ನಾಳೆ ಸಂಜೆ ಪ್ರಧಾನಿ ಮೋದಿ ಗುಜರಾತ್ ಭೇಟಿ, ಬಿಜೆಪಿ ಬೃಹತ್ ರ‍್ಯಾಲಿಯಲ್ಲಿ ಭಾಷಣ!
ಪ್ರಧಾನಿ ನರೇಂದ್ರ ಮೋದಿ ನಾಳೆ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಕಾರ್ಯಕ್ರಮಗಳನ್ನು ಮುಗಿಸಿ ಸಂಜೆ ಗುಜರಾತ್‌ಗೆ ಭೇಟಿ ನೀಡುತ್ತಿದ್ದಾರೆ. ಬಿಜೆಪಿ ಬೃಹತ್ ರ‍್ಯಾಲಿಯಲ್ಲಿ ಮೋದಿ ಭಾಷಣ ಮಾಡಲಿದ್ದಾರೆ.
ನವದೆಹಲಿ(ನ.18): ಪ್ರಧಾನಿ ನರೇಂದ್ರ ಮೋದಿ ನವೆಂಬರ್ 19ಕ್ಕೆ ಬಿಡುವಿಲ್ಲದೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಳೆ ಬೆಳಗ್ಗೆ ದೆಹಲಿಯಿಂದ ಅರುಣಾಚಲ ಪ್ರದೇಶಕ್ಕೆ ತೆರಳಲಿರುವ ಮೋದಿ ಎರಡು ಕಾರ್ಯಕ್ರಮಗಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಉತ್ತರ ಪ್ರದೇಶದ ವಾರಾಣಸಿಗೆ ಆಗಮಿಸಲಿದ್ದಾರೆ. ಈ ಸರ್ಕಾರಿ ಕಾರ್ಯಕ್ರಮಗಳನ್ನು ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ವಲ್ಸದ್‌ಗೆ ಆಗಮಿಸಲಿದ್ದಾರೆ. ಇಲ್ಲಿ ಬಿಜೆಪಿ ಬೃಹತ್ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಮೋದಿ ಭಾಷಣ ಮಾಡಲಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ನಾಳೆ ಸಂಜೆ ವಲ್ಸಾದ್‌ನಲ್ಲಿ ಬಿಜೆಪಿ ಪ್ರಚಾರ ಸಭೆಯನ್ನುದ್ದೇಶಿ ಮಾತನಾಡಲಿದ್ದೇನೆ. ಗುಜರಾತ್ ಜನತೆ ಬಿಜೆಪಿ ಅಭಿವೃದ್ಧಿ ಆಡಳಿತವನ್ನು ಗುಜರಾತ್ ಜನತೆ ಬೆಂಬಲಿಸುತ್ತಾರೆ. ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಪ್ರತಿಪಕ್ಷಗಳ ಗುಜರಾತ್ ವಿರೋಧಿ ಅಜೆಂಡಾವನ್ನು ಬಿಜೆಪಿ ಜನತೆ ತಿರಸ್ಕರಿಸುತ್ತಾರೆ ಎಂದು ಮೋದಿ ಟ್ವೀಟ್ ಮೂಲಕ ಹೇಳಿದ್ದಾರೆ.
ನ.19ಕ್ಕೆ ಪ್ರಧಾನಿ ಮೋದಿ ಅರುಣಾಚಲ ಪ್ರದೇಶ, ಉತ್ತರ ಪ್ರದೇಶ ಭೇಟಿ, ವಿಮಾನ ನಿಲ್ದಾಣ ಉದ್ಘಾಟನೆ!
ನಾಳೆ ಬೆಳಿಗ್ಗೆ 9.30ರ ಸುಮಾರಿಗೆ ಪ್ರಧಾನಮಂತ್ರಿಯವರು ಇಟಾನಗರದ ʻಡೋನಿ ಪೋಲೊ ವಿಮಾನ ನಿಲ್ದಾಣʼವನ್ನು ಉದ್ಘಾಟಿಸಲಿದ್ದಾರೆ ಮತ್ತು 600 ಮೆಗಾವ್ಯಾಟ್ ಸಾಮರ್ಥ್ಯದ ಕಮೆಂಗ್ ಜಲವಿದ್ಯುತ್ ಕೇಂದ್ರವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅದಾದ ಬಳಿಕ, ಅವರು ಉತ್ತರ ಪ್ರದೇಶದ ವಾರಾಣಸಿಯನ್ನು ತಲುಪಲಿದ್ದು, ಅಲ್ಲಿ ಅವರು ಮಧ್ಯಾಹ್ನ 2 ಗಂಟೆಗೆ 'ಕಾಶಿ ತಮಿಳು ಸಂಗಮಂ' ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮ ಮುಗಿಸಿ ನೇರವಾಗಿ ಗುಜರಾತ್‌ನ ವಲ್ಸದ್‌ಗೆ ತೆರಳಲಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಟಿಕೆಟ್ ಪಟ್ಟಿ
182 ಕ್ಷೇತ್ರಗಳಿರುವ ಗುಜರಾತ್ ವಿಧಾನಸಭಾ ಚುನಾವಣೆ ಸಂಬಂಧ ಬಿಜೆಪಿ 160 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಇದರಲ್ಲಿ ಇತ್ತೀಚೆಗೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಪಟೇಲ್ ಹೋರಾಟಗಾರ ಹಾರ್ದಿಕ್ ಪಟೇಲ್ ಹಾಗೂ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾಗೆ ಟಿಕೆಟ್ ಘೋಷಿಸಲಾಗಿದೆ. 160ರ ಪೈಕಿ 5 ಸಚಿವರು, 38 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಈ ಪೈಕಿ ಸ್ವತಃ ಟಿಕೆಟ್ ಬೇಡವೆಂದಿದ್ದ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ, ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಕೂಡಾ ಸೇರಿದ್ದಾರೆ.
ಮೋದಿ ಶಾಂತಿ ಮಂತ್ರಕ್ಕೆ G20 ಧ್ವನಿ: ಮ್ಯಾಂಗ್ರೋವ್ ಸಸಿ ನೆಟ್ಟ ಪ್ರಧಾನಿ ಮೋದಿ
ಇನ್ನು ಇತ್ತೀಚೆಗೆ ಸೇತುವೆ ದುರಂತದಲ್ಲಿ 135 ಜನರು ಸಾವನ್ನಪ್ಪಿದ ಮೋರ್ಬಿ ಕ್ಷೇತ್ರದ ಹಾಲಿ ಶಾಸಕ ಬೃಜೇಶ್ ಮಿರ್ಜಾ ಮತ್ತು ವಿಧಾನಸಭೆಯ ಸ್ಪೀಕರ್ ನಿಮಾಬೆನ್ ಆಚಾರ್ಯ ಮೊದಲಾದವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಟಿಕೆಟ್ ಪಡೆದ 160 ಜನರಲ್ಲಿ 69 ಹಾಲಿ ಶಾಸಕರು, 14 ಮಹಿಳೆಯರು, ಪರಿಶಿಷ್ಠ ಸಮುದಾಯಕ್ಕೆ ಸೇರಿದ 13, ಪರಿಶಿಷ್ಠ ಪಂಗಡಕ್ಕೆ ಸೇರಿದ 24 ಜನರು ಸೇರಿದ್ದಾರೆ. ಜೊತೆಗೆ ಮೊದಲ ಹಂತದ ಚುನಾವಣೆ ನಡೆಯುವ 89 ಕ್ಷೇತ್ರಗಳ ಪೈಕಿ 84 ಮತ್ತು ಎರಡನೇ ಹಂತದ ಚುನಾವಣೆ ನಡೆಯುವ 93 ಕ್ಷೇತ್ರಗಳ ಪೈಕಿ 76 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಇದೀಗ ಬಿಡುಗಡೆಯಾಗಿದೆ.