Asianet Suvarna News Asianet Suvarna News

ಆ.9ಕ್ಕೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಉನ್ನತ ಮಟ್ಟದ ಸಭೆ!

  • ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಉನ್ನತ ಮಟ್ಟದ ಸಭೆ
  • ಆಗಸ್ಟ್ 9, ಸಂಜೆ 5.30ಕ್ಕೆ ನಡೆಯಲಿದೆ ಮಹತ್ವದ ಸಭೆ
  • ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಭದ್ರತೆ ಕುರಿತ ಚರ್ಚೆ
PM Modi to chair UNSC High Level Open Debate on Enhancing Maritime Security ckm
Author
Bengaluru, First Published Aug 8, 2021, 7:49 PM IST

ನವವದೆಹಲಿ(ಆ.08): ಸಮುದ್ರ ಭದ್ರತ ಹೆಚ್ಚಿಸುವ ಕುರಿತು ನಡೆಯಲಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ವಹಿಸಲಿದ್ದಾರೆ. ಆಗಸ್ಟ್ 9, ಸಂಜೆ 5.30ಕ್ಕೆ ವರ್ಚುವಲ್ ಮೂಲಕ ಸಭೆ ನಡೆಯಲಿದ್ದು, ಕಡಲ ಭದ್ರತೆ ಹೆಚ್ಚಳ ಹಾಗೂ ಅಂತಾರಾಷ್ಟ್ರೀಯ ಸಹಕಾರ ಕುರಿತು ಮಹತ್ವದ ಸಭೆ ನಡೆಯಲಿದೆ.

ಸ್ವದೇಶಿ ನಿರ್ಮಿತ ಯುದ್ಧ ನೌಕೆ ವಿಕ್ರಾಂತ್ ಸಂಚಾರ ಆರಂಭ; ಐತಿಹಾಸಿಕ ಕ್ಷಣ ಎಂದ ಪ್ರಧಾನಿ ಮೋದಿ!

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಹತ್ವದ ಸಭೆ ಇದಾಗಿದೆ. ಮುಕ್ತ ಚರ್ಚೆಯಲ್ಲಿ ಪ್ರಮುಖವಾಗಿ ಕಡಲ ಅಪರಾಧ ಮತ್ತು ಅಭದ್ರತೆಯನ್ನು ಪರಿಣಾಮಕಾರಿಯಾಗಿ ಎದುರಿಸುವ ಮಾರ್ಗಗಳ ಕುರಿತು ಸಭೆ ನಡೆಯಲಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯ ರಾಷ್ಟ್ರಗಳು, ವಿಶ್ವಸಂಸ್ಥೆ ಅಧಿಕಾರಿಗಳು ಹಾಗೂ ಪ್ರಮುಖ ಭದ್ರತಾ ಸಂಸ್ಥೆಗಳ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಆರ್ಟಿಕಲ್ 370 ರದ್ದು, ರಾಮ ಮಂದಿರ ಅಡಿಗಲ್ಲು, ಹಾಕಿ ಪದಕ; ಆಗಸ್ಟ್ 5ರ ಇತಿಹಾಸ ಹೇಳಿದ ಮೋದಿ!

ವಿಶ್ವಸಂಸ್ಥೆ ಸೆಕ್ಯೂರಿಟಿ ಕೌನ್ಸಿಲ್ ಸಭೆಯಲ್ಲಿ ಸಮುದ್ರ ಭದ್ರತೆ, ಕಡಲ ಭದ್ರತೆಯ ವೈವಿಧ್ಯಮಯ ಅಂಶಗಳು, ಸವಾಲುಗಳ ಕುರಿತು ಸಮಗ್ರ ಚರ್ಚೆಯಾಗಲಿದೆ. ಇದೇ ಮೊದಲ ಬಾರಿಗೆ ಸಮುದ್ರ ಮಟ್ಟದಲ್ಲಿ ಎದುರಿಸುತ್ತಿರುವ ಆಂತಕ ಪರಿಹರಿಸಲು ಗಂಭೀರ ಮಟ್ಟದ  ಚರ್ಚೆ ನಡೆಯಲಿದೆ. . ಸಾಗರ ಭದ್ರತೆಯಲ್ಲಿ ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಬೆದರಿಕೆಗಳನ್ನು ಎದುರಿಸುವಾಗ ಕಾನೂನುಬದ್ಧ ಕಡಲ ಚಟುವಟಿಕೆಗಳನ್ನು ರಕ್ಷಿಸಬೇಕು ಮತ್ತು ಬೆಂಬಲಿಸಬೇಕು. ಈ ಕುರಿತು ಚರ್ಚೆಯಾಗಲಿದೆ.

2013ರಲ್ಲೇ ಒಲಿಂಪಿಕ್ಸ್ ಭವಿಷ್ಯ ನುಡಿದಿದ್ದ ಮೋದಿ: ಸಾಕಾರಗೊಳಿಸಿದ ನೀರಜ್ ಚೋಪ್ರಾ!

ಸಿಂಧೂ ಕಣಿವೆ ನಾಗರೀಕತೆ ಕಾಲದಿಂದಲೂ ಭಾರತದ ಇತಿಹಾಸದಲ್ಲಿ ಸಮುದ್ರ ಪ್ರಮುಖ ಪಾತ್ರ ನಿರ್ವಹಿಸಿದೆ. ವ್ಯಾಪಾರ ವಹಿವಾಟು ಸೇರಿದಂತೆ ಹಲವು ಚಟುವಟಿಕೆಗಳು ಸಮುದ್ರ ಮೂಲಕವೇ ನಡೆಯುತ್ತಿತ್ತು. ನಮ್ಮ ನಾಗರೀಕತೆಯ ತತ್ವವನ್ನು ಆಧರಿಸಿ ಸಮುದ್ರಗಳನ್ನು ಶಾಂತಿ ಮತ್ತು ಸಮೃದ್ಧಿಯ ಸಂಕೇತದ ದೃಷ್ಟಿಕೋನವನ್ನು ಮೋದಿ ಮಂಡಿಸಲಿದ್ದಾರೆ. 

ಸಾಗರಗಳ ಸುಸ್ಥಿರ ಬಳಕೆಗಾಗಿ ಸಹಕಾರಿ ಕ್ರಮಗಳು, ಮತ್ತು ಈ ಪ್ರದೇಶದಲ್ಲಿ ಸುರಕ್ಷಿತ, ಸುರಕ್ಷಿತ ಮತ್ತು ಸ್ಥಿರವಾದ ಕಡಲತೀರದ ಚೌಕಟ್ಟನ್ನು ಒದಗಿಸುತ್ತದೆ. 2019 ರಲ್ಲಿ, ಪೂರ್ವ ಏಷ್ಯಾ ಶೃಂಗಸಭೆಯಲ್ಲಿ, ಈ ಉಪಕ್ರಮವನ್ನು ಇಂಡೋ-ಪೆಸಿಫಿಕ್ ಸಾಗರಗಳ ಇನಿಶಿಯೇಟಿವ್ (IPOI) ಮೂಲಕ ಕಡಲ ಪರಿಸರ ವಿಜ್ಞಾನ ಸೇರಿದಂತೆ ಸಮುದ್ರ ಭದ್ರತೆಯ ಏಳು ಸ್ತಂಭಗಳ ಮೇಲೆ ಕೇಂದ್ರೀಕರಿಸಲಾಗಿದೆ.

ಈ ಮಹತ್ವದ ಸಭೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧಿಕೃತ ವೆಬ್‌ಸೈಟ್‌ನಲ್ಲಿ ನೇರಪ್ರಸಾರವಾಗಲಿದೆ. ಇನ್ನು 5.30ಕ್ಕೆ NYT ಮೂಲಕ ವೀಕ್ಷಿಸಬಹುದು.
 

Follow Us:
Download App:
  • android
  • ios