿದರೆ ಒಳ್ಳೆಯದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಹೇಳಿದ್ದಾರೆ. ಈಸ್ಟರ್ ಪ್ರಯುಕ್ತ ಭಾನುವಾರ ಸಂಜೆ ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ಸೇಕ್ರೆಡ್ ಹಾರ್ಟ್ ಚರ್ಚ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದರು.

ಕೇರಳದ ಅಂಗಮಾಲಿಯಲ್ಲಿ ನಡೆದ ಸಿಪಿಐಎಂ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪಿಣರಾಯಿ ವಿಜಯನ್, "ದೇಶದ ಪ್ರಧಾನಿ ದೆಹಲಿಯ ಪ್ರಸಿದ್ಧ ಕ್ರಿಶ್ಚಿಯನ್ ಚರ್ಚ್‌ಗೆ ಭೇಟಿ ನೀಡಿದ್ದರು. ತಮ್ಮ ಹಿಂದಿನ ಪಾಪಗಳಿಗೆ ಪ್ರಾಯಶ್ಚಿತ ಮಾಡಿಕೊಂಡರೆ ಒಳ್ಳೆಯದು. ಆದರೆ ಇದು ಸಾಧ್ಯವೇ? ಒಮ್ಮೆ ರುಚಿ ಸಿಕ್ಕ ಮೇಲೆ ಹುಲಿ ತನ್ನ ನಿಲುವನ್ನು ಬದಲಿಸಬಲ್ಲದೇ?, ಬೇರೆ ದಾರಿಯಲ್ಲಿ ಸಾಗಬಲ್ಲದೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನು ಓದಿ: ಸಂಸದ ಸ್ಥಾನದಿಂದ ತೆಗೆದು, ಪ್ರಶ್ನೆ ಕೇಳದಂತೆ ಹೆದರಿಸಲಾಗದು: ರಾಹುಲ್‌ ಗಾಂಧಿ; ನಾಳೆ ಮಾನನಷ್ಟ ಮೊಕದ್ದಮೆ ಕೇಸ್‌ ವಿಚಾರಣೆ

ಅಲ್ಲದೆ, "ಭಾರತೀಯ ಜನತಾ ಪಕ್ಷದ ನಾಯಕರು ಕೇರಳದ ಎಲ್ಲಾ ಚರ್ಚ್‌ಗಳಿಗೆ ಭೇಟಿ ನೀಡುತ್ತಿರುವುದು ಕಂಡುಬಂದಿದೆ. ಹಾಗಾಗಿ ಇಲ್ಲಿ ಯಾವುದೇ ಹಾನಿ ಇಲ್ಲ. ಬೇರೆ ನಿಲುವು ತೆಗೆದುಕೊಳ್ಳುವುದರಿಂದ ಯಾವುದೇ ಹಾನಿ ಇಲ್ಲ" ಎಂದೂ ಪಿಣರಾಯಿ ವಿಜಯನ್‌ ಹೇಳಿದರು. 

ಹಾಗೂ, "ಕೇರಳದ ಹೊರಗೆ ಕ್ರೈಸ್ತರ ಬೇಟೆ ನಡೆಯುತ್ತಿದೆ.  ಇಲ್ಲಿ ನೀವು (ಬಿಜೆಪಿ) ಆ ನಿಲುವು ಪಡೆಯಲು ಸಾಧ್ಯವಾಗದಿರುವುದು ಇಲ್ಲಿನ ಸಂಘ ಪರಿವಾರದ ಯಾವುದೇ ವಿಶೇಷ ಅಲ್ಪಸಂಖ್ಯಾತರ ಓಲೈಕೆಯಿಂದಲ್ಲ. ನೀವು ಕೋಮುವಾದಿ ನಿಲುವು ತಳೆದು (ಕೇರಳದಲ್ಲಿ) ಘರ್ಷಣೆ, ಕೋಮುವಾದವನ್ನು ಸೃಷ್ಟಿಸಲು ಪ್ರಯತ್ನಿಸಿದರೆ ಸರ್ಕಾರವು ದೃಢವಾದ ನಿಲುವು ತೆಗೆದುಕೊಳ್ಳುತ್ತದೆ, ಇದು ರಾಜಿಯಿಲ್ಲದ ನಿಲುವು ಎಂದೂ ಕೇರಳದಲ್ಲಿ ಸಿಎಂ ಪಿಣರಾಯಿ ವಿಜಯನ್‌ ಎಚ್ಚರಿಕೆ ನೀಡಿದ್ದಾರೆ. 

ಇದನ್ನೂ ಓದಿ; ಸೂಜಿಮೊನೆಯಷ್ಟು ಜಾಗವನ್ನೂ ಕಬಳಿಸಲಾಗದು: ಅರುಣಾಚಲ ಪ್ರದೇಶದಲ್ಲಿ ಚೀನಾ ವಿರುದ್ಧ ಅಮಿತ್‌ ಶಾ ಗುಡುಗು

300+ ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತೆ: ಅಮಿತ್‌ ಶಾ
ದಿಬ್ರೂಗಢ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ದೇಶದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಂಗಳವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ಮಾತನಾಡಿದ ಅವರು, ಈಶಾನ್ಯ ರಾಜ್ಯಗಳಲ್ಲಿರುವ 14 ಲೋಕಸಭಾ ಸ್ಥಾನಗಳಲ್ಲಿ 12ರಲ್ಲಿ ಬಿಜೆಪಿ ಜಯಗಳಿಸಲಿದೆ. ದೇಶದಲ್ಲಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿ ಅವರು ಸತತ 3ನೇ ಬಾರಿಗೆ ಪ್ರಧಾನಿಯಾಗಿ ನೇಮಕವಾಗಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಮೊದಲು ಈಶಾನ್ಯ ರಾಜ್ಯವನ್ನು ಕಾಂಗ್ರೆಸ್‌ನ ಭದ್ರಕೋಟೆ ಎಂದು ಕರೆಯಲಾಗುತ್ತಿತ್ತು. ಆದರೆ ಭಾರತ್‌ ಜೋಡೋ ಯಾತ್ರೆಯ ಬಳಿಕವೂ ಚುನಾವಣೆಯಲ್ಲಿ ಕಾಂಗ್ರೆಸ್‌ ಸಾಧನೆ ಕಳಪೆಯಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಇಸ್ರೇಲ್‌ ತಂತ್ರಾಂಶ ಬಳಸಿ ಮೋದಿ ಸರ್ಕಾರದಿಂದ ಬೇಹುಗಾರಿಕೆ: ಕಾಂಗ್ರೆಸ್‌

ಇದೇ ವೇಳೆ ಈಶಾನ್ಯದಲ್ಲಿ ಬಿಜೆಪಿಗೆ ಅಧಿಕಾರ ನೀಡಿದ ಅಸ್ಸಾಂ ಜನರಿಗೆ ಅಮಿತ್‌ ಶಾ ಧನ್ಯವಾದ ಅರ್ಪಿಸಿದರು. ರಾಹುಲ್‌ ಗಾಂಧಿ ವಿದೇಶಿ ನೆಲದಲ್ಲಿ ಭಾರತವನ್ನು ಅವಮಾನಿಸಿದ್ದಾರೆ. ಸುಳ್ಳುಗಳನ್ನು ಹೇಳುವ ಮೂಲಕ ದೇಶವನ್ನು ಅವಮಾನಿಸುವ ಕೆಲಸವನ್ನು ಅವರು ಮುಂದುವರೆಸಿದ್ದಾರೆ. ಹಾಗಾಗಿ ಇಡೀ ದೇಶದಲ್ಲಿ ಕಾಂಗ್ರೆಸ್‌ ಸಂಪೂರ್ಣವಾಗಿ ನಿರ್ನಾಮವಾಗಲಿದೆ. ಪ್ರಧಾನಿ ಮೋದಿ ಅವರ ಆರೋಗ್ಯಕ್ಕಾಗಿ ಇಡೀ ದೇಶವೇ ಪ್ರಾರ್ಥಿಸುತ್ತಿರುವಾಗ ಕಾಂಗ್ರೆಸ್‌ನ ಬೈಗುಳಗಳು ಹಾನಿ ಮಾಡುವುದಿಲ್ಲ. ಅವರು ಹೆಚ್ಚು ಬೈದಷ್ಟು, ಹೆಚ್ಚು ಕಮಲ ಅರಳುತ್ತದೆ ಎಂದು ಅವರು ಹೇಳಿದರು.

Follow Us:
Download App:
  • android
  • ios